ಪ್ರಶ್ನೆ: ಅಮ್ಮಾ, ನಿರಾಕಾರನಾದ ದೇವರನ್ನು ಸಾಕಾರನಾಗಿ ಆರಾಧಿಸಬೇಕಾದ ಅವಶ್ಯಕತೆಯಿದೆಯೇ ? “ಮಕ್ಕಳೇ, ನಮ್ಮ ಸಂಸ್ಕಾರ, ಪ್ರತಿಯೊಬ್ಬ ಗೆಳೆಯನಲ್ಲಿ ನಮ್ಮ ದುಃಖಗಳನ್ನು ಹಂಚಿಕೊಂಡು, ಸುಖವನ್ನು ಅರಸೋಣ, ಎನ್ನುವಂತದ್ದು. ಅದನ್ನು ಒಂದು ವಿಶ್ವ ಸಂಕಲ್ಪವಾಗಿ ಪರಿವರ್ತಿಸುವುದು ಸಾಕಾರ ಉಪಾಸನೆಯ ಉದ್ದೇಶ. ಒಂದು ಮಗು ಆಟವಾಡಿಕೊಂಡಿರುವಾಗ ಸ್ನೇಹಿತನು ಸ್ವಲ್ಪ ಚಿವುಟಿದರೆ, ಅಳುತ್ತಾ ಹೋಗಿ ತಾಯಿಯಲ್ಲಿ ಹೇಳುತ್ತಾನೆ. ಸ್ವಲ್ಪ ಪ್ರಾಯ ಹೆಚ್ಚಾದಾಗ, ಮನೆಯಲ್ಲಿ ಅಮ್ಮ ಹೊಡೆದದ್ದು, ಅಣ್ಣ ಬೈದದ್ದು ಎಲ್ಲಾ ಸ್ನೇಹಿತನಲ್ಲಿ ಹೇಳುತ್ತಾನೆ. ಮುಂದೆ ಪ್ರೀತಿಸುವ ಹುಡುಗಿಯಲ್ಲಿ ತನ್ನ ದುಃಖವೆಲ್ಲ ಹೇಳಿ ಸಾಂತ್ವನ […]