27 ಸೆಪ್ಟಂಬರ್, 2010
ಕೇಂದ್ರ ಐ.ಟಿ. ಮಂತ್ರಿ ಗುರುದಾಸ್ ಕಾಮತ್‌ರವರು ಅಮೃತ ಶ್ರೀ ಸುರಕ್ಷಾ ಯೋಜನೆಯ ಉದ್ಘಾಟನೆ ಮಾಡಿದರು. 10,000 ಅಮೃತ ಶ್ರೀಯ ಮಹಿಳಾ ಸದಸ್ಯರಿಗೆ ಈ ಮೂಲಕ ವಿಮಾ ಪಾಲಿಸಿ ಈ ಸಮಾರಂಭದಲ್ಲಿ ಸಿಕ್ಕಿದಂತಾಯಿತು. ಒಟ್ಟು ಒಂದು ಲಕ್ಷ ಅಮೃತ ಶ್ರೀ ಮಹಿಳೆಯರು ಇಂಶೂರೆನ್ಸ್ ಸೌಲಭ್ಯಕ್ಕೆ ಅರ್ಹರು.
ಒಂದು ನಿಶ್ಚಿತ ಆದಾಯ ತರುವ ಮನೆಯ ಸದಸ್ಯಳಿಗೆ ಮರಣವೋ ಅಂಗಹೀನತೆಯೋ ಸಂಭವಿಸಿದರೆ ಸಂಸಾರದ ಆರ್ಥಿಕ ಆಧಾರ ಸ್ಥಂಭವೆ ಉರುಳಿ, ಬದುಕು ದುರ್ಬರ ಬವಣೆಯಾಗುವುದನ್ನು ಮನಗಂಡ ಅಮ್ಮ ಅವರಿಗೆ ಸುರಕ್ಷಿತತೆಯ ಹೊಸ ಜಾಲವನ್ನೆ ನೇಯ್ದರು ಈ ಅಮೃತ ಶ್ರೀ ಸುರಕ್ಷಾ ಯೋಜನೆಯನ್ನು ಸೃಷ್ಟಿಸಿ.
ಅಮೃತ ಶ್ರೀ ಮತ್ತು ಎಲ್.ಐ.ಸಿ.ಯ ಸಹಯೋಗದಿಂದ ಪ್ರಾಥಮಿಕವಾಗಿ ಕುಟುಂಬದ ಆರ್ಥಿಕ ಸುರಕ್ಷಿತತೆಗಾಗಿ ವಿನ್ಯಾಸಗೊಂಡ ಅಮೃತ ಶ್ರೀ ಸುರಕ್ಷಾ ಯೋಜನೆ ಫಲ ಕೊಡುವುದು ವಿಮೆಯ ಮೂಲಕ. ಸ್ವಾಭಾವಿಕ ಮರಣಕ್ಕೆ 40,000 ರುಪಾಯಿಗಳೂ, ದುರ್ಮರಣಕ್ಕೆ 85,000 ರುಪಾಯಿಗಳೂ, ತಾತ್ಕಾಲಿಕ ಅಂಗಹೀನತೆಗೆ 35,000 ರುಪಾಯಿಗಳೂ, ಶಾಶ್ವತ ಅಂಗಹೀನತೆಗೆ 75,000 ರುಪಾಯಿಗಳೂ ಇನ್ಶೂರೆನ್ಸ್ ಮೂಲಕ ಪರಿಹಾರವಾಗಿ ಲಭಿಸುತ್ತದೆ. ಆಶ್ರಮವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಮೆ ರಕ್ಷಣೆಯಿರುವ 15 % ಅಮೃತ ಶ್ರೀ ಸುರಕ್ಷಾ ಯೋಜನೆಯ ಮಹಿಳೆಯರ ಪ್ರತಿ ಮಗುವಿಗೆ 1,200 ರುಪಾಯಿಗಳ ವಾರ್ಷಿಕ ವಿದ್ಯಾರ್ಥಿ ವೇತನ ಕೂಡ ನೀಡುವುದು.