Tag / ತ್ಯಾಗ

ಹಿಂದಿನ ಕಾಲದಲ್ಲೆಲ್ಲ ಕಾಡು ಹೊರಗಿರುತ್ತಿತ್ತು. ಈಗ ಕಾಡನ್ನು ಕಡಿದು ಸವರಿ ನಮ್ಮೊಳಗೇ  ತಂದಿದ್ದೇವೆ. ಹಿಂದೆ ಪ್ರಾಣಿಗಳು ಹೊರಗಿರುತ್ತಿದ್ದವು. ಇಂದು ಅವುಗಳನ್ನೂ ಆಂತರ್ಯದಲ್ಲಿ ತಂದಿದ್ದೇವೆ. ಹೃದಯದ ಕಲ್ಮಶಗಳನ್ನು ನಾವು ಶೇವ್ ಮಾಡಿ ತೆಗೆಯಬೇಕಾದದ್ದು; ಬದಲಿಗೆ ನಮ್ಮ ಮುಖದ್ದು ಅಲ್ಲ. ಮಕ್ಕಳು ಏನೂ ತ್ಯಜಿಸಬೇಕೆಂದು ಅಮ್ಮ ಹೇಳುತ್ತಿಲ್ಲ. ಅನ್ಯರಲ್ಲಿ ಕರುಣೆ ತೋರಿಸಿದಾಗ, ಸ್ವಾರ್ಥ ತಾನಾಗಿಯೇ ಬಿಟ್ಟು ಹೋಗುತ್ತದೆ. ನೀವು ಒಂದು ದಿನಕ್ಕೆ ಹತ್ತು ರುಪಾಯಿ ಸಿಗರೇಟು ಸೇದುತ್ತೀರ ಎಂದು ಇಟ್ಟುಕೊಳ್ಳೋಣ.  ತಿಂಗಳಿಗೆ ಮುನ್ನೂರು ರುಪಾಯಿ ಆಯಿತು. ಈ ತರಹ ಲೆಕ್ಕ […]

ನಮಗೆ ಯಾವುದೇ ವಸ್ತು ದೊರಕಬೇಕಾದರೂ ಅದಕ್ಕೊಂದು ಬೆಲೆ ತೆರಬೇಕು. ಆ ಕಡೆಗೆ ಏನೂ ಕೊಡದೆ, ಏನಾದರೂ ಗಳಿಸಲು ಕರ್ಮ ಕ್ಷೇತ್ರದಲ್ಲಿ ಸಾಧ್ಯವಲ್ಲ. ಒಳ್ಳೆ ಉದ್ಯೋಗ ಸಿಗಬೇಕೆಂದಿದ್ದರೆ, ನಿದ್ದೆಗೆಟ್ಟು, ಕಷ್ಟಪಟ್ಟು ಕಲಿಯಬೇಕು. ಒಳ್ಳೆ ಫಸಲು ಬರಬೇಕೆಂದಿದ್ದರೆ, ಸಮಯಕ್ಕೆ ಸರಿಯಾಗಿ ಬೀಜ ಬಿತ್ತಿ, ಬೇಕಾದ ಗೊಬ್ಬರವನ್ನೂ ನೀರನ್ನೂ ಕೊಡಬೇಕು. – ಅಮ್ಮ

ಸಮುದಾಯದಲ್ಲಿ ಒಳ್ಳೆ ಬದಲಾವಣೆ ತರಬೇಕೆಂದು ನಾವು ಪ್ರಾಮಾಣಿಕವಾಗಿ ಬಯಸುವುದಾದರೆ, ಅದಕ್ಕಾಗಿ ನಮ್ಮ ಕಡೆಯಿಂದ ನಾವು ಪ್ರಯತ್ನ ಮಾಡಬೇಕು. ನಾವು ಕ್ರಿಯಾತ್ಮಕವಾಗಿ ಏನಾದಾರೂ ಮಾಡಬೇಕು. ನಾವು ಒಳ್ಳೆಯದನ್ನು ಮಾಡಬೇಕೆಂದು ಬಯಸಿದರೆ ಮಾತ್ರ ಸಾಲದು. ಒಂದಷ್ಟು ತ್ಯಾಗ, ಸ್ವಲ್ಪ ಪ್ರಯತ್ನ ಮಕ್ಕಳ ಕಡೆಯಿಂದ ಮಾಡಬೇಕು. ­- ಅಮ್ಮ