ಕಳೆದ 10 ವರ್ಷಗಳಿಂದ ಅಮ್ಮನ ಜಾಗತಿಕ ಸೇವಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ತಮ್ಮ ಸಂಪ್ರದಾಯವನ್ನು ಈ ವರ್ಷವೂ ಪಾಲಿಸಿಕೊಂಡು ಬಂದ ಜಪಾನಿನ ಅಂತರ್ರಾಷ್ಟ್ರೀಯ ಛಾತ್ರ ಸ್ವಯಂಸೇವಕ ಸಂಘದ (International Volunteer University Student Association – IVUSA ), 60 ಯುವಕ ಯುವತಿಯರು ಈ ವರ್ಷ ಬಂದದ್ದು, ರಾಯಚೂರಿಗೆ. 42 ಡಿಗ್ರಿಯ ತಾಪಮಾನವೂ ಅವರ ಸೇವಾ ಮನೋಭಾವಕ್ಕೂ ಉತ್ಸಾಹಕ್ಕೂ ಯಾವುದೇ ತಡೆಯಾಗುವಲ್ಲಿ ಸಫಲವಾಗಲಿಲ್ಲ. ಗೃಹನಿರ್ಮಾಣ ಕಾರ್ಯದಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿವುದಲ್ಲದೆ, ಹಳ್ಳಿಗರೊಂದಿಗೆ ಸ್ನೇಹದಿಂದ ಬೆರೆತು ಹೋಳಿ ಆಚರಿಸಿದರು, […]