Tag / ಅಮೃತ ವಚನ

ಮಕ್ಕಳೇ, ಮುಂದಿನ ಹತ್ತಿರದ ಹೊರೆಗಲ್ಲಿನಲ್ಲಿ,* ಭಾರವನ್ನು ಇಳಿಸಬಹುದೆಂದು ಎಣಿಸಿದಾಗ ನಮ್ಮ ಭಾರ ಕಮ್ಮಿಯಾದಂತನಿಸುತ್ತದೆ; ಭರವಸೆ ಮೂಡುತ್ತದೆ. ಅದು ಬಹಳ ದೂರ ಎಂದು ಭಾವಿಸಿದಾಗ, ಭಾರ ಹೆಚ್ಚಾದಂತನಿಸುತ್ತದೆ. ಭಗವಂತನು ನಮ್ಮ ಹತ್ತಿರವಿದ್ದಾನೆ ಎಂದು ಭಾವಿಸಿರಿ. ಎಲ್ಲಾ ಭಾರವೂ ಕಮ್ಮಿಯಾಗುತ್ತದೆ. ದೋಣಿಯೋ, ಬಸ್ಸೋ ಹತ್ತಿದ ಮೇಲೆ, ಯಾತಕ್ಕೆ ಇನ್ನೂ ಭಾರ ಹೊರಬೇಕು ? ಅದನ್ನು ಅಲ್ಲೇ ಬಿಡಿರಿ. ಇದೇ ರೀತಿ, ದೇವರಿಗೆ ಎಲ್ಲವನ್ನೂ ಸಮರ್ಪಿಸಿರಿ. ಅವನು ನಮ್ಮನ್ನು ಕಾಪಾಡುವನು. * ಹಿಂದಿನಕಾಲದಲ್ಲಿ ಹಳ್ಳಿಗಳಲ್ಲಿ ಬೆನ್ನು ಹೊರೆ ಹಾಗೂ ತಲೆ ಹೊರೆ […]

ಒಬ್ಬ ಆಧ್ಯಾತ್ಮಿಕ ಜೀವಿಯು ಜಗತ್ತಿನ ಪೂರ್ಣ ಭಾರಕ್ಕೆ ಹೆಗಲು ಕೊಡಬೇಕಾದವನು. ಅವನು ಎಂದೂ ದುರ್ಬಲನಾಗಬಾರದು; ಚುರುಕಿನ ಸಿಂಹದ ಮರಿಯಾಗಿರಬೇಕು. ____ ಗುರುವಿನಲ್ಲಿ ಪೂರ್ತಿ ವಿಶ್ವಾಸವಿರುವವನು ಗುರುವಿನಲ್ಲಿ ಒಂದು ಪ್ರಶ್ನೆಯನ್ನು ಸಹ ಕೇಳುವುದಿಲ್ಲ. ಗುರು ಹೇಳುವುದನ್ನೇ ಅನುಸರಿಸುವನು. ಅದುವೇ ಗುರುಸೇವೆ. ಶಿಷ್ಯನ ಶ್ರದ್ಧೆಯೊಡಗೂಡಿರುವ ಓಡಾಟ ನೋಡಿದಾಗ ತನಗರಿವಿಲ್ಲದೆಯೆ ಗುರು ಅವನಲ್ಲಿ ಕೃಪೆ ಸುರಿಸುತ್ತಾನೆ. ತಗ್ಗು ನೆಲದಲ್ಲಿ, ನೀರು ತನ್ನಷ್ಟಕ್ಕೆ ಹರಿದು ಸೇರುವ ಹಾಗೆ. ____ ಆಧ್ಯಾತ್ಮಿಕವೂ ಲೌಕಿಕವೂ ಜೊತೆಜೊತೆಯಾಗಿ ಹೋಗಲು ಸಾಧ್ಯವಿದೆ. ಆದರೆ, ಸಂಬಂಧಗಳ ಬಂಧನವಿಲ್ಲದೆ, ನಿಷ್ಕಾಮವಾಗಿ ಕೆಲಸ […]

ಮಕ್ಕಳ ಚಿತ್ತವೃತ್ತಿಗಳು, ಕನಸುಗಳು ಎಲ್ಲವೂ ಅಮ್ಮನನ್ನು ಹಾದು ಹೋಗುವುದು. ಹಾಗಾಗಿ ಮಕ್ಕಳಿಗೆ ಅಮ್ಮನಿಂದ ಏನನ್ನೂ ಬಚ್ಚಿಡಲಾಗದು. ___ ಭಗವಾನ್ ಶ್ರೀ ಕೃಷ್ಣನು ಶುದ್ಧ ಬೋಧನು. ನೀವು ಬಯಕೆಗಳನ್ನು ಪೂರ್ಣವಾಗಿ ತ್ಯಜಿಸಿದಲ್ಲಿ ನಿಮ್ಮ ಮನದಲ್ಲಿ ಕೃಷ್ಣನ ನಿಜ ರೂಪ ಸ್ಪಷ್ಟವಾಗುವುದು. ___ ಮರಗಳು, ಬಳ್ಳಿಗಳು, ವಾತಾವರಣವೆಲ್ಲವೂ ರಾತ್ರಿ ನಿಶ್ಚಲವಾಗುತ್ತದೆ. ಪ್ರಾಣಿಗಳಲ್ಲದೆ, ಲೌಕಿಕರಾಗಿ ಜೀವಿಸುವವರವರನ್ನೂ, ನಿದ್ದೆ ಜಯಿಸುತ್ತದೆ. ಈ ಕಾರಣದಿಂದ, ವಾತಾವರಣದಲ್ಲಿ ಲೌಕಿಕ ವಿಚಾರಗಳ ತರಂಗಗಳು ಕಮ್ಮಿಯಾಗುತ್ತದೆ. ರಾತ್ರಿಯ ಅಂತಿಮ ಜಾವದಲ್ಲಿ ಹೂವುಗಳು ಅರಳುವುದು. ವಾತಾವರಣದಲ್ಲಿ ಆಗ ಒಂದು ವಿಶೇಷ […]

ನಿಮ್ಮ ದಿನದಲ್ಲಿ ಇಪ್ಪತ್ತನಾಲ್ಕು ಗಂಟೆಗಳಿದೆ. ಒಂದು ಗಂಟೆ ದೈವೀ ವಿಚಾರಗಳಿಗೆ ಮೀಸಲಿಡಿರಿ. ಜೋರಾಗಿ ಅಳುತ್ತ ಅರ್ಧ ಗಂಟೆ ಪ್ರಾರ್ಥನೆ ಮಾಡಿದರೆ ಸಾಕು, ದೇವರ ಕೃಪೆ ನಿಮ್ಮನ್ನು ಬಂದು ತಲಪುವುದು. ಏಕಾಗ್ರತೆ ಬೇಕು; ಭಕ್ತಿ ಬೇಕು. ಈ ಕಲಿಯುಗದಲ್ಲಿ ನಾಮ ಜಪ ಸುಲಭ. ಮನಕರಗುವ ಭಜನೆಯು ಎಷ್ಟೋ ಒಳ್ಳೆಯ ಸಾಧನಾಮಾರ್ಗ. ______________ ತಳಪಾಯ ಚೆನ್ನಾಗಿ ಗಟ್ಟಿಯಾಗಿದ್ದರೆ ಮಾತ್ರವೇ ಕಟ್ಟಡ ಮೇಲೆಬ್ಬಿಸಲು ಸಾಧ್ಯ; ಬಹಳ ಕೆಳಗಿದ್ದರೆ ಮಾತ್ರವೇ ಏರಲು ಸಾಧ್ಯ. ______________ ಕಾಮವನ್ನು ಹೋಗಲಾಡಿಸುವುದು ಬಹಳ, ಬಹಳ ಕಷ್ಟ. ರಾಮನು […]