ಪ್ರಶ್ನೆ: ಅಮ್ಮಾ, ಇಷ್ಟರೂಪವನ್ನು ಎಲ್ಲಿಟ್ಟುಕೊಂಡು ಧ್ಯಾನ ಮಾಡಬೇಕು ? “ಮಕ್ಕಳೇ, ಇಷ್ಟದೇವತೆಯನ್ನು ಹೃದಯಕಮಲದಲ್ಲೋ ಭ್ರೂಮಧ್ಯದಲ್ಲೋ ಇಟ್ಟುಕೊಂಡು ಧ್ಯಾನ ಮಾಡಬಹುದು. ಗೃಹಸ್ಥರು ಹೃದಯಕಮಲದಲ್ಲಿ ಧ್ಯಾನ ಮಾಡುವುದು ಉತ್ತಮ. ಭ್ರೂಮಧ್ಯದಲ್ಲಿ ಧ್ಯಾನ ಮಾಡುವುದೂ ಉತ್ತಮವೇ. ಆದರೆ ಅದು ಗುರುವಿನ ಮಾರ್ಗದರ್ಶನ ಇದ್ದರೆ ಮಾತ್ರ. ಭ್ರೂಮಧ್ಯದಲ್ಲಿ ಧ್ಯಾನ ಮಾಡುವಾಗ ಕೆಲವರಿಗೆ ತಲೆ ಬಿಸಿಯಾಗುವುದೋ, ನಿದ್ದೆ ತೀರ ಇಲ್ಲದಾಗುವುದೋ ಆಗಬಹುದು. ಇದು ರೋಗವೆಂದು ತಪ್ಪು ಅಭಿಪ್ರಾಯ ಉಂಟಾಗಬಹುದು. ಆದಕಾರಣ ಗುರುವಿಲ್ಲದೆ ಧ್ಯಾನ ಮಾಡುವವರು ವಿಶೇಷ ಜಾಗ್ರತೆ ವಹಿಸಬೇಕು.” ಪ್ರಶ್ನೆ: ಅಮ್ಮಾ, ಎಷ್ಟು ಸಮಯ […]