ಪ್ರಶ್ನೆ: ಈ ಲೋಕದಲ್ಲಿ ಎಷ್ಟೋ ಜನರು ಕಷ್ಟ ಪಡುತ್ತಾರೆ; ಉಪವಾಸ ಅಲೆಯುತ್ತಾರೆ. ಇನ್ನು ಕೆಲವರು ಹಣವಂತರಾಗಿ ಸುಖ ಅನುಭವಿಸುತ್ತಾರೆ. ದೇವರು ಕರುಣಾಮಯನೆಂದು ಹೇಳುತ್ತಾರೆ. ಆದರೆ ಅವನ ಕೆಲವು ವಿಷಯಗಳನ್ನು ನೋಡುವಾಗ ಎದ್ದು ಕಾಣುವುದು ಕರುಣೆಯಲ್ಲ, ಕ್ರೂರತನ. ಮಕ್ಕಳೇ, ತಪ್ಪು ದೇವರದಲ್ಲ. ದೇವರು ಕರುಣಾಮಯನೆ. ಮಕ್ಕಳೇ, ನಮ್ಮ ತಾಯಿ ನಮ್ಮನ್ನು ಹೆರುತ್ತಾಳೆ; ಬೆಳೆಯಬೇಕಾದ ಮಾರ್ಗವನ್ನೂ ನಮಗೆ ಹೇಳಿ ಕೊಡುತ್ತಾಳೆ. ಅದನ್ನನುಸರಿಸದಿದ್ದರೆ ನಮ್ಮ ಬೆಳವಣಿಗೆ ಕುಂಠಿತವಾಗುತ್ತದೆ. ಹಾಗೆಂದು ದೇವರ ಮೇಲೆ ಕ್ರೂರತನದ ಆರೋಪಣೆ ಮಾಡುವುದೆಂದರೆ ಅದು ನಮ್ಮತಾಯಿಯ ಮೇಲೆ ಅಪವಾದ […]