ಧ್ಯಾನವು ಚಿನ್ನದ ಹಾಗೆ ಬಹು ಮೂಲ್ಯವುಳ್ಳದು. ಭೌತಿಕ ಐಶ್ವರ್ಯಕ್ಕೂ,ಮೂಕ್ತೀಗೂ,ಶಾಂತಿಗೂ ಧ್ಯಾನವು ಒಳ್ಳೆಯದು. ಅದಕ್ಕಾಗಿ ಉಪಯೋಗಿಸುವ ಸಮಯ ಎಂದಿಗೂ ನಷ್ಟವಾಗುವಂತದಲ್ಲ. ನದಿಯ ದಡದಲ್ಲಿ ದೋಣಿಯನ್ನು ಕಟ್ಟಿಟ್ಟು ಹುಟ್ಟು ಹಾಕುವದಾದರೆ ಆಚೆಯದಡಕ್ಕೆ ಮುಟ್ಟುವುದಿಲ್ಲ. ಅದೇ ರೀತಿ “ನಾನು” ಎನ್ನುವ ಚಿಂತೆಯನ್ನು ಬಿಟ್ಟು “ನಿನ್ನ” {ಭಗವಂತನ} ಕೈಯಲ್ಲಿನ ಲೇಖನಿ, ಅಥವಾ ಬಣ್ಣ ಹಚ್ಚುವ ಒಂದು ಬ್ರಶ್ ಎನ್ನುವ ರೀತಿಯಲ್ಲಿ ರ್ಪೂಣವಾಗಿ ಸಮರ್ಪಿಸಬೇಕು. ಈ ರೀತಿಯ ಶರಣಾಗತಿಯನ್ನು ನಮ್ಮಲ್ಲಿ ಬೆಳೆಸಿಕ್ಕೊಳ್ಳಬೇಕು. ಪ್ರಯತ್ನಿಸ ಬಾರದು ಎಂದಲ್ಲ; ಹಾಗೆ ಅರ್ಥ ಮಾಡಿಕೊಳ್ಳಬಾರದು. ಪ್ರಯತ್ನಕ್ಕೆ ಯಾವಾಗಲು ಒಂದು ಪರೀಧಿ ಇದೆ. ಅದನ್ನು ಪೂರ್ಣವಾಗಿಸುವುದು ಕೃಪೆ. ನಾವು ಯಾತ್ರೆ ತುಂಬಾ ಚೆನ್ನಾಗಿತ್ತು ಎನ್ನುತ್ತೇವೆ. ಆದರೆ ನಾವು ಯಾತ್ರೆ ಮಾಡುವಾಗ ನಮ್ಮ ಮುಂದೇ, ಹಿಂದೇ ಎಷ್ಟೋ ವಾಹನಗಳು ಹಾದು ಹೋಗುತ್ತವೆ. ಅದರಲ್ಲಿರುವ ಯಾವುದಾದರು ಒಬ್ಬ ಚಾಲಕ ಒಂದು ನಿಮಿಷವಾದರು ಅಶ್ರಧ್ಧೆಯಿಂದ ವಾಹನವನ್ನು ಚಲಾಯಿಸಿದ್ದರೆ, ನಮ್ಮ ಸಾವು ಖಂಡಿತ. ಅದೊಂದೂ ಸಂಭವಿಸದೆ ನಮ್ಮನ್ನು ಸುರಕ್ಷಿತವಾಗಿ ಗುರಿತಲುಪಿಸಿರುವದು ಭಗವಂತನ ಕೃಪೆಯೊಂದೇ. ಕೃಪೆ ದೊರಕಬೇಕೆಂದರೆ ಪ್ರತಿಯೊಂದು ಮಾತಿನಲ್ಲೂ, ಕೆಲಸದಲ್ಲೂ ವಿನಯವನ್ನು ನಾವು ಬೇಳೆಸಿಕೊಳ್ಳಬೇಕು. ವಿನಯದ ಭಾಷೆಯೆಂದರೆ ತಲೆಭಾಗಿಸುವುದಲ್ಲ; ಅದು ಪ್ರೇಮದ ಭಾಷೆಯಾಗಿದೆ. ಮಕ್ಕಳ ಹೃದಯದಲ್ಲಿರುವ ನಿಸ್ವಾರ್ಥತೆ ಮತ್ತು ಭಗವಂತನ ಪ್ರೇಮದ ದೀಪವು ಈ ಲೋಕಕ್ಕೆ ಬೆಳಕಾಗಲಿ.
(ಅಮ್ಮನ ೨೦೦೧ ಜನ್ಮದಿನದ ಸಂದೇಶದಿಂದ)