Tag / ಜೀವನ

ಸಂಸ್ಕಾರ ಕಳೆದುಕೊಳ್ಳುವುದು ಸುಲಭ. ಹಾಗೆ ಮಾಡುವಾಗ ನಮ್ಮ ಜೀವನವು ನರಕಕ್ಕೆಯೇ ಹೋಗುವುದೆಂಬುದನ್ನು ನಾವು ತಿಳಿದುಕೊಳ್ಳುವುದಿಲ್ಲ. ಆಳವಾದವಾದ ಹೊಂಡದಲ್ಲಿ ಬಿದ್ದುಬಿಟ್ಟು, ನಂತರ ಮೇಲೆ ಹತ್ತಲು ಬವಣೆ ಪಡುವುದಕ್ಕಿಂತಲೂ ಒಳ್ಳೆಯದು, ಬೀಳುವ ಮೊದಲೆ ಜಾಗ್ರತೆ ವಹಿಸುವುದಲ್ಲವೆ? – ಅಮ್ಮ

ಇಂದು ನಾವು ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಲಿಸುತ್ತಿದ್ದೇವೆ. ಆದರೆ ಜೀವನವೆನ್ನುವುದು ಕೇವಲ ಬಿಸಿನೆಸ್ ಮಾತ್ರವಲ್ಲ. ಅದು ಹೇಗೆ ಜೀವನವನ್ನು ಅದರ ಪೂರ್ಣತೆಯಲ್ಲಿ ಅನುಭವಿಸುವುದು ಎನ್ನುವುದನ್ನು ಕಲಿತುಕೊಳ್ಳಬೇಕಾದರೆ, ಆಧ್ಯಾತ್ಮಿಕತೆಯನ್ನು ಅರಿತುಕೊಳ್ಳಬೇಕು. ಆಧ್ಯಾತ್ಮಿಕತೆಯು, ಜೀವನದ ಪೂರ್ಣ ಮ್ಯಾನೇಜ್‌ಮೆಂಟನ್ನು ಕಲಿಸುತ್ತದೆ. – ಅಮ್ಮ

ಹೃದಯವಿಲ್ಲದ ಜೀವನ ಇವತ್ತು ನಾವು ನಡೆಸುತ್ತಿರುವುದು. ಶವಕ್ಕೆಮೇಕಪ್ ಮಾಡಿದ ಹಾಗೆ. ನೌಕರಿಗೆ ಬೇಕಾಗಿ ಜೀವಿಸುತ್ತಿದ್ದೇವೆಯೇ ಹೊರತು ಜೀವಿಸಲಿಕ್ಕೆ ಬೇಕಾಗಿ ನೌಕರಿ ನಾವು ಮಾಡುವುದಲ್ಲ. ನಾವು ಇವತ್ತು ನಡೆಯುತ್ತಿರುವ ಕಂಪ್ಯೂಟರ್‌ನಂತೆ; ನಮ್ಮ ಜೀವನ ಯಾಂತ್ರಿಕವಾಗಿ ಬಿಟ್ಟಿದೆ. – ಅಮ್ಮ