Tag / ಕ್ಷೇತ್ರ

ಪ್ರಶ್ನೆ: ಅಮ್ಮಾ, ಕ್ಷೇತ್ರಗಳಲ್ಲಿ ಪೂಜೆ ನಿಲ್ಲಿಸಿದರೆ ಪ್ರತಿಕೂಲ ಪರಿಣಾಮವಾಗುತ್ತದೆಂದು ಹೇಳುತ್ತಾರೆ; ನಿಜವೇ ? “ಮಕ್ಕಳೇ, ಮನುಷ್ಯನ ಸಂಕಲ್ಪದಿಂದಾಗಿ ದೆವತೆಗಳ ಶಕ್ತಿ ವೃದ್ಧಿಯಾಗುತ್ತಿರುತ್ತದೆ. ಪೂಜೆ ನಿಲ್ಲಿಸಿದರೆ, ಅದು ಕ್ಷೀಣಿಸುವುದು. ದೇವರು ಸರ್ವಶಕ್ತನು. ಅವನ ಶಕ್ತಿ ಹೆಚ್ಚಾಗುವುದಿಲ್ಲ; ಕಡಿಮೆಯಾಗುವುದಿಲ್ಲ. ಅದು ನಿತ್ಯವೂ ಶಾಶ್ವತ.ಆದರೆ ದೇವತೆಗಳ ಶಕ್ತಿ ಪ್ರತಿಷ್ಠಾಪನೆ ಮಾಡುವವರ ಭಾವನೆಯನ್ನವಲಂಬಿಸಿದೆ. ಕ್ಷೇತ್ರಗಳಲ್ಲೂ, ಕುಟುಂಬ ದೇವತೆಗಳ ಕ್ಷೇತ್ರಗಳಲ್ಲೂ ಪೂಜೆ ನಿಲ್ಲಿಸಬಾರದು. ನಿಲ್ಲಿಸಿದ್ದಾದರೆ ದೊಡ್ಡ ದೋಷಗಳು ಘಟಿಸಬಹುದು. ” “ಮಕ್ಕಳೇ, ಒಂದು ಕಾಗೆಗೆ ನಾವು ಹತ್ತು ದಿವಸ ಆಹಾರ ಕೊಟ್ಟು ಅಭ್ಯಾಸಮಾಡಿದೆವೆಂದು ಇಟ್ಟುಕೊಳ್ಳೋಣ. […]

ಪ್ರಶ್ನೆ: ಅಮ್ಮಾ, ದೇವಸ್ಥಾನಗಳಲ್ಲಿ ಹರಕೆ ಮತ್ತು ಹಲವು ಹೆಸರುಗಳಿಂದ ಎಷ್ಟೋ ಹಣ ಖರ್ಚು ಮಾಡುತ್ತಾರೆ. ದೇವರಿಗ್ಯಾಕೆ ಹಣ ಅಮ್ಮಾ ? “ಮಕ್ಕಳೇ, ದೇವರಿಗೆ ನಮ್ಮಿಂದ ಏನೂ ಬೇಡ. ಲೈಟ್‌ಗೆ ಸೀಮೆ ಎಣ್ಣೆ ದೀಪದ ಅವಶ್ಯಕತೆಯಿಲ್ಲ. ದೇವರು ಸೂರ್ಯನಂತೆ. ಅವನು ಸರ್ವ ಚರಾಚರಗಳಿಗೆ ಸಮನಾಗಿ ಪ್ರಕಾಶ ಬೀರುತ್ತಿದ್ದಾನೆ. ಎಲ್ಲವನ್ನೂ ಬೆಳಗಿಸುವ ಅವನಿಗೆ ಹರಿಕೆಯಾಗಿ ಎಣ್ಣೆ ಸಲ್ಲಿಸುತ್ತೇವಂದೂ, ದೀಪ ಹಚ್ಚುತ್ತೇವೆಂದೆಲ್ಲ ಹೇಳುತ್ತೇವೆ ! ಇದು ನಮ್ಮ ಅಜ್ಞಾನದ ಫಲ. ಹಗಲು ಸಮಯದಲ್ಲಿ ಕೈಯ್ಯಲ್ಲೊಂದು ಮೇಣದ ಬತ್ತಿ ಉರಿಸಿ ಹಿಡಿದುಕೊಂಡು, “ಸೂರ್ಯದೇವನೇ, […]