29ನೇ ಸೆಪ್ಟಂಬರ್, 2010, ಅಮೃತಪುರಿ
27ನೇ ಬೆಳಿಗ್ಗೆ ಐದು ಗಂಟೆಗೆ ಶುರುವಾದ ಜನ್ಮ ದಿನದ ಉತ್ಸವ ತೆರೆ ಕಂಡದ್ದು ಮಾರನೆಯ ಬೆಳಿಗ್ಗೆ 8.45ಕ್ಕೆ, ಈ ಕೆಳಗಿನ ಎಲ್ಲಾ ಕಾರ್ಯಕ್ರಮಗಳ ನಂತರ:
- ಮಹಾ ಗಣಪತಿ ಹೋಮ.
- ವಿಶ್ವ ಶಾಂತಿಗಾಗಿ ಸಾವಿರಗಟ್ಟಲೆ ಭಕ್ತರಿಂದ ಲಲಿತಾ ಸಹಸ್ರ ನಾಮಾರ್ಚನೆ.
- “ಅಮ್ಮನ ಬದುಕು, ಉಪದೇಶ” – ಸ್ವಾಮಿ ಅಮೃತಸ್ವರೂಪಾನಂದರಿಂದ ಮಾತು.
- ಬೆಳಿಗ್ಗೆ 9.00, ಅಮ್ಮನ ವೇದಿಕೆಯ ಮೇಲೆ ಆಗಮನ, ಮೋಹಿನಿ ಆಟ್ಟಂನ ಸ್ವಾಗತ ಪ್ರದರ್ಶನದ ಮಧ್ಯದಲ್ಲಿ.
- ಅಮ್ಮನ ಪಾದ ಪೂಜೆ – ಗುರು ಗೀತೆ ಹಾಗೂ ಅಮ್ಮನ ಅಷ್ಟೋತ್ತ ಪಠಣರದೊಂದಿಗೆ, ಸ್ವಾಮಿ ಅಮೃತಸ್ವರೂಪಾನಂದರಿಂದ.
- ಹಿರಿಯ ಶಿಷ್ಯರಿಂದ ಅಮ್ಮನಿಗೆ ಹಾರಾರ್ಪಣೆ.
- ಅಮ್ಮನಿಂದ ಜನ್ಮ ದಿನದ ಸಂದೇಶ. ಇಂಗ್ಲೀಷಿನಲ್ಲಿ ಅನುವಾದ ಸ್ವಾಮೀಜಿಯವರಿಂದ.
- ಅತಿಥಿಗಳನ್ನು ಸ್ವಾಗತಿಸುತ್ತಾ ಸ್ವಾಮೀಜಿಯವರು ಹೇಳಿದ್ದು ಹೀಗೆ:
- “ಇಂದು ಜಗತ್ತಿನ ಕಣ್ಣುಗಳು ಅಮ್ಮನ ಮೇಲಿದೆ, ಆದರೆ ಅಮ್ಮ ಏನು ಮಾಡುತ್ತಾರೆ? ನಮ್ಮ ದೃಷ್ಟಿಯನ್ನು ಬಡವರೆಡೆಗೆ, ನರಳುತ್ತಿರುವವರೆಡೆಗೆ, ಬಿದ್ದವರೆಡೆಗೆ, ರೋಗಿಗಳೆಡೆಗೆ, ಆಶಾರಹಿತರೆಡೆಗೆ ತಿರುಗಿಸುತ್ತಾರೆ. ನಮ್ಮ ದೃಷ್ಟಿಯನ್ನು ವಿಧವೆಯರತ್ತ, ಅಂಗಹೀನರತ್ತ, ದುರ್ಬಲರತ್ತ ತಿರುಗಿಸುತ್ತಾರೆ. ಅಂದರೆ ಇದು ಅಮ್ಮನ ಜನ್ಮ ದಿನದ ಸಂದೇಶದೊಂದು ಭಾಗ. ಇದೊಂದು ಉಪದೇಶ: ನಮ್ಮ ಜನ್ಮ- ನಮ್ಮ ನಿಜವಾದ ಜನ್ಮ – ಬೇರೆಯವರನ್ನು ನಮಗಿಂತಲೂ ಮುಂದಿಟ್ಟಾಗ ಆಗುತ್ತದೆ. ಇದು ಅಮ್ಮನ ಸಂದೇಶ: ಇಡೀ ಜಗತ್ತನ್ನೇ ನಿಮ್ಮ ಹೃದಯದಲ್ಲಿ ಸೇರ್ಪಡಿಸಿ; ಮುಕ್ತರಾಗಿ.”
- ಡಾ. ಎನ್.ಪರಮೇಶ್ವರನ್ ಉಣ್ಣಿಯವರಿಗೆ (ಹಿಂದಿನ ವೈಸ್-ಚಾನ್ಸಲರ್, ಶ್ರೀ ಶಂಕರಾಚಾರ್ಯ ಸಂಸ್ಕೃತ ಯೂನಿವರ್ಸಿಟಿ, ಕಾಲಡಿ, ಕೇರಳ) ಅಮೃತಕೀರ್ತಿ ಪುರಸ್ಕಾರ ಸಮರ್ಪಣೆ.
- ಅಮೃತ ಶ್ರೀ ಸುರಕ್ಷಾ ಯೋಜನೆಯ ಉದ್ಘಾಟನೆ – ಕೇಂದ್ರ ಮಂತ್ರಿ ಶ್ರೀ ಗುರುದಾಸ್ ಕಾಮತ್ರಿಂದ.
- ಅಮೃತ ನಿಧಿ ಪೆನ್ಷನ್ ಚೆಕ್ಕುಗಳ ವಿತರಣೆ, ಕೇಂದ್ರ ಮಂತ್ರಿಗಳಾದ ಶ್ರೀ. ಕೆ.ವಿ. ತೋಮಸ್ ಹಾಗೂ ಕೇರಳ ವಿರೋಧ ಪಕ್ಷದ ನಾಯಕ ಶ್ರೀ. ಊಮ್ಮೆನ್ ಚಾಂಡಿಯವರಿಂದ.
- ವಿದ್ಯಾಮೃತಮ್ ವಿದ್ಯಾರ್ಥಿವೇತನ ಯೋಜನೆಗೆ 500 ಹೊಸ ವಿದ್ಯಾರ್ಥಿಗಳ ಸೇರ್ಪಡೆ ಹಾಗೂ ಚೆಕ್ ವಿತರಣೆ.
- ಆಶ್ರಮದ ನೂತನ ಪ್ರಕಾಶನ ಸಂಸ್ಥೆಯಾದ “ಅಮೃತ ಬುಕ್ಸ್”ನ ಉದ್ಘಾಟನೆ ಹಾಗೂ ಅದರ ಹೊಸ ಪ್ರಕಟಣೆಗಳ ಬಿಡುಗಡೆ – ಅಮ್ಮನ ಜೀವನಚರಿತ್ರೆ ಮತ್ತು “ಫ್ರಮ್ ಅಮ್ಮಾಸ್ ಹಾರ್ಟ್” (ಎರಡೂ ಸ್ವಾಮಿ ಅಮೃತಸ್ವರೂಪಾನಂದರಿಂದ, ಇಂಗ್ಲೀಷ್ನಲ್ಲಿ,)
- ಮಾತೃವಾಣಿ ಜನ್ಮ ದಿನೋತ್ಸವ ಪುರವಣಿಗೆಯ ಬಿಡುಗಡೆ.
- www.amrita.in (ಅಮೃತ.ಇನ್) – ಎಂಬ ಒಂಬತ್ತು ಭಾಷೆಗಳ (ಕನ್ನಡ, ಸಂಸ್ಕೃತ, ಮಲೆಯಾಳ, ತಮಿಳು, ತೆಲುಗು, ಹಿಂದಿ, ಮರಾಠಿ, ಪಂಜಾಬಿ, ಬಂಗಾಲಿ) ವೆಬ್ಸೈಟ್ನ ಬಿಡುಗಡೆ – ಅಮ್ಮನ ವೆಬ್ ಸೈಟ್ನ ಚರಿತ್ರೆಯಲ್ಲಿ ಹೊಸ ದಾಖಲೆ.
- ಭಾರತ ಸ್ವಚ್ಛವಾಗಿಡಲು ಹಾಗೂ ಪರಿಸರ ಸಂರಕ್ಷಿಸಲು, ಅಮೃತ ವಿದ್ಯಾಲಯಮ್ ಮತ್ತು ಅಮೃತ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಹಾಗೂ ಆಯುಧ್ ಸದಸ್ಯರು ಪ್ರತಿಜ್ಞೆ ಗೈದರು. ಸ್ಥಾನೀಯ ಯುವ ಜನತೆ ಮತ್ತು-ಬರಿಸುವ ವಸ್ತುಗಳು, ಮದ್ಯಪಾನ ಹಾಗೂ ತಂಬಾಕು ಸೇವನೆಯಿಂದ ವರ್ಜಿತರಾಗಿರುವ ಪ್ರತಿಜ್ಞೆ ಮಾಡಿದರು. ಎರಡೂ ಪ್ರತಿಜ್ಞೆಗಳನ್ನು ಓದಿಸಿದವರು ಸ್ವಾಮಿ ಅಮೃತಸ್ವರೂಪಾನಂದರವರು.
- ಅತಿಥಿಗಳಿಂದ ಮಾತು.
- ಬಟ್ಟೆ, ಬಂಗಾರ ಹಾಗೂ ಭೋಜನದ ಎಲ್ಲ ವೆಚ್ಚ ಆಶ್ರಮ ಭರಿಸಿದ, ಆಶ್ರಮದ ವತಿಯಿಂದ 54 ಜೋಡಿಗಳ ಸಾಮೂಹಿಕ ಮದುವೆ.
- ದರ್ಶನದ ವೇಳೆಯಲ್ಲಿ ಮಾತೃವಾಣಿ ಪ್ರಚಾರಕರಿಗೆ ಬಹುಮಾನ ವಿತರಣೆ.
ಆಗಮಿಸಿದ ಲಕ್ಷಗಟ್ಟಲೆ ಅಮ್ಮನ ಭಕ್ತರಿಗೆ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿಯ ಮೂರು ದಿನಗಳ ಅವ್ಯಾಹತ ಅನ್ನದಾನ.
ಮಾರನೇ ಬೆಳಿಗ್ಗಿನ 8.45ರ ತನಕ, ಅಮ್ಮನ ಅವಿರತ ದರ್ಶನ.

Download Amma App and stay connected to Amma