ಮಕ್ಕಳೇ, ಮುಂದಿನ ಹತ್ತಿರದ ಹೊರೆಗಲ್ಲಿನಲ್ಲಿ,* ಭಾರವನ್ನು ಇಳಿಸಬಹುದೆಂದು ಎಣಿಸಿದಾಗ ನಮ್ಮ ಭಾರ ಕಮ್ಮಿಯಾದಂತನಿಸುತ್ತದೆ; ಭರವಸೆ ಮೂಡುತ್ತದೆ. ಅದು ಬಹಳ ದೂರ ಎಂದು ಭಾವಿಸಿದಾಗ, ಭಾರ ಹೆಚ್ಚಾದಂತನಿಸುತ್ತದೆ. ಭಗವಂತನು ನಮ್ಮ ಹತ್ತಿರವಿದ್ದಾನೆ ಎಂದು ಭಾವಿಸಿರಿ. ಎಲ್ಲಾ ಭಾರವೂ ಕಮ್ಮಿಯಾಗುತ್ತದೆ. ದೋಣಿಯೋ, ಬಸ್ಸೋ ಹತ್ತಿದ ಮೇಲೆ, ಯಾತಕ್ಕೆ ಇನ್ನೂ ಭಾರ ಹೊರಬೇಕು ? ಅದನ್ನು ಅಲ್ಲೇ ಬಿಡಿರಿ. ಇದೇ ರೀತಿ, ದೇವರಿಗೆ ಎಲ್ಲವನ್ನೂ ಸಮರ್ಪಿಸಿರಿ. ಅವನು ನಮ್ಮನ್ನು ಕಾಪಾಡುವನು. * ಹಿಂದಿನಕಾಲದಲ್ಲಿ ಹಳ್ಳಿಗಳಲ್ಲಿ ಬೆನ್ನು ಹೊರೆ ಹಾಗೂ ತಲೆ ಹೊರೆ […]