ಮೇರೆ ಇಲ್ಲದ, ಭೇದವಿಲ್ಲದ ಅಖಂಡವಾದ ಏಕತ್ವವೇ ಭಗವಂತ. ಆ ಭಗವತ್ದಶಕ್ತಿಯು ಪ್ರಕೃತಿಯಲ್ಲಿ, ಪರಿಸರದಲ್ಲಿ, ಮೃಗಗಳಲ್ಲಿ, ಮನುಷ್ಯರಲ್ಲಿ, ಗಿಡಗಳಲ್ಲಿ, ಮರಗಳಲ್ಲಿ, ಪಕ್ಷಿಗಳಲ್ಲಿ ಪ್ರತಿಯೊಂದು ಕಣಕಣದಲ್ಲಿಯೂ ತುಂಬಿತುಳುಕುತ್ತಿದೆ. ಜಡ ಚೈತನ್ಯಗಳೆಲ್ಲವೂ ಭಗವತ್ದಮಯವಾಗಿದೆ. ಈ ಸತ್ಯವನ್ನು ಅರಿತರೆ ನಮಗೆ ನಮ್ಮನ್ನು, ಇತರರನ್ನು, ಈ ಲೋಕವನ್ನು ಪ್ರೇಮಿಸಲು ಮಾತ್ರವೇ ಸಾಧ್ಯ. ಪ್ರೇಮದ ಮೊದಲ ತರಂಗವು ನಮ್ಮಿಂದಲೇ ಪ್ರಾರಂಭವಾಗಬೇಕು. ನಿಶ್ಚಲವಾಗಿರುವ ಸರೋವರದಲ್ಲಿ ಕಲ್ಲೊಂದನ್ನು ಎಸೆದರೆ, ಮೊದಲ ಪುಟ್ಟ ತರಂಗವು ಆ ಕಲ್ಲಿನ ಸುತ್ತಲು ಪ್ರಕಟವಾಗುತ್ತದೆ. ಕ್ರಮೇಣ ಆ ತರಂಗದ ವೃತ್ತವು ದೊಡ್ಡದಾಗುತ್ತಾ ದೊಡ್ಡದಾಗುತ್ತಾ ಅದು […]