Category / ವಾರ್ತೆ

ಮಕ್ಕಳೇ, ಜೀವನದಲ್ಲಿ ಎರಡು ಕಾರ್ಯಗಳು ನಡೆಯುತ್ತವೆ. ಒಂದು, ಕರ್ಮ ಮಾಡುವುದು. ಎರಡು, ಅದರ ಫಲವನ್ನು ಅನುಭವಿಸುವುದು. ಕರ್ಮವನ್ನು ಯಾವ ಮನೋಭಾವದೊಂದಿಗೆ ಮಾಡಬೇಕು ಮತ್ತು ಕರ್ಮಫಲವನ್ನು ಯಾವ ಮನೋಭಾವದೊಂದಿಗೆ ಅನುಭವಿಸಬೇಕು ಎಂಬುದನ್ನು ತಿಳಿದರೆ, ಜೀವನವು ತುಲನಾತ್ಮಕವಾಗಿ ಶಾಂತವಾಗಿಯೂ ಮತ್ತು ಸಮಾಧಾನಪೂರ್ಣವಾಗಿಯೂ ಇರುತ್ತದೆ. ನಾವು ಬಹಳಷ್ಟು ನಿರೀಕ್ಷಿಸುವ ಕಾರ್ಯಗಳು ಸಂಭವಿಸದೇ ಇರುವುದೂ ಮತ್ತು ನಿರೀಕ್ಷಿಸದ ಕಾರ್ಯಗಳು ಸಂಭವಿಸುವುದೂ, ಜೀವನದಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಷಯ. ಒಂದು ಕರ್ಮದ ಫಲವು ದೊರಕಲು ನಮ್ಮ ಕರ್ಮದ ಜೊತೆಗೆ ಅನೇಕ ಅಂಶಗಳೂ ಕಾರಣವಾಗಿರುತ್ತವೆ. ಇವೆಲ್ಲವೂ ಅನುಕೂಲಕರವಾಗಿ […]

ಮನಸ್ಸಿನ ನಿರಂತರ ಚಲನೆಯು ಆಲೋಚನೆಗಳ ಅನಂತ ಅಲೆಗಳನ್ನು ಸೃಷ್ಟಿಸುತ್ತದೆ. ಈ ಆಲೋಚನಾ ತರಂಗಗಳ ಕಾರಣದಿಂದ, ಎಲ್ಲದರ ಬಗ್ಗೆ ನಮ್ಮ ದೃಷ್ಟಿಕೋನವು ಅಸ್ಪಷ್ಟ ಮತ್ತು ಅಪೂರ್ಣವಾಗುತ್ತದೆ ಚಂಚಲವಾಗಿರುವುದು ಮಾನವ ಮನಸ್ಸಿನ ಸ್ವಭಾವವಾಗಿದೆ. ಗಡಿಯಾರದ ಲೋಲಕದಂತೆ ಅದು ಒಂದು ವಿಷಯದಿಂದ ಇನ್ನೊಂದಕ್ಕೆ ಸದಾ ಚಲಿಸುತ್ತಲೇ ಇರುತ್ತದೆ. ಈ ಚಲನೆಯು ಅಂತ್ಯವಿಲ್ಲದೆ ಮುಂದುವರಿಯುತ್ತಲೇ ಇರುತ್ತದೆ. ಒಂದು ಕ್ಷಣ ಮನಸ್ಸು ಏನನ್ನಾದರೂ ಇಷ್ಟಪಡುತ್ತದೆ; ಮರುಕ್ಷಣವೇ ಅದನ್ನು ದ್ವೇಷಿಸುತ್ತದೆ. ಒಂದು ವಸ್ತುವನ್ನು ಮನಸ್ಸು ಈಗ ಬಯಸುತ್ತದೆ, ಮರುಕ್ಷಣವೇ ಅದೇ ವಸ್ತುವಿನಲ್ಲಿ ಬೇಸರ ಮೂಡುತ್ತದೆ. ಮನಸ್ಸೆಂಬ […]

ದೇವಾಲಯ ಮತ್ತು ಮಸೀದಿಗಳಿಗೆ ಹೋಗಿ ಪೂಜೆ ಸಲ್ಲಿಸಿದ ಮಾತ್ರಕ್ಕೇ ಧರ್ಮಾಚರಣೆ ಆಯಿತೆಂದಲ್ಲ, ಅದು ಪರಿಪೂರ್ಣ ಭಕ್ತಿಯೆಂದೂ ಅರ್ಥವಲ್ಲ. ಎಲ್ಲ ಜೀವಜಾಲಗಳಲ್ಲೂ ಆತ್ಮನನ್ನು, ಭಗವಂತನನ್ನು ಕಾಣಲು ಸಾಧ್ಯವಾಗಬೇಕು. ಅದೇ ನಿಜವಾದ ಭಕ್ತಿ. ಎಲ್ಲಾ ಚರಾಚರಗಳನ್ನು ಸಂರಕ್ಷಿಸುವುದೇ ಪ್ರಕೃತಿಯ ಏಕೈಕ ಉದ್ದೇಶ. ಈ ವಿಷಯದಲ್ಲಿ ನಮಗೆ ಸಂಪೂರ್ಣ ನಂಬಿಕೆ ಇರಬೇಕು. ಏನನ್ನೂ ಹಾನಿ ಮಾಡದೆ ಬದುಕಲು, ಶಾಂತಿಯುತ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು. ಸ್ವಂತ ಏಳಿಗೆಗಾಗಿ ಇತರರನ್ನು ನಾಶಪಡಿಸಲು ನಾವು ಮುಂದಾಗಬಾರದು. ಇದು 21ನೇ ಶತಮಾನ. ಈ ಮಹಾಧಾರ್ಮಿಕ ಸಮ್ಮೇಳನದ ಯಶಸ್ಸಿಗಾಗಿ […]

ನಾವು ಜೀವನದ ಅನುಭವಗಳನ್ನು ಮೂರು ರೀತಿಯಲ್ಲಿ ಎದುರಿಸುತ್ತೇವೆ. ಬರುವ ಸಂದರ್ಭಗಳನ್ನು ಶಪಿಸುತ್ತಾ ಮುಂದೆ ಸಾಗುವುದೂ ಒಂದು ವಿಧಾನವಾಗಿದೆ. ಪರಿಸರವನ್ನು ಬದಲಾಯಿಸುವುದರಿಂದ ಸಮಸ್ಯೆಗಳು ಕೊನೆಗೊಳ್ಳುವುದಿಲ್ಲ. ಒಬ್ಬ ಹೆಂಡತಿ ಮತ್ತು ಆಕೆಯ ಗಂಡ ಸದಾಕಾಲ ವಾದಿಸುತ್ತಿದ್ದರು. ಒಟ್ಟಿಗೆ ವಾಸಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಯಿತು. ಹೀಗಾಗಿ, ಆ ವಿವಾಹ ಬಂಧ ಮುರಿಯಿತು. ಸ್ವಲ್ಪ ದಿನಗಳ ನಂತರ ಇಬ್ಬರೂ ಬೇರೆಯವರನ್ನು ಮದುವೆಯಾದರು. ಹೆಚ್ಚು ತಡವಾಗದೆ ಇಬ್ಬರಿಗೂ ಅರಿವಾಯಿತು – ಮೊದಲ ಹೆಂಡತಿಯೂ ಗಂಡನೂ ಬೇರೊಂದು ರೂಪದಲ್ಲಿ ಬಂದಿದ್ದಾರೆಂದು. ವ್ಯಕ್ತಿ ಬದಲಾಗಿದ್ದರು, ಆದರೆ ಮನಸ್ಸು […]

ಪರಿಸ್ಥಿತಿಯನ್ನು ದೂಷಿಸದೆ, ನಾವು ಮೊದಲು ಬದಲಾಯಿಸಿಕೊಳ್ಳಬೇಕಾದದ್ದು ನಮ್ಮ ಪ್ರಸ್ತುತ ಮನಸ್ಥಿತಿಯನ್ನೇ. ನಮ್ಮ ಪ್ರಾರ್ಥನೆ ಅದಕ್ಕಾಗಿಯೇ ಇರಬೇಕು. ಒಬ್ಬ ಬಾಲಕನು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುತ್ತಿದ್ದಾನೆ: “ದೇವರೇ, ದಯವಿಟ್ಟು ಅಮೇರಿಕಾದ ರಾಜಧಾನಿಯನ್ನು ಚೀನಾ ಮಾಡು.” ಇದನ್ನು ಕೇಳಿ, ಅತ್ತ ಬಂದು ನಿಂತ ಒಬ್ಬ ವ್ಯಕ್ತಿ ಕೇಳಿದ, “ಏಕೆ ಹೀಗೆ ಪ್ರಾರ್ಥಿಸುತ್ತಿದ್ದೀಯ  ಮಗು?” “ಪರೀಕ್ಷೆಯಲ್ಲಿ ನಾನು ಅಮೇರಿಕಾದ ರಾಜಧಾನಿ ಚೀನಾ ಅಂತ ಬರೆದಿದ್ದೆ. ನಂತರ, ಅದು ತಪ್ಪು ಎಂದು ತಿಳಿದುಬಂತು. ನನ್ನ ಉತ್ತರ ಸರಿಯಾಗಿರಲೆಂದು ಹೀಗೆ ಪ್ರಾರ್ಥಿಸುತ್ತಿದ್ದೇನೆ.” ಇದು ಆ ಬಾಲಕನ […]