ನಾವೊಂದು ಒಂಟಿ ದ್ವೀಪವಲ್ಲ. ಒಂದೇ ಸರಪಳಿಯ ಕೊಂಡಿಗಳು ನಾವು. ನಾವು ಮಾಡುವ ಒಂದೊಂದು ಕೃತಿಯೂ, ತಿಳಿದೋ ತಿಳಿಯದೆಯೋ ಇತರರ ಮೇಲೆ ಪರಿಣಾಮ ಬೀರುತ್ತದೆ. ಈ ಜಗತ್ತಿನಲ್ಲಿ ನಡೆದಿರುವ ಎಲ್ಲ ಯುದ್ಧಗಳೂ, ಯಾವನೋ ಒಬ್ಬ ಮನುಷ್ಯನೊಳಗೆ ಮೂಡಿದ ವಿದ್ವೇಷದ ಫಲ. ಒಬ್ಬ ವ್ಯಕ್ತಿಯ ಆಲೋಚನೆ, ನಡತೆ ಎಷ್ಟೋ ಜನಗಳನ್ನು ನಾಶ ಮಾಡಿತು. ಹಿಟ್ಲರ್ ಒಬ್ಬ ವ್ಯಕ್ತಿ. ಆದರೆ ಅವನ ಕೃತಿ ಬಾಧಿಸಿದ್ದು ಎಷ್ಟೆಲ್ಲ ಜನರನ್ನು! ನಮ್ಮ ಆಲೋಚನೆ ಇತರರನ್ನೂ, ಇತರರ ಆಲೋಚನೆ ನಮ್ಮನ್ನೂ ಬಾಧಿಸುತ್ತವೆ ಎಂದರಿತು, ಎಂದಿಗೂ ಒಳ್ಳೆಯ […]