2004ರ ಸುನಾಮಿಯ ನಂತರ ಕೇರಳ, ತಮಿಳ್ನಾಡು, ಅಂಡಮಾನ್ ನಿಕೋಬಾರ್ ದ್ವೀಪಗಳು, ಶ್ರೀಲಂಕದಲ್ಲಿ ಅಮ್ಮ ನಡೆಸಿದ ದುರಂತ ಪರಿಹಾರ ಕಾರ್ಯಗಳು, ಹಾಗೂ ಮನೆ ನಿರ್ಮಾಣ ಯೋಜನೆಗಳು, ಎಲ್ಲರಿಗೂ ತಿಳಿದಿರುವ ವಿಷಯವೇ. ಅಂದು ಎಲ್ಲವನ್ನೂ ಕಳೆದುಕೊಂಡು ಜೀವನದಲ್ಲಿ ಮುಂದೆ ಯಾವುದೇ ದಾರಿ ಕಾಣದೆ ದಿಗ್ಭ್ರಮೆಗೊಂಡವರಿಗೆ ಅಮ್ಮ ಅವರ ಬಾಳಿನ ನೆರಳೂ ಆದರು, ಆಧಾರವೂ ಆದರು.

Ram Lakshmi

ಗುಜರಾತ್‌ನ ಭುಜ್‍ನಲ್ಲಿ ಭೂಕಂಪವಾದಾಗಲೂ, ಮುಂಬೈಯಲ್ಲೂ, ಬಿಹಾರ್ ‍ಹಾಗೂ ಒರಿಸ್ಸಾದಲ್ಲಿ ಬಂದ ನೆರೆ, ಜನರನ್ನು ದುರಂತದಲ್ಲಿ ಮುಳುಗಿಸಿದಾಗಲೂ, ತಮಿಳ್ನಾಡಿನ ಕುಂಭಕೋಣದ ಶಾಲೆಯಲ್ಲಿ ಬೆಂಕಿದುರಂತ ಸಂಭವಿಸಿದಾಗಲೂ, ಅಮೇರಿಕಾದಲ್ಲಿ ಕತ್ರೀನಾ ಚಂಡಮಾರುತ ಬಡಿದಾಗಲೂ, ಹೈತಿಯಲ್ಲಿ ಭೂಕಂಪವು ಜೀವಗಳಿಗೆ ಎಲ್ಲ ರೀತಿಯಲ್ಲಿನ ಅಪಾರ ಹಾನಿಯುಂಟು ಮಾಡಿದಾಗಲೂ, ಅಮ್ಮ ಎಲ್ಲಾ ರೀತಿಯ ಸಹಾಯಗಳನ್ನು ತ್ವರಿತವಾಗಿ ಮುಟ್ಟಿಸಿದರು.

Earthquake help

ಕತ್ರೀನ ಅಮೇರಿಕದ ಕಡಲತೀರಕ್ಕೆ ಬಡಿದಾಗ, ಅಮ್ಮ ಅಮೇರಿಕೆಗೆ ಹತ್ತು ಲಕ್ಷ ಡಾಲರ್ (ಸುಮಾರು ರೂ.ನಾಲ್ಕೂವರೆ ಕೋಟಿ) ನೀಡಿ ಸಹಾಯ ಮಾಡಿದರು.

2005ರಲ್ಲಿ ಪಾಕಿಸ್ತಾನ್ ಹಾಗೂ ಕಾಶ್ಮೀರದಲ್ಲಿ ಭೂಕಂಪ ಉಂಟಾದಾಗಲೂ ಅಮ್ಮ ಸೇವೆಗೆಂದು ಒಂದು ತಂಡ ಕಳುಹಿಸಿದ್ದಲ್ಲದೆ, ಆಹಾರ, ಔಷಧಿ, ಕಂಬಳಿಯಿಂದ ಹಿಡಿದು ಅವಶ್ಯಕವಾದ ಎಲ್ಲಾ ವಸ್ತುಗಳನ್ನು ತಲುಪಿಸಿದರು.

2005ರಲ್ಲಿ ಮುಂಬೈಯಲ್ಲಿ ಮತ್ತು 2006ರಲ್ಲಿ ಗುಜರಾತ್‌ನಲ್ಲಿ ಮಹಾಪೂರ ಬಂದಾಗ ದುರಂತ ಪರಿಹಾರಕ್ಕಾಗಿ ಡಾಕ್ಟರು‌ಗಳನ್ನೂ, ಅಂಬುಲೆನ್ಸ್‌ಗಳನ್ನೂ ಕಳುಹಿಸಿದರು. ಸಂತ್ರಸ್ತರಿಗೆ ಊಟ, ಔಷಧಿ ಹಾಗೂ ಚಿಕಿತ್ಸೆ ಒದಗಿಸಿದರು.

Raichur houses

2010ರಲ್ಲಿ ಕರ್ನಾಟಕದಲ್ಲಿ ಹಾಗೂ ಆಂಧ್ರದಲ್ಲಿ ಬಂದ ನೆರೆ, ಜನರ ಜೀವಕ್ಕೂ, ಜೀವನಕ್ಕೂ ಅಪಾಯ ಉಂಟುಮಾಡಿದಾಗ, ಪ್ರಾಥಮಿಕ ಪರಿಹಾರ ಕಾರ್ಯಗಳನಂತರ ಈ ದುರಂತಪೀಡಿತರಿಗೆಂದು ಮನೆಗಳ ನಿರ್ಮಾಣ ಆರಂಭಿಸಿದರು. ಕೇವಲ ಇಪ್ಪತ್ತು ದಿನಗಳೊಳಗೆ, ಎಲ್ಲರೂ ಅದ್ಭುತಪಡುವಂತೆ, ಆಶ್ಚರ್ಯಕರ ರೀತಿಯಲ್ಲಿ ಅಮ್ಮ ಕರ್ನಾಟಕದ ರಾಯಚೂರ್ ಜಿಲ್ಲೆಯಲ್ಲಿ 108 ಮನೆಗಳನ್ನು ಕಟ್ಟಿಸಿ ಸರಕಾರಕ್ಕೆ ಹಸ್ತಾಂತರಿಸಿದರು.
ಪೂರ್ಣವಾಗಿ ಪುರ್ನನಿರ್ಮಾಣದ ಕಾರ್ಯವನ್ನು ರಾಯಚೂರು ಜಿಲ್ಲೆಯಲ್ಲಿ ಯಾರೂ ತೆಗೆದುಕೊಳ್ಳಲು ಮುಂದೆ ಬರದೆ ಹೋದಾಗ, ಅಮ್ಮ, ಜಿಲ್ಲೆಯ ೫ ಅತಿ ದೊಡ್ಡ ಗ್ರಾಮವನ್ನೇ ದತ್ತು ತೆಗೆದುಕೊಂಡರು. 2010ರ ಈ ಆಗಸ್ಟ್‌‌ಗೆ ೨೫೦ ಮನೆಗಳ ನಿರ್ಮಾಣ ಪೂರ್ಣವಾಗಿ, ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಇವರಿಂದ ಉದ್ಘಾಟಿಸಿ, ಸಂತ್ರಸ್ತರಿಗೆ ಮನೆಗಳ ಕೀಲಿ ಕೈಗಳನ್ನು ವಿತರಿಸಲಾಯಿತು.