27ನೇ ಸೆಪ್ಟಂಬರ್,2010 ಡಾ. ಎನ್.ಪರಮೇಶ್ವರನ್ ಉಣ್ಣಿಯವರಿಗೆಮಾತಾ ಅಮೃತಾನಂದಮಯಿ ಮಠವು ಅಮೃತಕೀರ್ತಿ ಪುರಸ್ಕಾರ ನೀಡಿ ಗೌರವಿಸಿತು. ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ದರ್ಶನ ಶಾಸ್ತ್ರಗಳ ಸಾಹಿತ್ಯಕ್ಕೆ ಡಾ. ಉಣ್ಣಿಯವರ ಕೊಡುಗೆ ವಿಶಾಲವಾದುದು, ಮಹತ್ವದ್ದು ಹಾಗೂ ಪ್ರೌಢವಾದುದು. ಭಾರತವರ್ಷದ ಸಂಸ್ಕೃತಿಯ ಜೋಪಾಸನೆಗೆ – ಸರಕಾರಿ ಹಾಗೂ ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ಶ್ರೀ ಶಂಕರಾಚಾರ್ಯ ಸಂಸ್ಕೃತ ಯೂನಿವರ್ಸಿಟಿ, ಹಾಗೂ ಕೇರಳ ಯೂನಿವರ್ಸಿಟಿಯ ಹಿಂದಿನ ವೈಸ್-ಚಾನ್ಸಲರ್‌ ಆಗಿ – ಉಣ್ಣಿಯವರ ಕೊಡುಗೆ ಅಪಾರ. ಸಂಸ್ಕೃತ ನಾಟಕ, ಕ್ಷೇತ್ರ ತಂತ್ರ ವಿದ್ಯ, ಶಾಸ್ತ್ರ, […]