Tag / ವಿನಯ

ಆಕಾಶ ಮೀರಿದ ಯಾವುದೇ ಮರ ಇಲ್ಲ, ಪಾತಾಳ ಮೀರಿದ ಯಾವುದೇ ಬೇರೂ ಇಲ್ಲ. ರೂಪಗಳಿಗೆಲ್ಲ ಒಂದು ಮೇರೆಯಿದೆ. ಅದಕ್ಕೂ ಆಚೆ ನಾವು ತಲಪಬೇಕಾದದ್ದು. ಅದಕ್ಕೊಂದು ಉಪಾಧಿ ಬೇಕು. ನಾವು ತೆಂಗಿನಮರ ಹತ್ತಬೇಕಾದರೆ ಏಣಿ ಬೇಕು. ಅದೇ ಕಸಬಿನವರಿಗೆ ಏಣಿ ಬೇಡ. ಅವತಾರಗಳು ಪೂರ್ಣರಾಗಿಯೇ ಬರುತ್ತಾರೆ. ಅವರಿಗೆ ಯಮ ನಿಯಮಗಳು ಬೇಕೆಂದಿಲ್ಲ. ಅವರು ಆ ಸಂಸ್ಕಾರದಿಂದ ಬಂದಿರುತ್ತಾರೆ. ನಾವು ಹಾಗೆ ಮಾಡಬೇಕು ಮಕ್ಕಳೇ. ನಾವು ಯಾಕಾಗಿ ಧ್ಯಾನ ಮಾಡುತ್ತೇವೋ ಅದು ಸಿದ್ಧಿಸಿಯೇ ತೀರುತ್ತದೆ. ಕುಂಕುಮ ಕಲೆಸಿದ ಒಂದು ಪಾತ್ರೆಯಲ್ಲಿ […]

ಧ್ಯಾನವು ಚಿನ್ನದ ಹಾಗೆ ಬಹು ಮೂಲ್ಯವುಳ್ಳದು. ಭೌತಿಕ ಐಶ್ವರ್ಯಕ್ಕೂ,ಮೂಕ್ತೀಗೂ,ಶಾಂತಿಗೂ ಧ್ಯಾನವು ಒಳ್ಳೆಯದು. ಅದಕ್ಕಾಗಿ ಉಪಯೋಗಿಸುವ ಸಮಯ ಎಂದಿಗೂ ನಷ್ಟವಾಗುವಂತದಲ್ಲ. ನದಿಯ ದಡದಲ್ಲಿ ದೋಣಿಯನ್ನು ಕಟ್ಟಿಟ್ಟು ಹುಟ್ಟು ಹಾಕುವದಾದರೆ ಆಚೆಯದಡಕ್ಕೆ ಮುಟ್ಟುವುದಿಲ್ಲ. ಅದೇ ರೀತಿ “ನಾನು” ಎನ್ನುವ ಚಿಂತೆಯನ್ನು ಬಿಟ್ಟು “ನಿನ್ನ” {ಭಗವಂತನ} ಕೈಯಲ್ಲಿನ ಲೇಖನಿ, ಅಥವಾ ಬಣ್ಣ ಹಚ್ಚುವ ಒಂದು ಬ್ರಶ್ ಎನ್ನುವ ರೀತಿಯಲ್ಲಿ ರ್ಪೂಣವಾಗಿ ಸಮರ್ಪಿಸಬೇಕು. ಈ ರೀತಿಯ ಶರಣಾಗತಿಯನ್ನು ನಮ್ಮಲ್ಲಿ ಬೆಳೆಸಿಕ್ಕೊಳ್ಳಬೇಕು. ಪ್ರಯತ್ನಿಸ ಬಾರದು ಎಂದಲ್ಲ; ಹಾಗೆ ಅರ್ಥ ಮಾಡಿಕೊಳ್ಳಬಾರದು. ಪ್ರಯತ್ನಕ್ಕೆ ಯಾವಾಗಲು ಒಂದು […]