ಕೆಲಸಗಳನ್ನೆಲ್ಲ ಮಾಡಲಿಕ್ಕೆ ಯಂತ್ರಗಳನ್ನು ಕಂಡು ಹಿಡಿದಿರುವುದರಿಂದ ಇವತ್ತು ಮನುಷ್ಯನಿಗೆ ಒಂದು ಗಂಟೆಯಷ್ಟು ಕೂಡಾ ಕೆಲಸವಿಲ್ಲ. ಸಮಯ ಪೂರ್ತಿ ಮನಸ್ಸು ಬಣಗುಟ್ಟುತ್ತಿರುತ್ತದೆ. ದುರಾಲೋಚನೆಗಳೂ ದುಷ್ಪ್ರವೃತ್ತಿಗಳೂ ಹುಟ್ಟುವುದು ಆಗ. ನಿಮಗೆ ಸಿಗುವ ಸಮಯ ಪೋಲು ಮಾಡದೆ ಸಾಧನೆ ಮಾಡಿದರೆ ಮನಸ್ಸು ಭ್ರಷ್ಟವಾಗುವುದಿಲ್ಲ; ಅನೇಕರಿಗೆ ಸಹಾಯಕವಾಗುವುದು. ಸಯನ್ಸ್ ಈಗ ಕಂಡು ಹಿಡಿದಿರುವಂಥವುಗಳೋ, ಇನ್ನು ಕಂಡು ಹಿಡಿಯಲಿರುವಂಥವುಗಳೋ, ಯಾವುವೂ ನಿಮಗೆ ಸಮಾಧಾನ ಕೊಡಲು ಸಾಧ್ಯವಿಲ್ಲ. ಅದನ್ನೇನೂ ಅಮ್ಮ ತಪ್ಪೆಂದು ಹೇಳುವುದಿಲ್ಲ. ಇದೆಲ್ಲ ಕಂಡು ಹಿಡಿಯುವ ಕಾರಣ ಹತ್ತು ಜನ ಮಾಡುವ ಕೆಲಸಕ್ಕೆ ಇಬ್ಬರು […]