ಪ್ರಶ್ನೆ: ದೇವರ ಕೃಪೆಗೂ, ಮಹಾತ್ಮರ ಕೃಪೆಗೂ ಏನು ವ್ಯತ್ಯಾಸ ? “ಆತ್ಮಕ್ಕೆ ಭೇದವಿಲ್ಲ. ಅದು ಎಲ್ಲರಲ್ಲೂ ಒಂದೇ. ಮಹಾತ್ಮರು ಆತ್ಮದ ಸ್ವರೂಪವನ್ನು ತಮ್ಮ ಅರಿವಿನ ಸ್ತರಕ್ಕೆ ತರುತ್ತಾರೆ, ಅಷ್ಟೆ. ನಾವೆಲ್ಲರೂ ಕನ್ನಡಿಗಳು. ಆದರೆ ನಮ್ಮಲ್ಲ್ಲಿ ಪಾದರಸವಿಲ್ಲ. ಮಹಾತ್ಮರ ತಪಸ್ಸಿನಿಂದ ಪಾದರಸ ಉದ್ಭವವಾಗುತ್ತದೆ. ಪಾದರಸವಿರುವ ಕನ್ನಡಿಯಲ್ಲಿ ತಾನೇ ಸ್ಪಷ್ಟವಾದ ಪ್ರತಿಬಿಂಬ ಕಾಣಿಸುವುದು ? ಒಬ್ಬ ಮಹಾತ್ಮನೆದುರಿಗೆ ಹೋದಾಗ ನಮ್ಮ ನಿಜವಾದ ಸ್ವರೂಪ ಅವರಲ್ಲಿ ಪ್ರತಿಫಲಿಸಿ ಕಾಣಲು ಸಾಧ್ಯವಾಗುತ್ತದೆ. ಅದನ್ನು ನೋಡಿ ನಮ್ಮ ಕುರೂಪವನ್ನೂ ಮಲಿನತೆಗಳನ್ನೂ ತೊರೆಯಲು ಸಾಧ್ಯವಾಗುತ್ತದೆ. ಕರೆಂಟು […]