ಶೈಕ್ಷಣಿಕ ಕ್ಷೇತ್ರದಲ್ಲೂ ಆಶ್ರಮವು ಗಮನಾರ್ಹ ಹೆಜ್ಜೆಗಳನ್ನಿಟ್ಟಿದೆ. ಅಮೃತ ವಿಶ್ವ ವಿದ್ಯಾಪೀಠದ ಐದು ಕ್ಯಾಂಪಸ್‌ಗಳಲ್ಲಿ (ಕೊಯಂಬತ್ತೂರ್, ಕೊಚ್ಚಿ, ಬೆಂಗಳೂರು, ಮೈಸೂರು ಮತ್ತು ಅಮೃತಪುರಿ) ವಿವಿಧ ಎಂಜಿನಿಯರಿಂಗ್, ಮೆಡಿಕಲ್, ಡೆಂಟಲ್, ಫಾರ್ಮಸಿ, ನರ್ಸಿಂಗ್, ಆಯುರ್ವೇದ, ಮ್ಯಾನೇಜ್‌ಮೆಂಟ್, ಬಯೋಟೆಕ್, ಬಿಎಡ್, ಕಲೆ ಮತ್ತು ವಿಜ್ಞಾನ, ಫೈನ್ ಆರ್ಟ್ಸ್, ವಿಶುಅಲ್ ಕಮ್ಮ್ಯೂನಿಕೇಷನ್ ಹಾಗೂ ಜರ್ನಲಿಸಂ ಎನ್ನುವ ವಿಷಯಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ.

ಅಮೃತ ವಿಶ್ವ ವಿದ್ಯಾಲಯದಲ್ಲಿ ಐಟಿ, ಎಂಜಿನೀಯರಿಂಗ್, ಮೆಡಿಸಿನ್ ಮುಂತಾದ ನಾನಾ ಕ್ಷೇತ್ರಗಳಲ್ಲಿ ಅತ್ಯಧಿಕ ಸಂಶೋಧನೆಗಳು ನಡೆಯುತ್ತಿವೆ. ಮಾತ್ರವಲ್ಲದೆ ವಿಶ್ವವಿದ್ಯಾಲಯವು ಸ್ಯಾಟೆಲೈಟ್ ನೆಟ್‌ವರ್ಕ್ ಕೂಡ ಹೊಂದಿದೆ.

ಭಾರತದಾದ್ಯಂತ 55 ಅಮೃತವಿದ್ಯಾಲಯಗಳು ಇವೆ. ಎಲ್ಲಾ ವಿದ್ಯಾಲಯಗಳಲ್ಲಿಯೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಉಚಿತ.

ವಿವರಗಳಿಗೆ ಸಂದರ್ಶಿಸಿರಿ http://www.amrita.edu