ಒಬ್ಬ ಆಧ್ಯಾತ್ಮಿಕ ಜೀವಿಯು ಜಗತ್ತಿನ ಪೂರ್ಣ ಭಾರಕ್ಕೆ ಹೆಗಲು ಕೊಡಬೇಕಾದವನು. ಅವನು ಎಂದೂ ದುರ್ಬಲನಾಗಬಾರದು; ಚುರುಕಿನ ಸಿಂಹದ ಮರಿಯಾಗಿರಬೇಕು. ____ ಗುರುವಿನಲ್ಲಿ ಪೂರ್ತಿ ವಿಶ್ವಾಸವಿರುವವನು ಗುರುವಿನಲ್ಲಿ ಒಂದು ಪ್ರಶ್ನೆಯನ್ನು ಸಹ ಕೇಳುವುದಿಲ್ಲ. ಗುರು ಹೇಳುವುದನ್ನೇ ಅನುಸರಿಸುವನು. ಅದುವೇ ಗುರುಸೇವೆ. ಶಿಷ್ಯನ ಶ್ರದ್ಧೆಯೊಡಗೂಡಿರುವ ಓಡಾಟ ನೋಡಿದಾಗ ತನಗರಿವಿಲ್ಲದೆಯೆ ಗುರು ಅವನಲ್ಲಿ ಕೃಪೆ ಸುರಿಸುತ್ತಾನೆ. ತಗ್ಗು ನೆಲದಲ್ಲಿ, ನೀರು ತನ್ನಷ್ಟಕ್ಕೆ ಹರಿದು ಸೇರುವ ಹಾಗೆ. ____ ಆಧ್ಯಾತ್ಮಿಕವೂ ಲೌಕಿಕವೂ ಜೊತೆಜೊತೆಯಾಗಿ ಹೋಗಲು ಸಾಧ್ಯವಿದೆ. ಆದರೆ, ಸಂಬಂಧಗಳ ಬಂಧನವಿಲ್ಲದೆ, ನಿಷ್ಕಾಮವಾಗಿ ಕೆಲಸ […]
Tag / ದೇವರು
ಪ್ರಶ್ನೆ: ಅಮ್ಮಾ, ಈಶ್ವರನು* ಒಬ್ಬನೇ ಎಂದಾದರೆ ಯಾಕಾಗಿ ಅವನನ್ನು ಶಿವ, ವಿಷ್ಣು ಎಂದಿತ್ಯಾದಿಯಾಗಿ ಪೂಜಿಸುತ್ತಾರೆ ? “ಮಕ್ಕಳೇ, ನಟನು ಎಷ್ಟೋ ವೇಷಗಳನ್ನು ಹಾಕುತ್ತಾನೆ. ಆದರೆ ಅವನಲ್ಲಿ ಏನೊಂದು ವ್ಯತ್ಯಾಸವೂ ಇಲ್ಲ. ಈಶ್ವರನೂ ಅದೇ ಪ್ರಕಾರ. ವಿವಿಧ ರೂಪಗಳು, ಅಲಂಕಾರಗಳು, ವೇಷಗಳು, ಹೆಸರುಗಳು – ಆದರೆ ಸತ್ಯ ಒಂದು. ಅದರ ವಿವಿಧ ಭಾಗಗಳು, ಬೇರೆಲ್ಲ. ಮನುಷ್ಯರು ಹಲವು ತರದವರು. ಸ್ವಭಾವಗಳೂ ಹಲವು. ಅವರವರ ಮನಸ್ಸಿಗೆ ಸರಿ ಹೊಂದುವ ರೂಪವನ್ನು ಹಾಗೂ ನಾಮವನ್ನು ಸ್ವೀಕರಿಸಿ ಈಶ್ವರನನ್ನು ಪ್ರಾಪ್ತಿಸುವ ಸಲುವಾಗಿ ಋಷಿಶ್ರೇಷ್ಠರು […]
ಆಕಾಶದಲ್ಲಿರುವ ಒಂದು ದೇವರನ್ನು ಕುರಿತೋ, ಪಾತಾಳದಲ್ಲ್ಲಿರುವ ಒಂದು ದೇವಿಯ ಬಗ್ಗೆಯೋ ಅಲ್ಲ ಅಮ್ಮ ಹೇಳುತ್ತಿರುವುದು. ಎಲ್ಲರಲ್ಲೂ ದೇವರಿದ್ದಾನೆ. ಆದರೆ ನೀವು ಆ ಚೈತನ್ಯವನ್ನು ದುರ್ವಿನಿಯೋಗ ಮಾಡುತ್ತಿದ್ದೀರಿ. ನೀವಿಂದು ಸೊನ್ನೆ ವ್ಯಾಟ್ಟಿನ ಬಲ್ಬಾಗಿದ್ದರೆ, ತಪಸ್ಸಿನಿಂದ ಅದನ್ನು ಸಾವಿರದ್ದನ್ನಾಗಿ ಮಾರ್ಪಡಿಸಲು ಸಾಧ್ಯವಿದೆ. ಒಬ್ಬ ಸಾಮನ್ಯ ವ್ಯಕ್ತಿ ಇಬ್ಬರನ್ನು ಪ್ರೇಮಿಸಲೂ, ಸೇವಿಸಲೂ ಸಾಧ್ಯವಾದರೆ ನಿಮಗೆ ಕೋಟಿ ಜನರನ್ನು ಪ್ರೇಮಿಸಲೂ, ಸೇವಿಸಲೂ ಸಾಧ್ಯವಿದೆ. ನಿಮ್ಮ ಶಕ್ತಿಯಲ್ಲಿ ಯಾವೊಂದು ಕೊರತೆಯೂ ಉಂಟಾಗುವುದಿಲ್ಲ. ಆದಕಾರಣ ನಿಮ್ಮಲ್ಲಿರುವ ಶಕ್ತಿಯನ್ನು ವೃದ್ಧಿಸಿ, ನೀವು ನಿಮ್ಮೊಳಗೆ ಹೋಗಿರಿ. ಇಂದು ಸಮಾಜ […]
ಮಕ್ಕಳೇ, ಮಂದಬುದ್ಧಿಯವರು ಕೂಡ ಗುರಿಯಿಲ್ಲದೆ ಸಾಗುವುದಿಲ್ಲ. ಲೌಕಿಕ ಗುರಿಯು ಎಲ್ಲರಿಗೂ ಇರುತ್ತದೆ. ಆದರೆ ಅವೊಂದೂ ನಮಗೆ ಪೂರ್ಣತೆ ನೀಡುವುದಿಲ್ಲ. ಆದಕಾಆರಣ ದೇವರನ್ನೇ ಗುರಿಯಾಗಿಟ್ಟು ಮುಂದಕ್ಕೆ ಸಾಗಿರಿ. ಮಕ್ಕಳೇ, ದೇವರೆಲ್ಲಿ ಎಂದು ಕೇಳಬಹುದು. ಹುಡುಕಿರಿ, ನಿಶ್ಚಯವಾಗಿಯೂ ಕಾಣಿಸುತ್ತಾನೆ. ನಾವು ಅನ್ನುತ್ತೇವೆ, “ಕಾಣದಿರುವುದನ್ನು ನಂಬುವುದಿಲ್ಲ” ಎಂದು. ಅಜ್ಜನನ್ನು ಕೆಲವು ಚಿಕ್ಕಮಕ್ಕಳು ನೋಡಿರುವುದಿಲ್ಲ ಎಂದಿಟ್ಟುಕೊಳ್ಳೋಣ. ಅವರು ಅಪ್ಪನನ್ನು “ತಂದೆಯಿಲ್ಲದವನು” ಎಂದೇನು ಕರೆಯುವುದು? ಭಗವಂತನು ಸರ್ವವ್ಯಾಪಿ. ಅವನು ಎಲ್ಲದರಲ್ಲೂ ನೆಲೆನಿಂತಿರುವನು. ಸೆಗಣಿಯನ್ನು ಉಪಯೋಗಿಸಬೇಕಾದ ರೀತಿಯಲ್ಲಿ ಉಪಯೋಗಿಸಿದಾಗ ಅದರಲ್ಲಿ ಅಡಕವಾಗಿರುವ ಶಕ್ತಿಯಿಂದ ಬೆಂಕಿ ಹತ್ತಿಕೊಳ್ಳುತ್ತದೆ. […]