ಅಮೃತನಿಕೇತನ್, ಪಾರಿಪ್ಪಳ್ಳಿ
1987ರಲ್ಲಿ ಪಾರಿಪ್ಪಳ್ಳಿಯ ಒಂದು ಅನಾಥಾಲಯವನ್ನು ತೆಗೆದುಕೊಳ್ಳುವುದರಿಂದ ಅಮ್ಮ ತನ್ನ ಮಾನವೀಯ ಕಾರ್ಯಗಳಿಗೆ ನಾಂದಿ ಹಾಡಿದರು. ಅಲ್ಲಿ ಮಕ್ಕಳ ದುರಂತಮಯ ಅವಸ್ಥೆ ಕಂಡು ಮನನೊಂದ ಅಮ್ಮ, ಅಮೃತಪುರಿಯ ಮೊಟ್ಟ ಮೊದಲಿನ ಪ್ರಾರ್ಥನಾಮಂದಿರ ಕಟ್ಟಿಸಲು ಭಕ್ತರು ನೀಡಿದ್ದ ಹಣವನ್ನು ಆ ಮಕ್ಕಳ, ಶಾಲೆಯ ಜವಾಬ್ದಾರಿ ವಹಿಸಿಕೊಳ್ಳಲು ವಿನಿಯೋಗಿಸಿದರು. ಇಂದು ಐನೂರರಷ್ಟು ಮಕ್ಕಳು ಇಲ್ಲೇ ವಾಸಿಸಿ ಓದುತ್ತಿದ್ದಾರೆ. ಅವರ ವಿದ್ಯಾಭ್ಯಾಸವನ್ನೂ, ಆರೋಗ್ಯರಕ್ಷಣೆಯನ್ನೂ, ಕಲಾಕೌಶಲ, ಸರ್ವತೋಮುಖ ಪ್ರಗತಿಯನ್ನೂ ಗಮನದಲ್ಲಿಟ್ಟು ಕಾರ್ಯಪ್ರವೃತ್ತವಾಗಿದೆ ಪಾರಿಪ್ಪಳ್ಳಿಯಲ್ಲಿನ ಅನಾಥಾಲಯ ಅಮೃತನಿಕೇತನ್. ಸಾಹಿತ್ಯ, ಸಂಗೀತ-ನೃತ್ಯದಲ್ಲಿ, ವಿವಿಧ ವಾದ್ಯೋಪಕರಣಗಳನ್ನು ನುಡಿಸುವುದರಲ್ಲಿ ಈ ಶಾಲಾ ಮಕ್ಕಳು ತಮ್ಮ ಪ್ರತಿಭೆಯನ್ನು, ಕುಶಲತೆಯನ್ನು ರಾಜ್ಯ ಮಟ್ಟದಲ್ಲಿ ಸಾಧಿಸಿ ತೋರಿಸಿದ್ದಾರೆ.
ಕೀನ್ಯ ಹಾಗೂ ಹೈತಿಯಲ್ಲಿ ಸಹ ಅಮ್ಮ ಅನಾಥಾಲಯಗಳನ್ನು ಸ್ಥಾಪಿಸಿದ್ದಾರೆ.

Kenya orphange children

ಅಮೃತಕುಟೀರಂ ಗೃಹದಾನ ಯೋಜನೆ

ಬಡವರಿಗೆ ಉಚಿತವಾಗಿ ಮನೆಗಳನ್ನು ಕಟ್ಟಿಸಿಕೊಡುವ ಯೋಜನೆ ಮಠವು ಮೊದಲಲ್ಲಿ ಆರಂಭಿಸಿದ್ದು 1990 ರಲ್ಲಿ. ಆ ಕಾಲಘಟ್ಟದಲ್ಲಿ ನಿರ್ಮಿಸಿ ನೀಡಿದ ಮನೆಗಳುಮಾತ್ರವಲ್ಲದೆ, 1998ರಲ್ಲಿ ಮಠವು ಪ್ರಾರಂಭಿಸಿದ ಗೃಹದಾನ ಯೋಜನೆ “ಅಮೃತಕುಟೀರಂ.” ಮೊದಲಿನ 30,000 ಮನೆಗಳನ್ನು ಐದು ವರ್ಷಗಳಲ್ಲಿ ಪೂರ್ಣಗೊಳಿಸಿತು. ಭುಜ್‌ನ ಭೂಕಂಪದಲ್ಲಿ ದತ್ತು ತೆಗೆದುಕೊಂಡ ಮೂರು ಗ್ರಾಮಗಳಲ್ಲಿ ನಿರ್ಮಿಸಿ ನೀಡಿದ 1200 ಮನೆಗಳು ಇದರಲ್ಲಿ ಒಳಗೊಂಡಿದೆ.
ಈಗ ಭಾರತದಾದ್ಯಂತ 1,00,000 ಅಮೃತಕುಟೀರಂ ಮನೆಗಳನ್ನು ನಿರ್ಮಿಸಿ ಕೊಡುವ ಕಾರ್ಯ ನಡೆಯುತ್ತಲಿದೆ. ಕೇರಳವಲ್ಲದೆ ತಮಿಳ್ನಾಡು, ಕರ್ಣಾಟಕ, ಆಂಧ್ರ, ಮಹಾರಾಷ್ಟ್ರ, ರಾಜಸ್ಥಾನ್, ದೆಹಲಿ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಒರಿಸ್ಸಾ, ಬಂಗಾಳ ಮುಂತಾದ ಕಡೆಗಳಲ್ಲೂ ಅಮೃತಕುಟೀರಂ ಮನೆಗಳನ್ನು ಬಡವರಿಗೆ ಉಚಿತವಾಗಿ ಕಟ್ಟಿಸಿಕೊಡುವ ಕಾರ್ಯ ಭರದಿಂದ ಸಾಗುತ್ತಲಿದೆ.

ಅಮೃತನಿಧಿ – ಮಾಸಿಕ ಪಿಂಚಣಿ
ಭಾರತದಾದ್ಯಂತ, ಸುಮಾರು ಒಂದು ಲಕ್ಷದಷ್ಟು ನಿರ್ಗತಿಕ, ವಿಧವೆಯರಿಗೂ ವಿಕಲಾಂಗರಿಗೂ ಪ್ರತಿ ತಿಂಗಳು ಪೆನ್ಷನ್ ಒದಗಿಸುವ ಯೋಜನೆಯೇ ಅಮೃತನಿಧಿ. ಅರ್ಹತೆಯುಳ್ಳ ಹೊಸ ಅರ್ಜಿದಾರರರನ್ನು ಆಶ್ರಮದ ಸಾಮರ್ಥ್ಯಕ್ಕನುಗುಣವಾಗಿ ಈ ಅಮೃತನಿಧಿ ಯೋಜನೆಯಲ್ಲಿ ಸೇರಿಸಲಾಗುತ್ತದೆ.

ವೃದ್ಧಾಶ್ರಮಗಳು
ತಮಿಳ್ನಾಡು, ಕೇರಳ, ಕರ್ಣಾಟಕಗಳಲ್ಲಿ ವೃದ್ಧಾಶ್ರಮಗಳು ನಡೆದುಕೊಂಡು ಬರುತ್ತಿವೆ. ಅಮೇರಿಕದ ಓಕ್ಲಹೋಮದಲ್ಲೂ ಒಂದು ವೃದ್ಧಾಶ್ರಮವಿದೆ.

ಜನ ಶಿಕ್ಷಣ ಸಂಸ್ಥಾನ
ಜನ ಶಿಕ್ಷಣ ಸಂಸ್ಥಾನವು ಶಿವಕಾಶಿಯಲ್ಲೂ, ಇಡುಕ್ಕಿ ಜಿಲ್ಲೆಯಲ್ಲೂ ಕೇಂದ್ರ ಸರ್ಕಾರದ ಸಹಾಯದಿಂದ, ಮಠದ ಮೇಲ್ವಿಚಾರಣೆಯಲ್ಲಿ ನಡೆಸುವ ಸ್ವಯಂ ಉದ್ಯೋಗ ಕುಶಲತೆಯ ತರಬೇತಿ ಯೋಜನೆ.

self help group

ಅಮೃತಶ್ರೀ
ಈ ಅಮೃತಶ್ರೀ ಯೋಜನೆಯಡಿಯಲ್ಲಿ ಬಡ ಹೆಂಗಸರಿಗೆ ಸ್ವಯಂಉದ್ಯೋಗ ಕುಶಲತೆಯನ್ನು ಕಲಿಸಲಾಗುತ್ತದೆ. ನಿತ್ಯೋಪಯೋಗದ ವಸ್ತುಗಳ ಉತ್ಪಾದನೆಗೂ ಮಾರಾಟಕ್ಕೂ ಬೇಕಾದ ಸಾಧನ ಸಾಮಾಗ್ರಿಗಳನ್ನೂ, ಧನ ಸಹಾಯವನ್ನೂ ಒದಗಿಸಲಾಗುತ್ತದೆ. ೧೦ ರಿಂದ ೨೦ ರವರೆಗೆ ಅಂಗಗಳುಳ್ಳ ೫೦೦೦ದಷ್ಟು ಯೂನಿಟ್ಟುಗಳಿರುವ ಅಮೃತಶ್ರೀ, ನಾಲ್ಕು ರಾಜ್ಯಗಳಲ್ಲಿ ಪಸರಿಸಿದೆ.

ಅಮೃತ ನೀತಿ ಪ್ರತಿಷ್ಠಾನ್
ಬಡವರಿಗೆ ಉಚಿತ ಕಾನೂನು ಸಲಹೆ ನೀಡುವ ಸಂಘಟನೆಯು ಅಮೃತ ನೀತಿ ಪ್ರತಿಷ್ಠಾನ್.

ಸಾಮೂಹಿಕ ಮದುವೆ
ಪ್ರತಿವರ್ಷ ನೂರಾರು ಸಂಖ್ಯೆಯಲ್ಲಿ ಬಡವರಿಗೆ ಧರ್ಮಾರ್ಥ ಮದುವೆ ನಡೆಸಿ ಕೊಡಲಾಗುತ್ತಿದೆ. ಅವರುಗಳ ಮದುವೆಯ ಉಡುಪು, ಆಭರಣ, ಹಾಗೂ ಭೋಜನಗಳಿಗೆ ಬೇಕಾದ ಒಟ್ಟು ವೆಚ್ಚವನ್ನು ಆಶ್ರಮವೇ ಭರಿಸುವುದು.