ಮಕ್ಕಳೇ, ಮಂದಬುದ್ಧಿಯವರು ಕೂಡ ಗುರಿಯಿಲ್ಲದೆ ಸಾಗುವುದಿಲ್ಲ. ಲೌಕಿಕ ಗುರಿಯು ಎಲ್ಲರಿಗೂ ಇರುತ್ತದೆ. ಆದರೆ ಅವೊಂದೂ ನಮಗೆ ಪೂರ್ಣತೆ ನೀಡುವುದಿಲ್ಲ. ಆದಕಾಆರಣ ದೇವರನ್ನೇ ಗುರಿಯಾಗಿಟ್ಟು ಮುಂದಕ್ಕೆ ಸಾಗಿರಿ. ಮಕ್ಕಳೇ, ದೇವರೆಲ್ಲಿ ಎಂದು ಕೇಳಬಹುದು. ಹುಡುಕಿರಿ, ನಿಶ್ಚಯವಾಗಿಯೂ ಕಾಣಿಸುತ್ತಾನೆ. ನಾವು ಅನ್ನುತ್ತೇವೆ, “ಕಾಣದಿರುವುದನ್ನು ನಂಬುವುದಿಲ್ಲ” ಎಂದು. ಅಜ್ಜನನ್ನು ಕೆಲವು ಚಿಕ್ಕಮಕ್ಕಳು ನೋಡಿರುವುದಿಲ್ಲ ಎಂದಿಟ್ಟುಕೊಳ್ಳೋಣ. ಅವರು ಅಪ್ಪನನ್ನು “ತಂದೆಯಿಲ್ಲದವನು” ಎಂದೇನು ಕರೆಯುವುದು? ಭಗವಂತನು ಸರ್ವವ್ಯಾಪಿ. ಅವನು ಎಲ್ಲದರಲ್ಲೂ ನೆಲೆನಿಂತಿರುವನು. ಸೆಗಣಿಯನ್ನು ಉಪಯೋಗಿಸಬೇಕಾದ ರೀತಿಯಲ್ಲಿ ಉಪಯೋಗಿಸಿದಾಗ ಅದರಲ್ಲಿ ಅಡಕವಾಗಿರುವ ಶಕ್ತಿಯಿಂದ ಬೆಂಕಿ ಹತ್ತಿಕೊಳ್ಳುತ್ತದೆ. […]