ಮಕ್ಕಳೇ, ಭಗವಂತನು ನಮ್ಮನ್ನು ರಕ್ಷಿಸುತ್ತಾನೆಯೇ ಹೊರತು. ನಾವು ಭಗವಂತನನ್ನು ರಕ್ಷಿಸುವವರಲ್ಲ. ಮಕ್ಕಳೇ, ನದಿಗೆ ನೀರಿನ ಅಗತ್ಯವಿಲ್ಲ. ಆದರೆ ಮಡಕೆಗೆ ನದಿಯ ನೀರಿನ ಅಗತ್ಯವಿದೆ. ಆಗಲೇ ಮಡಕೆ ಶುದ್ಧವಾಗುತ್ತದೆ. ನಮ್ಮ ಮನಸ್ಸು ಇಂದು ಕಳಂಕಗಳಿಂದ ತುಂಬಿದ ಮಡಕೆಯಾಗಿದೆ. ಭಗವಂತನೆಂಬ ನದಿಯಲ್ಲಿನ ನೀರನ್ನು ತುಂಬಿಸಿಯೇ ನಮ್ಮ ಮನಸ್ಸೆಂಬ ಮಡಕೆಯನ್ನು ಶುದ್ಧಗೊಳಿಸಬೇಕು. ಕಳಂಕಗಳಿಂದ ತುಂಬಿದ ಮನಸ್ಸನ್ನು ಶುದ್ಧೀಕರಿಸಿ ವಿಶಾಲಗೊಳಿಸಲು, ಹಾಗೂ ನಾವು ಎಲ್ಲರನ್ನೂ ಪ್ರೀತಿಸಿ, ನಿಸ್ವಾರ್ಥ ಸೇವೆ ಸಲ್ಲಿಸಲು ಸಾಧ್ಯವಾಗಬೇಕಾದರೆ, ನಮಗೆ ಭಗವಂತನ ಕೃಪೆ ಅತ್ಯಗತ್ಯ. ಮಕ್ಕಳೇ, ಈ ಲೋಕದಲ್ಲಿ ನಮ್ಮ […]
Category / ವಾರ್ತೆ
ಕಾರ್ಖಾನೆಗಳಿಂದ ಹೊಮ್ಮುವ ಹೊಗೆ ನಮ್ಮ ವಾತಾವರಣವನ್ನು ಎಷ್ಟು ಮಾಲಿನ್ಯಗೊಳಿಸಿದೆ? ಅಮ್ಮ ಕಾರ್ಖಾನೆಗಳನ್ನು ಮುಚ್ಚಿಬಿಡಬೇಕು ಎಂದು ಹೇಳುತ್ತಿಲ್ಲ. ಅವುಗಳಿಂದ ಬರುವ ಆದಾಯದ ಒಂದು ಭಾಗವಾದರೂ ಪ್ರಕೃತಿ ಸಂರಕ್ಷಣೆ ಮತ್ತು ಪರಿಸರ ಶುದ್ಧೀಕರಣಕ್ಕೆ ವಿನಿಯೋಗಿಸಲು ನಾವು ಸಿದ್ಧರಾಗಿರಬೇಕು ಎಂದು ಮಾತ್ರ ಹೇಳುತ್ತಾರೆ. ಹಿಂದೆ, ಬಿಸಿಲು ಮತ್ತು ಮಳೆ, ಕಾಲ ಕಾಲಕ್ಕೆ ಸರಿಯಾಗಿ ಬರುತ್ತಿದ್ದು, ಸಸ್ಯಗಳ ಪೋಷಣೆ ಮತ್ತು ಬೆಳವಣಿಗೆ ಸರಿಯಾಗಿರುತ್ತಿತ್ತು. ಎಲ್ಲವೂ ಪ್ರಕೃತಿಯ ಕೃಪೆಯಿಂದ ನಡೆಯುತ್ತಿದ್ದ ಕಾರಣ, ನೀರಾವರಿ ಯೋಜನೆಗಳ ಅಗತ್ಯವೂ ಆಗ ಇರಲಿಲ್ಲ. ಆದರೆ ಇಂದು, ಮನುಷ್ಯನು ಧರ್ಮ […]
ಎಲ್ಲದರಲ್ಲೂ ಜೀವಚೈತನ್ಯವನ್ನು ನೋಡು, ಅನುಭವಿಸು, ಅದು ಪ್ರೇಮ. ಹೃದಯದಲ್ಲಿ ನಿಖರವಾಗಿ ಪ್ರೇಮ ತುಂಬಿದಾಗ, ಬ್ರಹ್ಮಾಂಡದ ಎಲ್ಲೆಡೆ ಜೀವಚೈತನ್ಯ ಸ್ಪಂದಿಸುವುದನ್ನು ನೋಡಲು ಸಾಧ್ಯವಾಗುತ್ತದೆ. ಧರ್ಮವು ಹೇಳುತ್ತದೆ: ‘ಜೀವಚೈತನ್ಯವೇ ಪ್ರೇಮ.’ ಅದು ಅಲ್ಲಿಯೂ ಇದೆ, ಇಲ್ಲಿಯೂ ಇದೆ, ಪ್ರತಿಯೊಂದು ಕಡೆಯೂ ಇದೆ. ಎಲ್ಲೆಲ್ಲಿ ಜೀವನವಿದೆಯೋ, ಜೀವಿತವಿದೆಯೋ, ಅಲ್ಲೆಲ್ಲಾ ಪ್ರೇಮವಿದೆ. ಅದೇ ರೀತಿ, ಪ್ರೇಮ ಇರುವ ಎಲ್ಲೆಡೆಯೂ ಜೀವನ ಮತ್ತು ಜೀವಿತವಿದೆ. ಜೀವನ ಮತ್ತು ಪ್ರೇಮ ಎರಡಲ್ಲ; ಒಂದೇ. ಆದರೆ, ಪರಮ ಸತ್ಯವನ್ನು ಅರಿತುಕೊಳ್ಳುವವರೆಗೆ, ಆ ಅದ್ವೈತ ಭಾವವನ್ನು ನಾವು ಗ್ರಹಿಸಲು […]
ಒಬ್ಬ ವ್ಯಕ್ತಿಯ ಹೆಂಡತಿ ತೀರಿಕೊಂಡಳು. ಅವಳ ಆತ್ಮಶಾಂತಿಗಾಗಿ ಪ್ರಾರ್ಥನೆ ನಡೆಸಲು, ಗಂಡನು ಒಬ್ಬ ಪುರೋಹಿತನನ್ನು ಕರೆತಂದನು. ಅವರು ಕಾರ್ಯಗಳನ್ನು ನಡೆಸುತ್ತಿದ್ದ ಸಮಯದಲ್ಲಿ, ಈ ಮಂತ್ರವನ್ನು ಜಪಿಸಿದರು: ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’. ಅದರ ಅರ್ಥ ಗಂಡನಿಗೆ ತಿಳಿಯಲಿಲ್ಲ. ಅವನು ನೇರವಾಗಿ ಪುರೋಹಿತರನ್ನು ಕೇಳಿದ, “ನೀವು ಪಠಿಸಿದ ಮಂತ್ರದ ಅರ್ಥವೇನು?” ಪುರೋಹಿತರು ವಿವರಿಸಿದರು, “‘ಈ ಲೋಕದಲ್ಲಿರುವ ಎಲ್ಲರೂ ಸುಖಿಗಳಾಗಲಿ; ಎಲ್ಲರೂ ಐಶ್ವರ್ಯವಂತರಾಗಿ ಮತ್ತು ಶಾಂತಿಯುತರಾಗಿರಲಿ.’” ಮಂತ್ರವನ್ನು ಅರ್ಥಮಾಡಿಕೊಂಡಾಗ, ಅವನು ಪುರೋಹಿತರನ್ನು ಕೇಳಿದ, “ನನ್ನ ಹೆಂಡತಿಯ ಆತ್ಮಕ್ಕಾಗಿ ಪ್ರಾರ್ಥಿಸಲು ನಾನು […]
ಧರ್ಮ ಜೀವನದ ಒಂದು ಅವಿಭಾಜ್ಯ ಅಂಗ (ಮಾರ್ಗದರ್ಶಿ). ಒಬ್ಬರನ್ನೊಬ್ಬರು ಪ್ರೀತಿಸುವುದು, ಪರಸ್ಪರ ಸೇವೆ ಮಾಡುವುದು, ಕ್ಷಮಿಸುವುದು, ಸಹನೆಯಿಂದಿರುವುದು, ಮತ್ತು ಕರುಣಾಮಯವಾಗಿ ವರ್ತಿಸುವುದು – ಎಂಬ ಈ ಗುಣಗಳನ್ನು ಕಲಿಸುವುದೇ ಧರ್ಮ. ಅದ್ವೈತವು ಒಂದು ಅನುಭವ. ಆದಾಗ್ಯೂ, ಅದನ್ನು ದೈನಂದಿನ ಜೀವನದಲ್ಲಿ ಪ್ರೇಮ ಮತ್ತು ಕರುಣೆಯ ರೂಪದಲ್ಲಿ ಪ್ರಕಟಿಸಬಹುದು. ಸನಾತನ ಧರ್ಮದ ಗುರುಗಳಾದ ಋಷಿಮುನಿಗಳು ಮತ್ತು ಮಹಾತ್ಮರು ನಮಗೆ ಬೋಧಿಸುವುದು ಈ ಮಹಾನ್ ಪಾಠವನ್ನೇ. ನಾವು ಮರೆತುಹೋಗಿರುವ ಧರ್ಮದ ಭಾಷೆಯೇ ಕರುಣೆಯ ಭಾಷೆ. ಧರ್ಮವು ಬೋಧಿಸುವ ಪ್ರೇಮ ಮತ್ತು […]

Download Amma App and stay connected to Amma