ದೇಶದಲ್ಲಿ ಸಮಾಜಕ್ಕೆ ವಿಪತ್ತಾಗಿ ಪರಿಣಮಿಸಿರುವ ಮಾಲಿನ್ಯಕ್ಕೆ ವಿರುದ್ಧವಾಗಿ ಯುವಕರ ಹೊಸ ಯೋಜನೆ ಅಮ್ಮನ 57ನೇ ಜನ್ಮದಿನೋತ್ಸವದ ವೇದಿಕೆಯಿಂದ ಆರಂಭವಾಯಿತು. ಪರಿಸರ ಶುಚೀಕರಣ ತಮ್ಮ ಕರ್ತವ್ಯ ಎಂಬ ದೃಢ ಪ್ರತಿಜ್ಞೆಯನ್ನು ಅಮ್ಮನ ಮಕ್ಕಳು ಮಾಡಿದರು. “ನಿರ್ಮಲ ಭಾರತವು ಅಮೃತ ಭಾರತ” ಎನ್ನುವ ಅಮ್ಮನ ಘೋಷಣೆ ತಮ್ಮ ಜೀವನದ ವ್ರತ ಎಂದಾಗಿದೆ ಆ ಪ್ರತಿಜ್ಞೆ. ಪ್ರತಿಜ್ಞೆ ಭೂಮಿಯು ನನ್ನ ತಾಯಿ. ಶುಚಿತ್ವ ಪ್ರಜ್ಞೆಯು ದೈವತ್ವದ ಪ್ರಜ್ಞೆಯೇ ಆಗಿದೆಯೆಂಬ ಅರಿವಿನೊಂದಿಗೆ – ನನ್ನ ಜೀವನದ ಮುಂಬರುವ ದಿನಗಳಲ್ಲಿ ಪರಿಸರ ನೈರ್ಮಲ್ಯದ್ದೂ, ಶುಚಿತ್ವದ್ದೂ, […]
Tag / ಸಂಸ್ಕಾರ
ಸಂಸ್ಕಾರ ಕಳೆದುಕೊಳ್ಳುವುದು ಸುಲಭ. ಹಾಗೆ ಮಾಡುವಾಗ ನಮ್ಮ ಜೀವನವು ನರಕಕ್ಕೆಯೇ ಹೋಗುವುದೆಂಬುದನ್ನು ನಾವು ತಿಳಿದುಕೊಳ್ಳುವುದಿಲ್ಲ. ಆಳವಾದವಾದ ಹೊಂಡದಲ್ಲಿ ಬಿದ್ದುಬಿಟ್ಟು, ನಂತರ ಮೇಲೆ ಹತ್ತಲು ಬವಣೆ ಪಡುವುದಕ್ಕಿಂತಲೂ ಒಳ್ಳೆಯದು, ಬೀಳುವ ಮೊದಲೆ ಜಾಗ್ರತೆ ವಹಿಸುವುದಲ್ಲವೆ? – ಅಮ್ಮ
ಉಲ್ಲಾಸವೂ ಸಂಸ್ಕಾರವೂ ಒಂದು ಸೇರಿದಾಗಲೇನೇ ಜೀವನ ಉತ್ಸವವಾಗಿ ಬದಲಾಗುತ್ತದೆ. ಆದರೆ ನಾವು ಎಷ್ಟೋ ಸಲ ಉಲ್ಲಾಸಕ್ಕಾಗಿ ಸಂಸ್ಕಾರವನ್ನು ಬಲಿ ಕೊಡುವುದನ್ನು ನೋಡುತ್ತೇವೆ. ಸಂಸ್ಕಾರವನ್ನು ಬೆಳೆಸಲು ಬಹಳ ಕಾಲದ ತಾಳ್ಮೆಯೂ ಪರಿಶ್ರಮವೂ ಅಗತ್ಯವಿದೆ. – ಅಮ್ಮ
ಮಕ್ಕಳಿಗೆ ಆಧ್ಯಾತ್ಮಿಕ ಸಂಸ್ಕಾರ ಸಿಗಬೇಕಾದದ್ದು ಅವರ ತಾಯಿಯಂದಿರಿಂದ. ಆದರೆ ಇವತ್ತು ನಮ್ಮ ತಾಯಂದಿರಿಗೆ ಅವರ ಮಕ್ಕಳು ಡಾಕ್ಟರಾಗಬೇಕು, ಅಲ್ಲದಿದ್ದರೆ ಎಂಜಿನೀಯರ್ ಆಗಬೇಕು ಎಂದು ಮಾತ್ರವೆ ಇರುವುದು. ಮಕ್ಕಳು ಒಳ್ಳೆ ಮನುಷ್ಯರಾಗಬೇಕು ಎನ್ನುವುದಕ್ಕೆ, ಅಪ್ಪ ಅಮ್ಮಂದಿರು ಸ್ವಲ್ಪವೂ ಪ್ರಾಮುಖ್ಯತೆ ನೀಡುವುದಿಲ್ಲ. ನಮಗೆ ನಮ್ಮದೆ ಆದ ಯಾವುದೆ ಆದರ್ಶವಿಲ್ಲ. – ಅಮ್ಮ
ಏತಕ್ಕಾಗಿ ತಾವು ಓದುತ್ತಿದ್ದೇವೆ ಎನ್ನುವ ಅರಿವಾದರೂ ಇಂದಿನ ಕಿರಿಯರಿಗೆ ಇಲ್ಲ. ಹೇಗಾದರೂ ಒಂದು ಸರ್ಟಿಫಿಕೇಟ್ ಸಂಪಾದಿಸಬೇಕೆಂದಲ್ಲದೆ, ವಿದ್ಯಾಭ್ಯಾಸದಿಂದ ಸರಿಯಾದ ಜ್ಞಾನವನ್ನೋ, ಒಳ್ಳೆ ಸಂಸ್ಕಾರವನ್ನೋ ಪಡೆಯ ಬೇಕೆಂದು ಇವತ್ತಿನ ಯುವಕರಿಗೆ ಇಚ್ಛೆಯಿಲ್ಲ. ಅವರಲ್ಲಿ ಅದನ್ನು ಪ್ರೇರೇಪಿಸಲು ಅಧ್ಯಾಪಕರಿಗೂ ಆಗುವುದಿಲ್ಲ. – ಅಮ್ಮ