ಪ್ರಶ್ನೆ: ಸಂಪತ್ತು ಗಳಿಸುವುದು ಆಧ್ಯಾತ್ಮಿಕತೆಗೆ ವಿರೋಧವೇ ? “ಮಕ್ಕಳೇ, ಎಷ್ಟು ಸ್ವತ್ತಿದ್ದರೂ, ಅದರ ಸ್ಥಾನವನ್ನೂ ಪ್ರಯೋಜನವನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳದಿರುವ ತನಕ ದುಃಖ ಮಾತ್ರವೇ ನಮ್ಮ ಪಾಲಿಗೆ ಇರುವುದು. ಅಗಣಿತ ಸಂಪತ್ತಿದ್ದರೂ ಅದರಿಂದ ಸಿಗುವ ಆನಂದ ತಾತ್ಕಾಲಿಕ ಮಕ್ಕಳೇ. ಶಾಶ್ವತವಾದ ಆನಂದ ಕೊಡಲು ಅದಕ್ಕೆ ಸಾಧ್ಯವಿಲ್ಲ. ಕಂಸನೂ ಹಿರಣ್ಯಕಶಿಪುವೂ ಎಲ್ಲಾ ಸಂಪತ್ತಿನ ಅಧಿಪತಿಗಳಾಗಿರಲಿಲ್ಲವೇ ? ಅವರಿಗೆ ಮನಸ್ಸಮಾಧಾನ ಇತ್ತೇ ? ಎಲ್ಲಾ ಇದ್ದ ರಾವಣನಿಗೆ ಏನು ಶಾಂತಿಯಿತ್ತು ? ಅವರೆಲ್ಲ ಸತ್ಯದ ದಾರಿ ತೊರೆದು, ಅಹಂಕಾರಿಗಳಾಗಿ ಬಾಳಿದರು. […]
Tag / ಸಂಪತ್ತು
ಪ್ರಶ್ನೆ: ಅಮ್ಮಾ, ಪ್ರಾರ್ಥನೆ ಹೇಗಿರಬೇಕು ? “ಲೋಕದ ಏಳಿಗೆಗಾಗಿ ಮಾಡುವ ಪ್ರಾರ್ಥನೆಯೇ ಅತ್ಯಂತ ಶ್ರೇಷ್ಟವಾದದ್ದು. ಆಸೆವಿಹೀನ ನಿಷ್ಕಾಮ ಪ್ರಾರ್ಥನೆ – ಅದುವೇ ಬೇಕಾಗಿರುವುದು. ’ದೇವರೇ, ಲೋಕದ ಕಷ್ಟಗಳನ್ನು ನಿವಾರಿಸು. ದೇವರೇ, ಎಲ್ಲರಿಗೂ ಒಳ್ಳೆಮನಸ್ಸನ್ನು ದಯಪಾಲಿಸು. ದೇವರೇ, ಎಲ್ಲರನ್ನೂ ಕಾಪಾಡು’ ಹೀಗೆ ಪ್ರಾರ್ಥಿಸಿರಿ ಮಕ್ಕಳೇ. ಪೂಜೆಗಾಗಿ ಹೂಗಳನ್ನು ಕೊಯ್ಯುತ್ತೇವೆ. ಆ ಹೂವಿನ ಸೊಬಗನ್ನೂ, ಸುಗಂಧವನ್ನೂ ನಮಗೆ ಅರಿವಿಲ್ಲದೆಯೂ ಮೊದಲು ಆಸ್ವಾದಿಸುವವರು ನಾವೆಯೇ. ’ಲೋಕಕ್ಕೆ ಒಳಿತು ಮಾಡು’ ಎಂದು ಪ್ರಾರ್ಥಿಸುವಾಗ ಸ್ವತಃ ನಾವೇ ಒಳ್ಳೆಯವರಾಗುತ್ತೇವೆ. ದೇವರಿಗೆ ಮಾಡುವ ಸೇವೆ, ಲೋಕಕ್ಕೆ […]
ಮಕ್ಕಳೇ, ಆಧಾರಸ್ತಂಭಗಳಿಲ್ಲದೆ ಕಟ್ಟಡ ಕಟ್ಟಬಹುದೆಂದು ಒಂದು ವೇಳೆ ವಿಜ್ಞಾನಿಗಳು ಕಂಡುಹಿಡಿದರೆಂದು ಇಟ್ಟುಕೊಳ್ಳೋಣ; ಇಂದು ಬಟನ್ ಅದುಮಿದರೆ ಈ ಪ್ರಪಂಚವೇ ಅಳಿದು ಹೋಗುತ್ತದೆಂದು ಇಟ್ಟುಕೊಳ್ಳೋಣ. ಆದರೆ ಇದರಿಂದ ಯಾವ ಮನಸ್ಸಿಗೂ ಯಾವ ಕುಟುಂಬಕ್ಕೂ ಸಮಾಧಾನವೆಂಬುದು ಸಿಗುವುದಿಲ್ಲ. ಹೊಟ್ಟೆ ತುಂಬ ಊಟ ಮಾಡಿಯೂ ’ಮನಸ್ಸಿಗೆ ಸಮಾಧಾನವಿಲ್ಲ, ನಿದ್ದೆ ಬರುತ್ತಿಲ್ಲ’ ಎನ್ನುವ ಮೊರೆಯನ್ನು ಮಾತ್ರವೇ ಇಂದು ನಾವು ಕೇಳುತ್ತಿರುವುದು. ಒಂದು ಕೋಟಿಗೂ (ಇದು 1987ರ ಮೊದಲಿನ ವರ್ಷಗಳಲ್ಲಿ ಅಮ್ಮ ಹೇಳಿದ ಮಾತು) ಮೀರಿ ಜನಗಳನ್ನು ಅಮ್ಮ ಇಷ್ಟು ಕಾಲದಿಂದ ಕಂಡು ಭೇಟಿಯಾಗಿದ್ದಾರೆ. […]