27ನೇ ಸೆಪ್ಟಂಬರ್,2010
ಡಾ. ಎನ್.ಪರಮೇಶ್ವರನ್ ಉಣ್ಣಿಯವರಿಗೆಮಾತಾ ಅಮೃತಾನಂದಮಯಿ ಮಠವು ಅಮೃತಕೀರ್ತಿ ಪುರಸ್ಕಾರ ನೀಡಿ ಗೌರವಿಸಿತು. ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ದರ್ಶನ ಶಾಸ್ತ್ರಗಳ ಸಾಹಿತ್ಯಕ್ಕೆ ಡಾ. ಉಣ್ಣಿಯವರ ಕೊಡುಗೆ ವಿಶಾಲವಾದುದು, ಮಹತ್ವದ್ದು ಹಾಗೂ ಪ್ರೌಢವಾದುದು.
ಭಾರತವರ್ಷದ ಸಂಸ್ಕೃತಿಯ ಜೋಪಾಸನೆಗೆ – ಸರಕಾರಿ ಹಾಗೂ ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ಶ್ರೀ ಶಂಕರಾಚಾರ್ಯ ಸಂಸ್ಕೃತ ಯೂನಿವರ್ಸಿಟಿ, ಹಾಗೂ ಕೇರಳ ಯೂನಿವರ್ಸಿಟಿಯ ಹಿಂದಿನ ವೈಸ್-ಚಾನ್ಸಲರ್ ಆಗಿ – ಉಣ್ಣಿಯವರ ಕೊಡುಗೆ ಅಪಾರ.
ಸಂಸ್ಕೃತ ನಾಟಕ, ಕ್ಷೇತ್ರ ತಂತ್ರ ವಿದ್ಯ, ಶಾಸ್ತ್ರ, ಶಾಸ್ತ್ರೀಯ ಸಂಸ್ಕೃತ ಸಾಹಿತ್ಯ, ಅನುವಾದ ಮುಂತಾದ ಕ್ಷೇತ್ರಗಳಲ್ಲಿ, ಇಂಗ್ಲಿಷಿನಲ್ಲಿ 38 ಗ್ರಂಥಗಳನ್ನು ರಚಿಸಿರುವುದಲ್ಲದೆ ಅನೇಕ ಉಪನಿಷತ್ತುಗಳನ್ನೂ ಪುರಾಣಗಳನ್ನೂ ಮಲೆಯಾಳಕ್ಕೆ ಭಾಷಾಂತರಿಸಿದ್ದಾರೆ. ಇಷ್ಟಲ್ಲದೆ, 150ಕ್ಕಿಂತಲೂ ಅಧಿಕ ಪ್ರಬಂಧಗಳನ್ನು ಇಂಡೋಲಾಜಿಕಲ್ ಜರ್ನಲ್‌ಗಳಲ್ಲಿ ಪ್ರಕಟಿಸಿರುವುದಲ್ಲದೆ, ಡಜನ್‌ಗಟ್ಟಲೆ ದೇಶ ವಿದೇಶಗಳ ಶಾಸ್ತ್ರಜ್ಞರಿಗೆ, ಅವರ ಪಿಎಚ್.ಡಿ.ಗೆ ಮಾರ್ಗದರ್ಶಕರಾಗಿದ್ದರು.
ಈ ವಾರ್ಷಿಕ ಅಮೃತ ಕೀರ್ತಿ ಪುರಸ್ಕಾರವು ಮಾತಾ ಅಮೃತಾನಂದಮಯಿ ಮಠದಿಂದ 1,23,456 ರುಪಾಯಿಗಳ ನಗದು ಬಹುಮಾನ, ಪ್ರಸಿದ್ಧ ಶಿಲ್ಪಿಯಿಂದ ಕೆತ್ತಲ್ಪಟ್ಟ ಶ್ರೀ ಸರಸ್ವತಿ ದೇವಿಯ ವಿಗ್ರಹ ಹಾಗೂ ಶಿಫಾರಸು ಪತ್ರವನ್ನೊಳಗೊಂಡಿರುತ್ತದೆ.
2001ರಲ್ಲಿ ಮಾತಾ ಅಮೃತಾನಂದಮಯಿ ಮಠವು (ಮಾ.ಅ.ಮ.) ಅಮೃತಕೀರ್ತಿ ಪುರಸ್ಕಾರವನ್ನು ನೀಡುವ ಪದ್ಧತಿ ಪ್ರಥಮವಾಗಿ ಜಾರಿಯಲ್ಲಿ ತಂದಿತು.
ಪುರಸ್ಕಾರವನ್ನು ಸ್ವೀಕರಿಸಿ “ಆಧ್ಯಾತ್ಮಿಕ ಪ್ರಗತಿಗೆ ನನ್ನ ಜೀವನವನ್ನು ಮುಡಿಪಾಗಿರಿಸುವೆನು ಹಾಗೂ ಅದಕ್ಕೆ ಅಮ್ಮನ ಮಾರ್ಗದರ್ಶನ ಕೋರುತ್ತೇನೆ” ಎಂದು ತಮ್ಮ ಸ್ವೀಕಾರ ಭಾಷಣದಲ್ಲಿ, ತುಂಬಿದ ಸಭೆಗೆ ವಿನಯಪೂರ್ವಕವಾಗಿ ಹೇಳಿ ಅಮ್ಮನತ್ತ ತಿರುಗಿ ತಲೆ ಬಾಗಿಸಿ ವಂದಿಸಿದರು.