27/09/2010, ಅಮೃತಪುರಿ ಒಂಬತ್ತು ಭಾರತೀಯ ಭಾಷೆಗಳಲ್ಲಿ ಆರಂಭಿಸಿದ ಮಾತಾ ಅಮೃತಾನಂದಮಯಿ ಮಠದ ಅಧಿಕೃತ ಅಂತರ್ಜಾಲಗಳನ್ನು ಬಿಷಪ್ ಮಾರ್ ಕ್ರಿಸೋಸ್ಟೆಮ್ ತಿರುಮೇನಿ (Bishop Mar Crisostem Metropolitan of Mar Thoma Church) ಉದ್ಘಾಟನೆ ಮಾಡಿದರು. ಕನ್ನಡ, ಮಲೆಯಾಳಂ, ತಮಿಳ್, ತೆಲುಗು, ಮರಾಠಿ, ಹಿಂದಿ, ಪಂಜಾಬಿ, ಬಂಗಾಳಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಈಗ ಆಶ್ರಮದ ಅಂತರ್ಜಾಲ ಸೇವೆ ಲಭ್ಯವಿದೆ. “ಐವತ್ತೇಳು ವರ್ಷಗಳಲ್ಲಿ ನೂರು ವರ್ಷಗಳ ಕೆಲಸ ಕಾರ್ಯಗಳನ್ನು ನಡೆಸಿದ ಅಮ್ಮ ಸಾಧಾರಣವಾದುದನ್ನು ಅಸಾಧಾರಣವಾದುದ್ದಾಗಿ ಮಾಡುತ್ತಾರೆಂದು ಮಾತ್ರ ಅಮ್ಮನನ್ನು ವಿವರಿಸಬಹುದು. […]