ಪ್ರಶ್ನೆ: ಅಮ್ಮಾ, ಧ್ಯಾನದಿಂದ ಏಳಬೇಕಾದರೆ ಗಮನಿಸಬೇಕಾದ ಅಂಶಗಳು ಯಾವುವು ? “ಮಕ್ಕಳೇ, ಧ್ಯಾನ ಮುಗಿದ ಕೂಡಲೇ ತಟ್ಟನೆ ಎದ್ದೇಳುವುದೋ, ಮಾತನಾಡುವುದೋ ಮಾಡಬಾರದು. ಸ್ವಲ್ಪ ಸಮಯ ಶವಾಸನದಲ್ಲಿರುವುದು ಒಳ್ಳೆಯದು. ಆಗ ನಿದ್ದೆ ಬರದಂತೆ ವಿಶೇಷ ಜಾಗ್ರತೆ ವಹಿಸಬೇಕು. ಇಂಜೆಕ್ಷನ್ ಚುಚ್ಚಿದ ಮೇಲೆ ಡಾಕ್ಟರು ಸ್ವಲ್ಪ ಸಮಯ ರೆಸ್ಟ್ ತೆಗೆದುಕೊಳ್ಳಲಿಕ್ಕೆ ಹೇಳುವುದಿಲ್ಲವೇ ? ಅದೇ ತರ ಧ್ಯಾನಾನಂತರ ಏಕಾಂತ ಅವಶ್ಯ. ಸಾಧನೆ ಮಾಡುವಾಗಲ್ಲ; ಅದರ ನಂತರವೇ ಅದರ ಪರಿಣಾಮ ದೊರಕುವುದು.” ಪ್ರಶ್ನೆ: ಅಮ್ಮಾ, ಎಷ್ಟು ಧ್ಯಾನ ಮಾಡಿಯೂ, ಬಾಹ್ಯ ವಸ್ತುಗಳ […]