ಪ್ರಶ್ನೆ: ಅಮ್ಮಾ, ಪ್ರಾರ್ಥನೆ ಹೇಗಿರಬೇಕು ? “ಲೋಕದ ಏಳಿಗೆಗಾಗಿ ಮಾಡುವ ಪ್ರಾರ್ಥನೆಯೇ ಅತ್ಯಂತ ಶ್ರೇಷ್ಟವಾದದ್ದು. ಆಸೆವಿಹೀನ ನಿಷ್ಕಾಮ ಪ್ರಾರ್ಥನೆ – ಅದುವೇ ಬೇಕಾಗಿರುವುದು. ’ದೇವರೇ, ಲೋಕದ ಕಷ್ಟಗಳನ್ನು ನಿವಾರಿಸು. ದೇವರೇ, ಎಲ್ಲರಿಗೂ ಒಳ್ಳೆಮನಸ್ಸನ್ನು ದಯಪಾಲಿಸು. ದೇವರೇ, ಎಲ್ಲರನ್ನೂ ಕಾಪಾಡು’ ಹೀಗೆ ಪ್ರಾರ್ಥಿಸಿರಿ ಮಕ್ಕಳೇ. ಪೂಜೆಗಾಗಿ ಹೂಗಳನ್ನು ಕೊಯ್ಯುತ್ತೇವೆ. ಆ ಹೂವಿನ ಸೊಬಗನ್ನೂ, ಸುಗಂಧವನ್ನೂ ನಮಗೆ ಅರಿವಿಲ್ಲದೆಯೂ ಮೊದಲು ಆಸ್ವಾದಿಸುವವರು ನಾವೆಯೇ. ’ಲೋಕಕ್ಕೆ ಒಳಿತು ಮಾಡು’ ಎಂದು ಪ್ರಾರ್ಥಿಸುವಾಗ ಸ್ವತಃ ನಾವೇ ಒಳ್ಳೆಯವರಾಗುತ್ತೇವೆ. ದೇವರಿಗೆ ಮಾಡುವ ಸೇವೆ, ಲೋಕಕ್ಕೆ […]
Tag / ಪ್ರಾರ್ಥನೆ
ನಮಗೆ ಸದಾ ದುಃಖ ಮಾತ್ರವೇ ಇರುವುದು. ನಿತ್ಯಾನಿತ್ಯ ಏನೆಂಬುದರ ಅರಿವಿಲ್ಲದಿರುವುದರಿಂದ, ನಮ್ಮ ಆಸೆಗಳು ಶಾಶ್ವತವಾದವುಗಳಿಗೆ ಅಲ್ಲವಾದ್ದರಿಂದ ನಾವು ಹೀಗೆ ದುಃಖಿಗಳಾಗಿದ್ದೇವೆ. ಈ ದುಃಖದಿಂದಾಗಿ ಉರಿದುರಿದು ನಾವು ರೋಗಿಗಳಾಗುತ್ತೇವೆ; ನಮ್ಮ ಆಯುಷ್ಯವೂ ಕ್ಷೀಣಿಸುತ್ತದೆ. ಪ್ರೀತಿಯ ಮಕ್ಕಳೇ, ನಮ್ಮ ಕೆಲಸಗಳನ್ನು ನಾವು ಚೆನ್ನಾಗಿ ಮಾಡುತ್ತಿರುತ್ತೇವೆ. ಎಲ್ಲಿ ಹೋದರೂ ಅಲ್ಲಿಯ ದೋಷಗಳನ್ನು, ಕುಂದು ಕೊರತೆಗಳನ್ನು ನಾವು ಕಂಡು ಹಿಡಿಯುತ್ತೇವೆ; ನಮ್ಮ ಮನಸ್ಸು ಅಸ್ವಸ್ಥವಾಗುತ್ತದೆ. ಈ ದೃಷ್ಟಿಕೋನವಲ್ಲ ನಮಗೆ ಬೇಕಾಗಿರುವುದು. ಒಂದು ಕಡೆ ಏನು ಕಾಣಲಿಲ್ಲ ಎಂಬುದನ್ನು ಮರೆತು, ನಮಗೆ ಬೇಕಾದದ್ದು ಅಲ್ಲಿ […]