ಮಕ್ಕಳೇ, ಸುತ್ತಲೂ ಒಂದು ಸಲ ದೃಷ್ಟಿ ಹರಿಸಿ ನೋಡಿ. ಅದನ್ನೊಮ್ಮೆ ವಿಷ್ಲೇಶಣೆ ಮಾಡಿ. ಲೋಕದ ಇವತ್ತಿನ ಪರಿಸ್ಥಿತಿ ಏನಂತ ಸ್ವಲ್ಪ ಅರಿತುಕೊಳ್ಳೋಣ. ಅದಕ್ಕೆಂದೇ ಇರುವ ದಿವಸವಿದು. ಜಗತ್ತಿನ ಜನಗಳು ಎಷ್ಟೆಲ್ಲಾ ತರದಲ್ಲಿ ಕಷ್ಟ ಪಡುತ್ತಿದ್ದಾರೆ. ಅವರ ಜೀವನವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಒಂದು ವರ್ಷದ ಹಿಂದೆ ನಡೆದ ಘಟನೆಯೊಂದು ಅಮ್ಮನಿಗೆ ನೆನಪಾಗುತ್ತಿದೆ; ಮುಂಬೈಯಲ್ಲಿನ ಮಕ್ಕಳು ಹೇಳಿ ಗೊತ್ತಾಗಿದ್ದು. ಮುಂಬೈಯಲ್ಲಿ ಒಂದು ಕಡೆ ಒಬ್ಬಾತನಿಗೆ ಷುಗರಿನ ಖಾಯಿಲೆಯಿತ್ತು. ಆ ವ್ಯಕ್ತಿಯ ಕಾಲಲ್ಲಿ ಒಂದು ಗಾಯವಾಗಿ, ಬಲಿತು ದೊಡ್ಡ ಹುಣ್ಣಾಯಿತು. […]