ಪ್ರಶ್ನೆ: ಅಮ್ಮಾ, ಪಿತೃಕರ್ಮಕ್ಕೆ ಫಲಪ್ರಾಪ್ತಿಯಿದೆಯೇ ? ಮಕ್ಕಳೇ, ಶುದ್ಧ ಸಂಕಲ್ಪಕ್ಕೆ ದೊಡ್ಡ ಶಕ್ತಿಯಿದೆ. ಕರ್ಮ ಫಲಿಸಲೇ ಬೇಕೆಂದಿದ್ದರೆ ಶುದ್ಧ ಸಂಕಲ್ಪ ಬೇಕು. ಪಿತೃಕರ್ಮ ನಡೆಸುವಾಗ ಸತ್ತ ವ್ಯಕ್ತಿಯ ದಿನ, ನಾಮ ರೂಪ, ಭಾವಗಳನ್ನೆಲ್ಲ ಚಿಂತಿಸಿ ಮನಸ್ಸಲ್ಲಿ ಮಾತ್ರ ಜಪ ಮಾಡುತ್ತಾರೆ. ಮಕ್ಕಳೇ, ಪ್ರತಿಯೊಂದು ಕರ್ಮಕ್ಕೂ ಒಂದೊಂದು ದೇವತೆಯಿದೆ. ಪರ್ಶಿಯದಲ್ಲಿರುವ ಮಗನ ಕಾಗದ ಊರಲ್ಲಿರುವ ತಂದೆಗೂ ತಾಯಿಗೂ ಪೋಸ್ಟ್ ಮ್ಯಾನ್ ವಿಳಾಸ ತಪ್ಪದೆ ತಲಪಿಸುವುದಿಲ್ಲವೆ ? ಆದರೆ ಇದು ಖಂಡಿತ: ಸಂಕಲ್ಪ ಶುದ್ಧವಾಗಿದ್ದರೆ ಮಾತ್ರ ದೇವತೆಗಳು ಆಯಾಯ ಕರ್ಮದ […]