ಮೇರೆ ಇಲ್ಲದ, ಭೇದವಿಲ್ಲದ ಅಖಂಡವಾದ ಏಕತ್ವವೇ ಭಗವಂತ. ಆ ಭಗವತ್ದಶಕ್ತಿಯು ಪ್ರಕೃತಿಯಲ್ಲಿ, ಪರಿಸರದಲ್ಲಿ, ಮೃಗಗಳಲ್ಲಿ, ಮನುಷ್ಯರಲ್ಲಿ, ಗಿಡಗಳಲ್ಲಿ, ಮರಗಳಲ್ಲಿ, ಪಕ್ಷಿಗಳಲ್ಲಿ ಪ್ರತಿಯೊಂದು ಕಣಕಣದಲ್ಲಿಯೂ ತುಂಬಿತುಳುಕುತ್ತಿದೆ. ಜಡ ಚೈತನ್ಯಗಳೆಲ್ಲವೂ ಭಗವತ್ದಮಯವಾಗಿದೆ. ಈ ಸತ್ಯವನ್ನು ಅರಿತರೆ ನಮಗೆ ನಮ್ಮನ್ನು, ಇತರರನ್ನು, ಈ ಲೋಕವನ್ನು ಪ್ರೇಮಿಸಲು ಮಾತ್ರವೇ ಸಾಧ್ಯ. ಪ್ರೇಮದ ಮೊದಲ ತರಂಗವು ನಮ್ಮಿಂದಲೇ ಪ್ರಾರಂಭವಾಗಬೇಕು. ನಿಶ್ಚಲವಾಗಿರುವ ಸರೋವರದಲ್ಲಿ ಕಲ್ಲೊಂದನ್ನು ಎಸೆದರೆ, ಮೊದಲ ಪುಟ್ಟ ತರಂಗವು ಆ ಕಲ್ಲಿನ ಸುತ್ತಲು ಪ್ರಕಟವಾಗುತ್ತದೆ. ಕ್ರಮೇಣ ಆ ತರಂಗದ ವೃತ್ತವು ದೊಡ್ಡದಾಗುತ್ತಾ ದೊಡ್ಡದಾಗುತ್ತಾ ಅದು […]
Tag / ಕರ್ಮ
ನಮಗೆ ಯಾವುದೇ ವಸ್ತು ದೊರಕಬೇಕಾದರೂ ಅದಕ್ಕೊಂದು ಬೆಲೆ ತೆರಬೇಕು. ಆ ಕಡೆಗೆ ಏನೂ ಕೊಡದೆ, ಏನಾದರೂ ಗಳಿಸಲು ಕರ್ಮ ಕ್ಷೇತ್ರದಲ್ಲಿ ಸಾಧ್ಯವಲ್ಲ. ಒಳ್ಳೆ ಉದ್ಯೋಗ ಸಿಗಬೇಕೆಂದಿದ್ದರೆ, ನಿದ್ದೆಗೆಟ್ಟು, ಕಷ್ಟಪಟ್ಟು ಕಲಿಯಬೇಕು. ಒಳ್ಳೆ ಫಸಲು ಬರಬೇಕೆಂದಿದ್ದರೆ, ಸಮಯಕ್ಕೆ ಸರಿಯಾಗಿ ಬೀಜ ಬಿತ್ತಿ, ಬೇಕಾದ ಗೊಬ್ಬರವನ್ನೂ ನೀರನ್ನೂ ಕೊಡಬೇಕು. – ಅಮ್ಮ
ಸಮುದಾಯದಲ್ಲಿ ಒಳ್ಳೆ ಬದಲಾವಣೆ ತರಬೇಕೆಂದು ನಾವು ಪ್ರಾಮಾಣಿಕವಾಗಿ ಬಯಸುವುದಾದರೆ, ಅದಕ್ಕಾಗಿ ನಮ್ಮ ಕಡೆಯಿಂದ ನಾವು ಪ್ರಯತ್ನ ಮಾಡಬೇಕು. ನಾವು ಕ್ರಿಯಾತ್ಮಕವಾಗಿ ಏನಾದಾರೂ ಮಾಡಬೇಕು. ನಾವು ಒಳ್ಳೆಯದನ್ನು ಮಾಡಬೇಕೆಂದು ಬಯಸಿದರೆ ಮಾತ್ರ ಸಾಲದು. ಒಂದಷ್ಟು ತ್ಯಾಗ, ಸ್ವಲ್ಪ ಪ್ರಯತ್ನ ಮಕ್ಕಳ ಕಡೆಯಿಂದ ಮಾಡಬೇಕು. - ಅಮ್ಮ