ಮಕ್ಕಳಿಗೆ ಆಧ್ಯಾತ್ಮಿಕ ಸಂಸ್ಕಾರ ಸಿಗಬೇಕಾದದ್ದು ಅವರ ತಾಯಿಯಂದಿರಿಂದ. ಆದರೆ ಇವತ್ತು ನಮ್ಮ ತಾಯಂದಿರಿಗೆ ಅವರ ಮಕ್ಕಳು ಡಾಕ್ಟರಾಗಬೇಕು, ಅಲ್ಲದಿದ್ದರೆ ಎಂಜಿನೀಯರ್ ಆಗಬೇಕು ಎಂದು ಮಾತ್ರವೆ ಇರುವುದು. ಮಕ್ಕಳು ಒಳ್ಳೆ ಮನುಷ್ಯರಾಗಬೇಕು ಎನ್ನುವುದಕ್ಕೆ, ಅಪ್ಪ ಅಮ್ಮಂದಿರು ಸ್ವಲ್ಪವೂ ಪ್ರಾಮುಖ್ಯತೆ ನೀಡುವುದಿಲ್ಲ. ನಮಗೆ ನಮ್ಮದೆ ಆದ ಯಾವುದೆ ಆದರ್ಶವಿಲ್ಲ. – ಅಮ್ಮ
Tag / ಸಂಸ್ಕೃತಿ
ನಾವೊಂದು ಒಂಟಿ ದ್ವೀಪವಲ್ಲ. ಒಂದೇ ಸರಪಳಿಯ ಕೊಂಡಿಗಳು ನಾವು. ನಾವು ಮಾಡುವ ಒಂದೊಂದು ಕೃತಿಯೂ, ತಿಳಿದೋ ತಿಳಿಯದೆಯೋ ಇತರರ ಮೇಲೆ ಪರಿಣಾಮ ಬೀರುತ್ತದೆ. ಈ ಜಗತ್ತಿನಲ್ಲಿ ನಡೆದಿರುವ ಎಲ್ಲ ಯುದ್ಧಗಳೂ, ಯಾವನೋ ಒಬ್ಬ ಮನುಷ್ಯನೊಳಗೆ ಮೂಡಿದ ವಿದ್ವೇಷದ ಫಲ. ಒಬ್ಬ ವ್ಯಕ್ತಿಯ ಆಲೋಚನೆ, ನಡತೆ ಎಷ್ಟೋ ಜನಗಳನ್ನು ನಾಶ ಮಾಡಿತು. ಹಿಟ್ಲರ್ ಒಬ್ಬ ವ್ಯಕ್ತಿ. ಆದರೆ ಅವನ ಕೃತಿ ಬಾಧಿಸಿದ್ದು ಎಷ್ಟೆಲ್ಲ ಜನರನ್ನು! ನಮ್ಮ ಆಲೋಚನೆ ಇತರರನ್ನೂ, ಇತರರ ಆಲೋಚನೆ ನಮ್ಮನ್ನೂ ಬಾಧಿಸುತ್ತವೆ ಎಂದರಿತು, ಎಂದಿಗೂ ಒಳ್ಳೆಯ […]
ಇವತ್ತಿನ ಮಕ್ಕಳೂ ಯುವಕರೂ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯನ್ನೇ ಕಾಣುತ್ತಿರುವುದು. ನಮ್ಮಲ್ಲಿಲ್ಲದ ಹಲವು ಒಳ್ಳೆಗುಣಗಳು ಅವರಲ್ಲಿ ಕಂಡು ಬರುತ್ತದೆ. ಆದರೆ, ನಮ್ಮ ಮೌಲ್ಯಗಳನ್ನು, ಸಂಸ್ಕೃತಿಯನ್ನು ಪೂರ್ಣವಾಗಿ ಮರೆತು ಪಾಶ್ಚಾತ್ಯ ರೀತಿಗಳ ಅಂಧಾನುಕರಣೆಯೇ ಇವತ್ತು ಕಂಡುಬರುವುದು. ಅದು ಪ್ಲಾಸ್ಟಿಕ್ ಸೇಬು ಕಚ್ಚಿದ ಹಾಗೆ; ಶಿವನು ಬ್ರಹ್ಮನ ವೇಷ ಹಾಕಿದಂತೆ. ಇದರಿಂದ ನಮ್ಮ ನಿಜ ವ್ಯಕ್ತಿತ್ವ ನಾಶವಾಗುತ್ತದೆ. ಆದಕಾರಣ ನಾವು ಬೆಳೆದ ಸಂಸ್ಕೃತಿಗೆ ಮರಳಲು ಪ್ರಯತ್ನಿಸಬೇಕು. ಅದಕ್ಕಾಗಿ ಚಿಕ್ಕ ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ಈ ಸಂಸ್ಕೃತಿಯ ಭದ್ರ ಬುನಾದಿ ಹಾಕಲು ತಾಯಂದಿರು […]