ಆಕಾಶ ಮೀರಿದ ಯಾವುದೇ ಮರ ಇಲ್ಲ, ಪಾತಾಳ ಮೀರಿದ ಯಾವುದೇ ಬೇರೂ ಇಲ್ಲ. ರೂಪಗಳಿಗೆಲ್ಲ ಒಂದು ಮೇರೆಯಿದೆ. ಅದಕ್ಕೂ ಆಚೆ ನಾವು ತಲಪಬೇಕಾದದ್ದು. ಅದಕ್ಕೊಂದು ಉಪಾಧಿ ಬೇಕು. ನಾವು ತೆಂಗಿನಮರ ಹತ್ತಬೇಕಾದರೆ ಏಣಿ ಬೇಕು. ಅದೇ ಕಸಬಿನವರಿಗೆ ಏಣಿ ಬೇಡ. ಅವತಾರಗಳು ಪೂರ್ಣರಾಗಿಯೇ ಬರುತ್ತಾರೆ. ಅವರಿಗೆ ಯಮ ನಿಯಮಗಳು ಬೇಕೆಂದಿಲ್ಲ. ಅವರು ಆ ಸಂಸ್ಕಾರದಿಂದ ಬಂದಿರುತ್ತಾರೆ. ನಾವು ಹಾಗೆ ಮಾಡಬೇಕು ಮಕ್ಕಳೇ. ನಾವು ಯಾಕಾಗಿ ಧ್ಯಾನ ಮಾಡುತ್ತೇವೋ ಅದು ಸಿದ್ಧಿಸಿಯೇ ತೀರುತ್ತದೆ. ಕುಂಕುಮ ಕಲೆಸಿದ ಒಂದು ಪಾತ್ರೆಯಲ್ಲಿ […]