2004ರಲ್ಲಿ ಸುನಾಮಿ ಅಲೆಗಳು ಏಷ್ಯಾ ಭೂಖಂಡದ ಹಲವು ದೇಶಗಳಿಗೆ ದಾಳಿಯಿಟ್ಟವು. ಕೇರಳದ ಕಡಲತೀರ ಗ್ರಾಮವಾದ ಆಲಪ್ಪಾಡನ್ನೂ ಅದು ಸುಮ್ಮನೆ ಬಿಡಲಿಲ್ಲ.when tsunami hit the cost of Alappad

ಅಂದು ಆಶ್ರಮದಲ್ಲಿದ್ದ ಸುಮಾರು 20,000 ಭಾರತೀಯ ಹಾಗೂ ವಿದೇಶಿಯ ಭಕ್ತರನ್ನು ರಕ್ಷಿಸಿದ್ದು ಮಾತ್ರವಲ್ಲದೆ, ಸಾವಿರಾರು ಸಂಖ್ಯೆಯಲ್ಲಿ ಬರುತ್ತಿರುವ ಊರಿನ ಜನರನ್ನೂ, ಎಲ್ಲಾ ಕಳೆದುಕೊಂಡ ಅನ್ಯ ರಾಜ್ಯಗಳ ಜನಗಳ ದುಃಖವನ್ನೂ ತನ್ನ ಎದೆಗಾನಿಸಿಕೊಂಡರು. ಅವರಿಗೆ ನೆರಳೂ ಆಧಾರವೂ ಆಗಿ ಅಮ್ಮ ನಿಂತರು. ಕೇರಳ, ತಮಿಳ್ನಾಡು, ಅಂಡಮಾನ್ ನಿಕೋಬಾರ್ ದ್ವೀಪಗಳು, ಶ್ರೀಲಂಕ ಮುಂತಾದ ಸ್ಥಳಗಳಲ್ಲಿ ಮಾತಾ ಅಮೃತಾನಂದಮಯಿ ಮಠ ಸುನಾಮಿ ಪೀಡಿತರಿಗೆ ದುರಂತ ಪರಿಹಾರ ಹಾಗೂ ಪುನರ್ವಸತಿ ಕಾರ್ಯಕ್ರಮಗಳನ್ನು ಕಲ್ಪಿಸಿ ಕೊಟ್ಟಿತು.

ಸಾವಿರಗಟ್ಟಲೆಯಲ್ಲಿ ಕುಟುಂಬಗಳಿಗೆ ವಾಸಿಸಲಿಕ್ಕೆಂದು ಅಭಯಕೇಂದ್ರಗಳನ್ನು, ತಮಿಳ್ನಾಡಿನಲ್ಲೂ ಕೇರಳದಲ್ಲೂ ಸುನಾಮಿ ಕಳೆದ ಎರಡು ವಾರಗಳೊಳಗೆ ಕಟ್ಟಿ ಕೊಟ್ಟರು. ಅವರಿಗೆ ಬೇಕಾದ ಅನ್ನ, ವಸ್ತ್ರ, ಚಿಕಿತ್ಸೆಯಾದಿಯಾಗಿ ಎಲ್ಲವನ್ನೂ ಅಂದಿನಿಂದ ಮಠ ನೀಡುತ್ತ ಬಂತು. ಸುನಾಮಿ ಕೊಡಿಸಿದ ಮಾನಸಿಕ ಅಸ್ವಸ್ಥತೆಗಳಿದ್ದ ಅವರಲ್ಲಿ ಶಾಂತಿ, ಸಮಾಧಾನ ಹಾಗೂ ಆತ್ಮವಿಶ್ವಾಸಗಳನ್ನು ತುಂಬುವ ವ್ಯವಸ್ಥೆಗಳನ್ನು ಮಾಡಿದ ಮಠವು ಕೇರಳ, ತಮಿಳ್ನಾಡು, ಪಾಂಡಿಚೇರಿ, ಅಂಡಮಾನ್ ನಿಕೋಬಾರ್ ದ್ವೀಪಗಳು, ಶ್ರೀಲಂಕ ಮುಂತಾದ ಕಡೆ ಅವರಿಗೆ ನಿರ್ಮಿಸಿ ನೀಡಿದ್ದು ಸುಮಾರು 6,200 ಮನೆಗಳನ್ನು.

ಕೇರಳ ಮತ್ತು ತಮಿಳ್ನಾಡು ರಾಜ್ಯಗಳಲ್ಲಿ ಸುನಾಮಿ ಬಾಧಿಸಿದ ಎಲ್ಲಾ ಜಿಲ್ಲೆಗಳಲ್ಲೂ, ಮೊದಲು ಮನೆ ಕಟ್ಟಿಸಿ ಕೊಡಿಸಿದವರಲ್ಲಿ ಮಾತಾ ಅಮೃತಾನಂದಮಯಿ ಮಠದ್ದೇ ಪ್ರಥಮ ಸ್ಥಾನ.

ಸುನಾಮಿ ಮನೆ ನಿರ್ಮಾಣ ತೊಡಗಿದಾಗ ಲೆಕ್ಕ ಹಾಕಿದ ಅಂದಾಜು ವೆಚ್ಚ ಎರಡು ವರ್ಷಗಳಲ್ಲಿ ಅಂದಾಜಿಗಿಂತ 3 ಪಟ್ಟಿಗೆ ಬೆಳೆಯಿತು. ಈ ಸುನಾಮಿ ಪುನರ್ವಸತಿ ಯೋಜನೆಯಲ್ಲಿ ಭಾಗವಹಿಸಿದ ಆಶ್ರಮವಾಸಿಗಳದ್ದೂ, ಭಕ್ತರದ್ದೂ ಎಲ್ಲಾ ಶ್ರಮದಾನ ಸೇರಿಸಿ ಕೂಡಿಸಿ ಬರುವ ವೆಚ್ಚದ ಮೊತ್ತ 200 ಕೋಟಿಗೂ ಮೀರಿದ್ದೆಂದು ಲೆಕ್ಕ ಹಾಕಲಾಗಿದೆ.

ಒಂದು ಕಡೆ ಸಮುದ್ರ, ಇನ್ನೊಂದು ಕಡೆ ಹಿನ್ನೀರು – ಹೀಗಿರುವ ದ್ವೀಪದಲ್ಲಿದೆ ಅಮೃತಪುರಿ ಆಶ್ರಮ.

ಹನ್ನೊಂದು ಕಿಲೋಮೀಟರ್‌ನ ಈ ದ್ವೀಪದಲ್ಲಿ, ಒಂದು ಸೇತುವೆಯೂ ಇರಲಿಲ್ಲ. ಸುನಾಮಿ ಸಂಭವಿಸಿದಾಗ ದೋಣಿಯಲ್ಲಿ ಹಿನ್ನೀರಿನ ಆ ಕಡೆ ದಾಟಲು ಪ್ರಯತ್ನ್ನಿಸಿದ ಊರವರಾದ ಕೆಲಜನರು ಸಾವನ್ನಪ್ಪಿದ ವಿಷಯ ಅಮ್ಮನನ್ನು ಅಗಾಧ ದುಃಖದಲ್ಲಿ ಮುಳುಗಿಸಿತು. “ಒಂದು ಸೇತುವೆಯಿದ್ದಿದ್ದರೆ ಅಷ್ಟೊಂದು ಜಾಸ್ತಿ ಜನ ಸಾಯುತ್ತಿರಲಿಲ್ಲ. ಸೇತುವೆಯೊಂದು ಇರಬೇಕು.” ಎಂದು ಅವತ್ತು ಅಮ್ಮ ತೀರ್ಮಾನಿಸಿದರು. ಒಂದು ವರ್ಷದೊಳಗೆ “ಅಮೃತಸೇತು” ಎಂಬ ಸೇತುವೆ ಕಟ್ಟಿ, 2006ರಲ್ಲಿ ಅಂದಿನ ರಾಷ್ಟ್ರಪತಿಯವರ ಮುಖಾಂತರ ಜನಗಳಿಗೆ ಸಮರ್ಪಿಸಿದರು. ಇನ್ನೊಂದು ಸುನಾಮಿ ಬಂದರೆ, ಮೂವತ್ತು ನಿಮಿಷಗಳೊಳಗೆ ಗ್ರಾಮವಾಸಿಗಳೆಲ್ಲರನ್ನೂ ಮತ್ತೊಂದು ದಡಕ್ಕೆ ಮುಟ್ಟಿಸುವಲ್ಲಿ, ಈ ಸೇತುವೆ ಸಹಾಯಕಾರಿಯಾಗುವುದು.

Amrita Setu connecting land and hearts

ಕೇರಳದ ತೀರಪ್ರದೇಶದಲ್ಲಿ ಒಂದು ಲಕ್ಷದಷ್ಟು ಚಬುಕಿನ ಗಿಡಗಳನ್ನು ನೆಡಲಾಯಿತು. ಇನ್ನೊಂದು ಬಾರಿ ಸುನಾಮಿ ಸಂಭವಿಸಿದಲ್ಲಿ, ನಾಶದ ಪರಿಮಾಣವನ್ನು ಈ ಚಬುಕಿನ ಮರಗಳು ಕಮ್ಮಿ ಮಾಡುವುದೆಂಬ ನಿರೀಕ್ಷೆಯಿದೆ.

Amrita Setu connecting land and hearts

10,000 ಮಕ್ಕಳಿಗೆ ಹತ್ತು ದಿನಗಳ ಶಿಬಿರ ನಡೆಸಿ ಯೋಗ, ಸಂಸ್ಕೃತ ಹಾಗೂ ಇಂಗ್ಲಿಷ್ ತರಬೇತಿ ಕ್ಲಾಸುಗಳೂ, ಈಜುವ ಕ್ಲಾಸುಗಳೂ ಹಾಗೂ ಕೌನ್ಸೆಲಿಂಗ್ ನೀಡುವುದು ಮುಂತಾದವುಗಳನ್ನು ಆಯೋಜಿಸಲಾಯಿತು. ಮಕ್ಕಳ ಮಾನಸಿಕ ವಿಭ್ರಮೆಯನ್ನೂ, ನೀರಿನ ಭಯವನ್ನೂ ನೀಗಿಸಿ ಜೀವನದಲ್ಲಿ ಬಹಳಷ್ಟು ಸಾಧಿಸಿವುದಿದೆ ಎಂಬ ಆಶಾವಾದವನ್ನು ಹುಟ್ಟಿಸಲು ಮಕ್ಕಳಿಗೆ ಇದು ನೆರವಾಯಿತು.

Amrita Setu connecting land and hearts

ಇದೂ ಅಲ್ಲದೆ ಕೇರಳ, ತಮಿಳ್ನಾಡಿನ ಕಡಲತೀರದ ರಾಜ್ಯಗಳಲ್ಲಿ ನೂರಾರು ಬೆಸ್ತರಿಗೆ ದೋಣಿ ಮತ್ತು ಬಲೆಗಳನ್ನು ಅಮ್ಮ ನೀಡಿದರು. ಆಲಪ್ಪುಳ, ಕೊಲ್ಲಂ, ಕೊಚ್ಚಿ ಜಿಲ್ಲೆಗಳ ಕುಟುಂಬಗಳಿಗೆ ಅಡಿಗೆ ಪಾತ್ರೆಗಳ ಖರೀದಿಗೆಂದು ಮಠ ಒಂದೂವರೆ ಕೋಟಿ ರುಪಾ‌ಯಿಗಳನ್ನು ವಿತರಣೆ ಮಾಡಿತು.

ಸುನಾಮಿ ಪೀಡಿತ ಪ್ರದೇಶಗಳ 2500ರಷ್ಟು ತರುಣ ತರುಣಿಯರಿಗೆ ಮಾತಾ ಆಮೃತಾನಂದಮಯಿ ಮಠದ ವಿವಿಧ ಸ್ಥಾಪನೆಗಳಲ್ಲಿ ನರ್ಸಿಂಗ್, ಬಿಎಡ್, ಸೆಕ್ಯುರಿಟಿ, ಡ್ರೈವಿಂಗ್ ಮುಂತಾದ ಕ್ಷೇತ್ರಗಳಲ್ಲಿ ತರಬೇತಿ ಹಾಗೂ ನೌಕರಿಯ ಅವಕಾಶಗಳನ್ನು ಇಲ್ಲಿಯತನಕ ಕಲ್ಪಿಸಿ ಕೊಡಲಾಗಿದೆ.