Tag / ಸಮಾಜ

ಆಕಾಶದಲ್ಲಿರುವ ಒಂದು ದೇವರನ್ನು ಕುರಿತೋ, ಪಾತಾಳದಲ್ಲ್ಲಿರುವ ಒಂದು ದೇವಿಯ ಬಗ್ಗೆಯೋ ಅಲ್ಲ ಅಮ್ಮ ಹೇಳುತ್ತಿರುವುದು. ಎಲ್ಲರಲ್ಲೂ ದೇವರಿದ್ದಾನೆ. ಆದರೆ ನೀವು ಆ ಚೈತನ್ಯವನ್ನು ದುರ್ವಿನಿಯೋಗ ಮಾಡುತ್ತಿದ್ದೀರಿ. ನೀವಿಂದು ಸೊನ್ನೆ ವ್ಯಾಟ್ಟಿನ ಬಲ್ಬಾಗಿದ್ದರೆ, ತಪಸ್ಸಿನಿಂದ ಅದನ್ನು ಸಾವಿರದ್ದನ್ನಾಗಿ ಮಾರ್ಪಡಿಸಲು ಸಾಧ್ಯವಿದೆ. ಒಬ್ಬ ಸಾಮನ್ಯ ವ್ಯಕ್ತಿ ಇಬ್ಬರನ್ನು ಪ್ರೇಮಿಸಲೂ, ಸೇವಿಸಲೂ ಸಾಧ್ಯವಾದರೆ ನಿಮಗೆ ಕೋಟಿ ಜನರನ್ನು ಪ್ರೇಮಿಸಲೂ, ಸೇವಿಸಲೂ ಸಾಧ್ಯವಿದೆ. ನಿಮ್ಮ ಶಕ್ತಿಯಲ್ಲಿ ಯಾವೊಂದು ಕೊರತೆಯೂ ಉಂಟಾಗುವುದಿಲ್ಲ. ಆದಕಾರಣ ನಿಮ್ಮಲ್ಲಿರುವ ಶಕ್ತಿಯನ್ನು ವೃದ್ಧಿಸಿ, ನೀವು ನಿಮ್ಮೊಳಗೆ ಹೋಗಿರಿ. ಇಂದು ಸಮಾಜ […]

ಜನ ನಿಬಿಡತೆಯಿಂದಾಗಿ ಮಾತ್ರ ಲೋಕವಾಗುವುದಿಲ್ಲ; ಸಮಾಜವಾಗುವುದಿಲ್ಲ. ಅದನ್ನು ಒಳ್ಳೆತನವೂ ಕರುಣೆಯೂ ಇರುವ ಮನುಷ್ಯರು ಸೇರಿ ಮಾಡಬೇಕು. ಮನುಷ್ಯ ಮನುಷ್ಯರನ್ನು ಪ್ರೇಮಿಸುವಂತಾಗಬೇಕು; ಪ್ರಕೃತಿಯನ್ನೂ ಪ್ರೇಮಿಸಲು ಸಾಧ್ಯವಾಗಬೇಕು. – ಅಮ್ಮ