Tag / ಇಷ್ಟದೇವತೆ

ಪ್ರಶ್ನೆ: ಕೃಷ್ಣ ಭಕ್ತನು ದೇವಿಯ ಸಹಸ್ರನಾಮ ಜಪಿಸುವುದು ಒಳ್ಳೆಯದೇ ? “ಯಾರು ಇಷ್ಟದೇವನೋ, ಆ ದೇವನ ಮಂತ್ರ ಜಪಿಸಬೇಕು. ಸಹಸ್ರನಾಮವೂ ಹಾಗೆಯೇ. ಕೋಗಿಲೆಯನ್ನು ನವಿಲೆಂದು ಕರೆದರೆ ಕೋಗಿಲೆ ಬರುವುದೇ ? ಆದರೆ ಒಂದು ಮಾತು. ಪ್ರತಿ ಹಕ್ಕಿಗೂ ನವಿಲೆಂದು, ಕೋಗಿಲೆಯೆಂದು ಅಥವಾ ಬೇರಿನ್ನೇನೋ ಹೆಸರಿಟ್ಟಿರುವುದು ಮನುಷ್ಯನು. ಆದಕಾರಣ ಪ್ರತಿಯೊಂದನ್ನು ನೋಡುವಾಗಲೂ ಅದರ ಹೆಸರು ಹೀಗೆಂದು ನಾವು ಯೋಚಿಸುತ್ತೇವೆ. ಇದೇ ಪ್ರಕಾರ ದೇವರಿಗೆ ರೂಪವನ್ನೂ ನಾಮವನ್ನೂ ನೀಡಿರುವವರು ನಾವು. ಸತ್ಯಕ್ಕೆ ರೂಪವೂ ನಾಮವೂ ಇಲ್ಲ. ನಮ್ಮ ಹಾಗೆ ಶಬ್ದ […]

ಪ್ರಶ್ನೆ: ಅಮ್ಮಾ, ಧ್ಯಾನ ಹೇಗೆ ಮಾಡಬೇಕು ? “ಮಕ್ಕಳೇ, ಧ್ಯಾನ ಅಂತ ನಾವು ಹೇಳುವಂತಿಲ್ಲ. ಧ್ಯಾನವೆನ್ನುವುದು ಅಡೆತಡೆಯಿಲ್ಲದೆ ಒಂದೇ ಕಡೆ ಮನಸ್ಸನ್ನು ನಿಲ್ಲಿಸಲು ಸಾಧ್ಯವಾಗುವ ಸ್ಥಿತಿ. ಆ ಸ್ತರ ಮುಟ್ಟಲು ನಾವು ಸಾಧನೆ ಮಾಡುತ್ತಿರುವುದು. ಪಾಯಸ ಮಾಡಲು ನಾವು ನೀರನ್ನು ಒಲೆಯಲ್ಲಿಡುತ್ತೇವೆ. ಏನು ಮಾಡುತ್ತೀಯೆಂದು ಯಾರಾದರೂ ಕೇಳಿದರೆ ಹೇಳುತ್ತೇವೆ ಪಾಯಸ ಮಾಡುತ್ತೇನೆಂದು. ಇದೇ ಪ್ರಕಾರ, ಧ್ಯಾನಾವಸ್ಥೆ ತಲಪಲು ಬೇಕಾದ ಅಭ್ಯಾಸ ಬರೇ ಆರಂಭ ಮಾಡಿರುವುದು ಮಾತ್ರ. ಆದರೂ ನಾವು ಹೇಳುತ್ತೇವೆ ಧ್ಯಾನ ಮಾಡುತ್ತೇವೆಂದು. ಈ ಅಭ್ಯಾಸವನ್ನೇ ಸಾಮಾನ್ಯವಾಗಿ […]