ಮಕ್ಕಳೇ, ಮುಂದಿನ ಹತ್ತಿರದ ಹೊರೆಗಲ್ಲಿನಲ್ಲಿ,* ಭಾರವನ್ನು ಇಳಿಸಬಹುದೆಂದು ಎಣಿಸಿದಾಗ ನಮ್ಮ ಭಾರ ಕಮ್ಮಿಯಾದಂತನಿಸುತ್ತದೆ; ಭರವಸೆ ಮೂಡುತ್ತದೆ. ಅದು ಬಹಳ ದೂರ ಎಂದು ಭಾವಿಸಿದಾಗ, ಭಾರ ಹೆಚ್ಚಾದಂತನಿಸುತ್ತದೆ. ಭಗವಂತನು ನಮ್ಮ ಹತ್ತಿರವಿದ್ದಾನೆ ಎಂದು ಭಾವಿಸಿರಿ. ಎಲ್ಲಾ ಭಾರವೂ ಕಮ್ಮಿಯಾಗುತ್ತದೆ. ದೋಣಿಯೋ, ಬಸ್ಸೋ ಹತ್ತಿದ ಮೇಲೆ, ಯಾತಕ್ಕೆ ಇನ್ನೂ ಭಾರ ಹೊರಬೇಕು ? ಅದನ್ನು ಅಲ್ಲೇ ಬಿಡಿರಿ. ಇದೇ ರೀತಿ, ದೇವರಿಗೆ ಎಲ್ಲವನ್ನೂ ಸಮರ್ಪಿಸಿರಿ. ಅವನು ನಮ್ಮನ್ನು ಕಾಪಾಡುವನು.

  • * ಹಿಂದಿನಕಾಲದಲ್ಲಿ ಹಳ್ಳಿಗಳಲ್ಲಿ ಬೆನ್ನು ಹೊರೆ ಹಾಗೂ ತಲೆ ಹೊರೆ ಹೊತ್ತುಕೊಂಡು ಹೋಗುವವರ ದಣಿವಾರಿಸಲೋಸುಗ, ದಾರಿಯಲ್ಲಿ ಅಲ್ಲಲ್ಲಿ ತಮ್ಮ ಹೊರೆ ಇಳಿಸಲು ಅನುಕೂಲವಾಗುವಂತೆ, ಸುಮಾರು ಒಂದೂವರೆ ಅಡಿ ಅಗಲದ ಹಾಗೂ ನಾಲ್ಕಡಿ ಉದ್ದದ ಹಾಸುಗಲ್ಲನ್ನು ಸುಮಾರು ನಾಲ್ಕಡಿ ಎತ್ತರದ ಎರಡು ಸ್ಥಂಭಗಳ ನಡುವೆ ನಿಲ್ಲಿಸುತ್ತಿದ್ದರು. ಇದರ ಮೇಲೆ ಹೊರೆ ಇಳಿಸಿ, ವಿಶ್ರಾಂತಿ ಪಡೆದು, ಪುನಃ ತಮ್ಮ ಹೊರೆಯೊಂದಿಗೆ ಹಳ್ಳಿಗರು ಮುಂದುವರೆಯುತ್ತಿದ್ದರು. ಈಗಲೂ, ಭಾರತದಲ್ಲಿ ಅಲ್ಲೋ ಇಲ್ಲೋ ಕೆಲವು ಕಡೆ ಹಳ್ಳಿ ದಾರಿಗಳಲ್ಲಿ, ಅಪರೂಪಕ್ಕೆಂಬಂತೆ ಇಂತಹ ಕಲ್ಲಿನ ಕಲ್ಲಿನ ಹೊರೆಗಲ್ಲುಗಳನ್ನು ಕಾಣಬಹುದು.

­­­­­­­­­­­­­­­­­­­­­­­­­­­­­­­­­­­____

ಮಕ್ಕಳು ಹೇಳುತ್ತಾರೆ, “ಭಗವಂತನಿಗೆ ನಾವು ಎಷ್ಟೋ ವರ್ಷ ಮೊರೆಯಿಟ್ಟೆವು. ಆದರೂ ದುಃಖವೇ . ಐವತ್ತು ವರ್ಷಗಳಿಂದ, ನಾನು ಭಗವಂತನ ಭಕ್ತನಾಗಿ ಬದುಕುತ್ತಿದ್ದೇನೆ. ಇದುವರೆಗೆ ಯಾವುದೇ ತರದ ಪ್ರಗತಿಯಾಗಿಲ್ಲ.” ಎಂದು. ಅಮ್ಮ ಅದು ನಂಬುವುದಿಲ್ಲ. ಭಗವಂತನಿಗೆ ಮೊರೆಯಿಟ್ಟದ್ದು ಹೇಗೆ ? ಬಯಕೆಗಳು ಹೃದಯದೊಳಗೆ, ಭಗವಂತನು ಹೊರಗೆ. ಭಗವಂತನನ್ನು ಒಂದು ನಿಮಿಷ ಹೃದಯದೊಳಕ್ಕೆ ಇರಿಸಲು ನಿಮಗೆ ಸಾಧ್ಯವಾಗಿಲ್ಲ. ಭಗವಂತನು ಭಕ್ತರ ದಾಸನಾದರೂ, ಅವನನ್ನು ಒಬ್ಬ ಕೂಲಿಯವನನ್ನಾಗಿ ಕಾಣುವುದು ಸರಿಯಲ್ಲ. ಭಗವಂತನನ್ನು ಹೃದಯದಲ್ಲಿರಿಸಿ, ಅದರಲ್ಲಿ ಮಾತ್ರ ಏಕಾಗ್ರತೆ ಇರಿಸಿ ಪ್ರಾರ್ಥಿಸುವವನನ್ನು ಮಾತ್ರವೇ ನಿಜವಾದ ಭಕ್ತ ಎಂದು ಹೇಳಲು ಸಾಧ್ಯ. ಅದು ಹೊರತು, ಇಷ್ಟು ವರ್ಷ ಭಗವಂತನನ್ನು ಕರೆದೆ ಎಂದಷ್ಟಕ್ಕೆ ಭಕ್ತನಾಗುವುದಿಲ್ಲ.
­­­­­­­­­­­­­­­­­­­­­­­­­­­­­­­­­­­____

ನಾವು ಪ್ರತಿಯೊಬ್ಬರೂ ಮನುಷ್ಯನೆಂದು ಬೋರ್ಡು ಹಾಕಿಕೊಂಡು, ಪ್ರಾಣಿಯಂತೆ ಜೀವಿಸುತ್ತಿದ್ದೇವೆ. ಪರಸ್ಪರರಿಗೆ ಅನ್ಯಾಯ ಮಾಡಿಕೊಂಡು ಬಾಳುತ್ತಿದ್ದೇವೆ. ಹೀಗಲ್ಲ ಇರಬೇಕಾದದ್ದು. ನಾವೆಲ್ಲ ಒಂದು ತಾಯಿಯ ಮಕ್ಕಳು; ಅದು ಮಕ್ಕಳು ಮರೆಯ ಬಾರದು.
­­­­­­­­­­­­­­­­­­­­­­­­­­­­­­­­­­­____
ಮಕ್ಕಳೇ, ಸಮಯ ಹಾಳು ಮಾಡದಿರಿ. ಹೋದ ಸಮಯ ಮರಳಿ ಸಿಗುವುದಿಲ್ಲ. ಲಕ್ಷ ರುಪಾಯಿ ನಷ್ಟವಾದರೂ ಅಮ್ಮನಿಗೆ ಬೇಜಾರಿಲ್ಲ. ಆದರೆ ಒಂದು ಸೆಕೆಂಡ್ ಸಮಯ ನಷ್ಟವಾದರೂ, ಅದು ನಷ್ಟವೇ ಅಲ್ಲವೆ ? ಅದು ಸಿಗಲಾರದು. ಹಣ ಮತ್ತೆ ಮಾಡಬಹುದು. ಬೆಲೆಬಾಳುವ ಸಮಯ ನಷ್ಟ ಪಡಿಸದಿರಿ.
­­­­­­­­­­­­­­­­­­­­­­­­­­­­­­­­­­­____
ಮನೆಯ ಚಿಕ್ಕ ಗುಡಿಸಲಿಗೆ ಬೆಂಕಿ ಬಿದ್ದಾಗ ಹೇಗೆ ಬಚಾವಾಗಲು ಪ್ರಯತ್ನ ಪಡುತ್ತೇವೋ, ಹಾಗೆಯೇ, ದೇವರೇ ರಕ್ಷಕನೆಂದು ಅರಿತು ನಿಮ್ಮನ್ನು ಉಳಿಸಿಕೊಳ್ಳಿರಿ ಮಕ್ಕಳೇ. ಚಿನ್ನ ನಮ್ಮಲ್ಲಿಯೇ ಇರುವಾಗ ಇಮಿಟೇಷನ್ ಹಿಂದೆ ಹೋಗದಿರಿ. ಬರಿಯ ನಾಯಿ ಹೇಲಿಗಾಗಿ ಜೀವಿಸದಿರಿ. ಅಮೃತ ನಮ್ಮಲ್ಲಿದೆ, ಅದನ್ನು ಪಾನ ಮಾಡಿರಿ.
­­­­­­­­­­­­­­­­­­­­­­­­­­­­­­­­­­­____