Tag / ಪ್ರಯತ್ನ

ಮಕ್ಕಳೇ, ಮಂದಬುದ್ಧಿಯವರು ಕೂಡ ಗುರಿಯಿಲ್ಲದೆ ಸಾಗುವುದಿಲ್ಲ. ಲೌಕಿಕ ಗುರಿಯು ಎಲ್ಲರಿಗೂ ಇರುತ್ತದೆ. ಆದರೆ ಅವೊಂದೂ ನಮಗೆ ಪೂರ್ಣತೆ ನೀಡುವುದಿಲ್ಲ. ಆದಕಾಆರಣ ದೇವರನ್ನೇ ಗುರಿಯಾಗಿಟ್ಟು ಮುಂದಕ್ಕೆ ಸಾಗಿರಿ. ಮಕ್ಕಳೇ, ದೇವರೆಲ್ಲಿ ಎಂದು ಕೇಳಬಹುದು. ಹುಡುಕಿರಿ, ನಿಶ್ಚಯವಾಗಿಯೂ ಕಾಣಿಸುತ್ತಾನೆ. ನಾವು ಅನ್ನುತ್ತೇವೆ, “ಕಾಣದಿರುವುದನ್ನು ನಂಬುವುದಿಲ್ಲ” ಎಂದು. ಅಜ್ಜನನ್ನು ಕೆಲವು ಚಿಕ್ಕಮಕ್ಕಳು ನೋಡಿರುವುದಿಲ್ಲ ಎಂದಿಟ್ಟುಕೊಳ್ಳೋಣ. ಅವರು ಅಪ್ಪನನ್ನು “ತಂದೆಯಿಲ್ಲದವನು” ಎಂದೇನು ಕರೆಯುವುದು? ಭಗವಂತನು ಸರ್ವವ್ಯಾಪಿ. ಅವನು ಎಲ್ಲದರಲ್ಲೂ ನೆಲೆನಿಂತಿರುವನು. ಸೆಗಣಿಯನ್ನು ಉಪಯೋಗಿಸಬೇಕಾದ ರೀತಿಯಲ್ಲಿ ಉಪಯೋಗಿಸಿದಾಗ ಅದರಲ್ಲಿ ಅಡಕವಾಗಿರುವ ಶಕ್ತಿಯಿಂದ ಬೆಂಕಿ ಹತ್ತಿಕೊಳ್ಳುತ್ತದೆ. […]

ನಮಗೆ ಯಾವುದೇ ವಸ್ತು ದೊರಕಬೇಕಾದರೂ ಅದಕ್ಕೊಂದು ಬೆಲೆ ತೆರಬೇಕು. ಆ ಕಡೆಗೆ ಏನೂ ಕೊಡದೆ, ಏನಾದರೂ ಗಳಿಸಲು ಕರ್ಮ ಕ್ಷೇತ್ರದಲ್ಲಿ ಸಾಧ್ಯವಲ್ಲ. ಒಳ್ಳೆ ಉದ್ಯೋಗ ಸಿಗಬೇಕೆಂದಿದ್ದರೆ, ನಿದ್ದೆಗೆಟ್ಟು, ಕಷ್ಟಪಟ್ಟು ಕಲಿಯಬೇಕು. ಒಳ್ಳೆ ಫಸಲು ಬರಬೇಕೆಂದಿದ್ದರೆ, ಸಮಯಕ್ಕೆ ಸರಿಯಾಗಿ ಬೀಜ ಬಿತ್ತಿ, ಬೇಕಾದ ಗೊಬ್ಬರವನ್ನೂ ನೀರನ್ನೂ ಕೊಡಬೇಕು. – ಅಮ್ಮ

ಸಮುದಾಯದಲ್ಲಿ ಒಳ್ಳೆ ಬದಲಾವಣೆ ತರಬೇಕೆಂದು ನಾವು ಪ್ರಾಮಾಣಿಕವಾಗಿ ಬಯಸುವುದಾದರೆ, ಅದಕ್ಕಾಗಿ ನಮ್ಮ ಕಡೆಯಿಂದ ನಾವು ಪ್ರಯತ್ನ ಮಾಡಬೇಕು. ನಾವು ಕ್ರಿಯಾತ್ಮಕವಾಗಿ ಏನಾದಾರೂ ಮಾಡಬೇಕು. ನಾವು ಒಳ್ಳೆಯದನ್ನು ಮಾಡಬೇಕೆಂದು ಬಯಸಿದರೆ ಮಾತ್ರ ಸಾಲದು. ಒಂದಷ್ಟು ತ್ಯಾಗ, ಸ್ವಲ್ಪ ಪ್ರಯತ್ನ ಮಕ್ಕಳ ಕಡೆಯಿಂದ ಮಾಡಬೇಕು. ­- ಅಮ್ಮ