Tag / ಸೇವೆ

ಪ್ರಶ್ನೆ: ಜನಗಳ ಸೇವೆ ಮಾಡಲು ತಪಸ್ಸಿನ ಅವಶ್ಯಕತೆಯೇನು ? ಮಕ್ಕಳೇ, ಕಲಿತವನಿಗೆ ಮಾತ್ರವೇ ಇನ್ನುಳಿದವರಿಗೆ ಕಲಿಸಲು ಸಾಧ್ಯ. ಇಂದು ನಮ್ಮ ರಾಗಾದಿ ವೈರಿಗಳು ಯಾವುವೂ ಬಿಟ್ಟು ಹೋಗಿಲ್ಲ. ಯಾರಾದರೂ ದ್ವೇಷಿಸಿದರೆ, ನಾವು ಕಲಿತಿರುವುದು ಅವರನ್ನು ಇಮ್ಮಡಿ ದ್ವೇಷಿಸಲಿಕ್ಕೆ. ಇನ್ನಿತರರ ಒಂದು ಮಾತಿನ ಮೇಲಿದೆ ಇಂದು ನಮ್ಮ ಜೀವನ. ನಮ್ಮ ಬಗ್ಗೆ ಏನಾದರೂ ಹೇಳಿದರು ಎಂದು ಕೇಳಿದರೆ ಸಾಕು, ಒಂದೇ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ, ಇಲ್ಲವೇ ಹೇಳಿದವನನ್ನು ತಿವಿದು ಇರಿಯುತ್ತೇವೆ. ಬೇರೆಯವರ ಬಾಯಿಯ ಎರಡಕ್ಷರಗಳನ್ನು ಹಿಡಿದು ಕೊಂಡು ನಾವಿಂದು […]

ಮಕ್ಕಳೇ, ಆಧಾರಸ್ತಂಭಗಳಿಲ್ಲದೆ ಕಟ್ಟಡ ಕಟ್ಟಬಹುದೆಂದು ಒಂದು ವೇಳೆ ವಿಜ್ಞಾನಿಗಳು ಕಂಡುಹಿಡಿದರೆಂದು ಇಟ್ಟುಕೊಳ್ಳೋಣ; ಇಂದು ಬಟನ್ ಅದುಮಿದರೆ ಈ ಪ್ರಪಂಚವೇ ಅಳಿದು ಹೋಗುತ್ತದೆಂದು ಇಟ್ಟುಕೊಳ್ಳೋಣ. ಆದರೆ ಇದರಿಂದ ಯಾವ ಮನಸ್ಸಿಗೂ ಯಾವ ಕುಟುಂಬಕ್ಕೂ ಸಮಾಧಾನವೆಂಬುದು ಸಿಗುವುದಿಲ್ಲ. ಹೊಟ್ಟೆ ತುಂಬ ಊಟ ಮಾಡಿಯೂ ’ಮನಸ್ಸಿಗೆ ಸಮಾಧಾನವಿಲ್ಲ, ನಿದ್ದೆ ಬರುತ್ತಿಲ್ಲ’ ಎನ್ನುವ ಮೊರೆಯನ್ನು ಮಾತ್ರವೇ ಇಂದು ನಾವು ಕೇಳುತ್ತಿರುವುದು. ಒಂದು ಕೋಟಿಗೂ (ಇದು 1987ರ ಮೊದಲಿನ ವರ್ಷಗಳಲ್ಲಿ ಅಮ್ಮ ಹೇಳಿದ ಮಾತು) ಮೀರಿ ಜನಗಳನ್ನು ಅಮ್ಮ ಇಷ್ಟು ಕಾಲದಿಂದ ಕಂಡು ಭೇಟಿಯಾಗಿದ್ದಾರೆ. […]

ಒಂದು ಊರಿನಲ್ಲಿ ಒಳ್ಳೆಯವರಾದ ಇಬ್ಬರು ವ್ಯಕ್ತಿಗಳಿದ್ದರೆ ಸಾಕು, ಎಷ್ಟೊ ಜನರನ್ನು ಪರಿವರ್ತಿಸಲು ಸಾಧ್ಯವಿದೆ. ಇವತ್ತಿನ ಎರಡೂ ತಲೆಮಾರುಗಳು ನಶಿಸಿ ಹೋಗುತ್ತಿವೆ. ಯುವಕರು ಹೆಂಡಕ್ಕೂ, ಗಾಂಜಕ್ಕೂ, ಹೆಣ್ಣಿಗೂ ಅಡಿಯಾಳಾಗಿ ಸ್ವತಃ ಅಧೋಗತಿಗಿಳಿದಿದ್ದಾರೆ. ಅವರಿಗೆ ಅದರಲ್ಲಿ ಆನಂದ ದೊರಕುವುದಾದರೆ ಅವುಗಳನ್ನು ಉಪೇಕ್ಷಿಸಬೇಕೆಂದು ಅಮ್ಮ ಹೇಳುತ್ತಿಲ್ಲ. ಒಂದು ವರ್ಷವೆಲ್ಲ ಸೇದಿದ ನಂತರ ಮುಂದಿನ ವರ್ಷ ಅದರ ಎರಡು ಪಟ್ಟು ಸೇದಬೇಕಾಗುತ್ತದೆ; ಅಂದರೆ ಮಾತ್ರ ಮೊದಲು ಸಿಕ್ಕಿದಷ್ಟು ಆನಂದ ಸಿಗುವುದು. ನಾಲ್ಕೈದು ವರ್ಷಗಳು ಕಳೆದ ಮೇಲೆ ಎಷ್ಟೇ ಸೇದಿದರೂ ಏನೂ ಅನಿಸುವುದಿಲ್ಲ. ಕಡೆಗೆ […]

ಅಮೃತಪುರಿ, ನವೆಂಬರ್ 10, 2010 ನಮ್ಮ ದೇಶದ ಸಾರ್ವಜನಿಕ ಸ್ಥಳಗಳನ್ನು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಶುಚಿಗೊಳಿಸುವ ಗುರಿ ಹೊಂದಿರುವ ಈ ಯೋಜನೆ, ಸ್ವಚ್ಛತೆಯ ಮೂಲಕ ನಮ್ಮ ಸುಂದರ ನಿಸರ್ಗ ಹಾಗೂ ಭೂಮಿಯ ಕುರಿತಾದ ಮಾನವತೆಯ ಋಣದ ಬಗ್ಗೆ ಸಾಮಾಜಿಕ ಅರಿವನ್ನು ಮೂಡಿಸುವ ಅಭಿಲಾಷೆಯನ್ನು ಹೊಂದಿದೆ. ಸೆಪ್ಟಂಬರ್ 27, 2010ರಂದಿನ ತನ್ನ 57ನೆಯ ಜನ್ಮ ದಿನೋತ್ಸವದಂದು, ಅಮ್ಮ ಈ ಯೋಜನೆಯನ್ನುಜಾರಿಗೆ ತಂದರು. ಇದು ಅಮ್ಮನ ಜನ್ಮ ದಿನೋತ್ಸವದ ಆಶಯವೂ ಆಗಿದೆ. ಮಾತಾ ಅಮೃತಾನಂದಮಯಿ ಮಠ (ಮಾ.ಅ.ಮ.)ವು ರಾಜ್ಯ ಸರಕಾರಗಳ […]

27 ಅಕ್ಟೋಬರ್, 2010 ಅಮೃತಪುರಿ ಅಮಲ ಭಾರತಂ ಕ್ಯಾಂಪೇನ್ (ಏ.ಬಿ.ಸಿ.) ಅನ್ನುವ ಈ ಬೃಹದ್‌ಯೋಜನೆಯ ಸ್ವಯಂಸೇವಕರು ಬರುವ ಒಕ್ಟೋಬರ್ 31ರಂದು ಕೇರಳದಾದ್ಯಂತ, 14 ಜಿಲ್ಲೆಗಳ 54ಕ್ಕೂ ಮೀರಿದ ಸಾರ್ವಜನಿಕ ಸ್ಥಳಗಳಲ್ಲಿ ಶುಚೀಕರಣ ಯಜ್ಞ ನಡೆಸುವರು. ಶುಚೀಕರಣ ಯಜ್ಞದಲ್ಲಿ ಅಮಲ ಭಾರತಂ ಜೊತೆ ಸಾರ್ವಜನಿಕರ ಬೆಂಬಲವು ಸೇರಿಕೊಂಡಿದೆ. ಇದು ನವೆಂಬರ್ ಒಂದರಂದು ಆಚರಿಸಲ್ಪಡುವ ಕೇರಳದ 54ನೇ ರಾಜ್ಯೋತ್ಸವದ ಜೊತೆ ಜೋಡಿಕೊಂಡಿದೆ. ಮುಂಬರುವ ದಿನಗಳಲ್ಲಿ, ಅಮಲ ಭಾರತಂ ಕ್ಯಾಂಪೇನ್‌ (Amala Bharatam Campaign – ABC) ನ ಈ ಆರಂಭದ […]