Tag / ವಿದ್ಯಾಭ್ಯಾಸ

ಇಂದು ಭಾರತ ಹಲವು ಕ್ಷೇತ್ರಗಳಲ್ಲಿ ಸಾಧಿಸುತ್ತಿರುವ ಅಭಿವೃದ್ಧಿಯನ್ನು ಕಂಡು ಭರವಸೆ ಮೂಡುತ್ತಿದೆ. ಆರ್ಥಿಕ ಬೆಳವಣಿಗೆಯಲ್ಲಿಯೂ ಹಾಗು ವಿಜ್ಞಾನದಲ್ಲಿಯ ಪ್ರಗತಿಯಲ್ಲಿಯೂ ನಾವು ಬಹಳ ಮುಂದುವರಿಯುತ್ತಿದ್ದೇವೆ. ಮಂಗಳಯಾನ ಉಪಗ್ರಹದ ವಿಜಯವು ಇಡೀ ಲೋಕದ ಮನ್ನಣೆಯನ್ನು ನಮಗೆ ಗಳಿಸಿಕೊಟ್ಟಿದೆ. ಹಾಗಿದ್ದರೂ ಸಹ, ಭಾರತದಲ್ಲಿನ ಪ್ರತಿಯೊಂದು ಬಡವರ ಜೀವನದಲ್ಲಿಯೂಕೂಡ ಮಂಗಳವು ಸಂಭವಿಸುವಾಗ ಮಾತ್ರವೇ  ನಮ್ಮಯ ಅಭಿವೃದ್ಧಿಗಳೆಲ್ಲವೂ ನಿಜವಾದ ಅರ್ಥವನ್ನು ಮತ್ತು ಪೂರ್ಣತೆಯನ್ನು ಹೊಂದುವುದು.ಕಳೆದ ಎರಡು ವರ್ಷಗಳಿಂದ ಆಶ್ರಮವು ಭಾರತದಾದ್ಯಂತ ನೂರಾರು ಗ್ರಾಮಗಳನ್ನು ದತ್ತುಪಡೆದು ಅಲ್ಲಿ ಸೇವಾಕಾರ್ಯಗಳನ್ನು ನಡೆಸುತ್ತಿದೆ. ಹಲವು ಗ್ರಾಮಗಳ ಸ್ಥಿತಿಯನ್ನು ಕಾಣುವಾಗ […]

ನಮ್ಮ ಮಕ್ಕಳು ಹಲವು ವಿಧದ ವಿಷಯಗಳ ಬಗ್ಗೆ ಹೆಚ್ಚು ಕಲಿಯುತ್ತಾರೆ. ಆದರೆ ಈ ತಿಳುವಳಿಕೆಯೆಲ್ಲ ಅಡಿಪಾಯವಿಲ್ಲದೆ ಕಟ್ಟಿದ ಮನೆಯ ಹಾಗೆ. ಮೂಲಭೂತವಾಗಿ ಅರಿತು ಕೊಂಡಿರಬೇಕಾದ ಆಧ್ಯಾತ್ಮಿಕತೆಗೆ ನಾವು ನಮ್ಮ ಜೀವನದಲ್ಲಿ ಯಾವ ಸ್ಥಾನವನ್ನೂ ಕೊಡುತ್ತಿಲ್ಲ. – ಅಮ್ಮ

ಏತಕ್ಕಾಗಿ ತಾವು ಓದುತ್ತಿದ್ದೇವೆ ಎನ್ನುವ ಅರಿವಾದರೂ ಇಂದಿನ ಕಿರಿಯರಿಗೆ ಇಲ್ಲ. ಹೇಗಾದರೂ ಒಂದು ಸರ್ಟಿಫಿಕೇಟ್ ಸಂಪಾದಿಸಬೇಕೆಂದಲ್ಲದೆ, ವಿದ್ಯಾಭ್ಯಾಸದಿಂದ ಸರಿಯಾದ ಜ್ಞಾನವನ್ನೋ, ಒಳ್ಳೆ ಸಂಸ್ಕಾರವನ್ನೋ ಪಡೆಯ ಬೇಕೆಂದು ಇವತ್ತಿನ ಯುವಕರಿಗೆ ಇಚ್ಛೆಯಿಲ್ಲ. ಅವರಲ್ಲಿ ಅದನ್ನು ಪ್ರೇರೇಪಿಸಲು ಅಧ್ಯಾಪಕರಿಗೂ ಆಗುವುದಿಲ್ಲ. – ಅಮ್ಮ

ಪ್ರೊಫೆಸರ್‌ಗಳು ಯಂತ್ರದಂತೆ ಕಲಿಸುತ್ತಾರೆ. ಮಕ್ಕಳು ಗೋಡೆಯಂತೆ ಕುಳಿತಿರುತ್ತಾರೆ. ಹೃದಯ ಹೃದಯದೊಂದಿಗಿನ ಸಂವಾದವಿಲ್ಲ. ಅಲ್ಲಿ ಮಕ್ಕಳ ವ್ಯಕ್ತಿತ್ವ ಸರಿಯಾಗಿ ಜಾಗ್ರತವಾಗುವುದಿಲ್ಲ. ಅವರು ಇನ್ನೇನೋ ಆಗಲು ಕಷ್ಟ ಪಡುತ್ತಾರೆ. ಉಡುಪಿಗೆ ಬೇಕಾಗಿ ಶರೀರವನ್ನು ಕತ್ತರಿಸಿದಂತೆ, ಚಪ್ಪಲ್‌ಗೆ ಬೇಕಾಗಿ ಕಾಲು ಕತ್ತರಿಸಿದಂತೆ. – ಅಮ್ಮ