ಇಂದು ಭಾರತ ಹಲವು ಕ್ಷೇತ್ರಗಳಲ್ಲಿ ಸಾಧಿಸುತ್ತಿರುವ ಅಭಿವೃದ್ಧಿಯನ್ನು ಕಂಡು ಭರವಸೆ ಮೂಡುತ್ತಿದೆ. ಆರ್ಥಿಕ ಬೆಳವಣಿಗೆಯಲ್ಲಿಯೂ ಹಾಗು ವಿಜ್ಞಾನದಲ್ಲಿಯ ಪ್ರಗತಿಯಲ್ಲಿಯೂ ನಾವು ಬಹಳ ಮುಂದುವರಿಯುತ್ತಿದ್ದೇವೆ. ಮಂಗಳಯಾನ ಉಪಗ್ರಹದ ವಿಜಯವು ಇಡೀ ಲೋಕದ ಮನ್ನಣೆಯನ್ನು ನಮಗೆ ಗಳಿಸಿಕೊಟ್ಟಿದೆ. ಹಾಗಿದ್ದರೂ ಸಹ, ಭಾರತದಲ್ಲಿನ ಪ್ರತಿಯೊಂದು ಬಡವರ ಜೀವನದಲ್ಲಿಯೂಕೂಡ ಮಂಗಳವು ಸಂಭವಿಸುವಾಗ ಮಾತ್ರವೇ ನಮ್ಮಯ ಅಭಿವೃದ್ಧಿಗಳೆಲ್ಲವೂ ನಿಜವಾದ ಅರ್ಥವನ್ನು ಮತ್ತು ಪೂರ್ಣತೆಯನ್ನು ಹೊಂದುವುದು.ಕಳೆದ ಎರಡು ವರ್ಷಗಳಿಂದ ಆಶ್ರಮವು ಭಾರತದಾದ್ಯಂತ ನೂರಾರು ಗ್ರಾಮಗಳನ್ನು ದತ್ತುಪಡೆದು ಅಲ್ಲಿ ಸೇವಾಕಾರ್ಯಗಳನ್ನು ನಡೆಸುತ್ತಿದೆ. ಹಲವು ಗ್ರಾಮಗಳ ಸ್ಥಿತಿಯನ್ನು ಕಾಣುವಾಗ […]
Tag / ಕರುಣೆ
ಅರಿವಿನ ಕಣ್ಣುಗಳಿಂದ ಲೋಕವನ್ನು ನೋಡುವುದೂ, ಕರುಣೆಯ ಕಣ್ಣುಗಳಿಂದ ದುಃಖಿತರಿಗೆ ಸಾಂತ್ವನ ನೀಡುವುದೂ ಮಾಡಿದರೆ, ನಾವು ಖಂಡಿತವಾಗಿಯೂ ಶಾಂತಿಯ ಹಾಗೂ ಆನಂದದ ತೀರವನ್ನು ತಲಪ ಬಹುದು – ಅಮ್ಮ
ಮಕ್ಕಳೇ, ಸುತ್ತಲೂ ಒಂದು ಸಲ ದೃಷ್ಟಿ ಹರಿಸಿ ನೋಡಿ. ಅದನ್ನೊಮ್ಮೆ ವಿಷ್ಲೇಶಣೆ ಮಾಡಿ. ಲೋಕದ ಇವತ್ತಿನ ಪರಿಸ್ಥಿತಿ ಏನಂತ ಸ್ವಲ್ಪ ಅರಿತುಕೊಳ್ಳೋಣ. ಅದಕ್ಕೆಂದೇ ಇರುವ ದಿವಸವಿದು. ಜಗತ್ತಿನ ಜನಗಳು ಎಷ್ಟೆಲ್ಲಾ ತರದಲ್ಲಿ ಕಷ್ಟ ಪಡುತ್ತಿದ್ದಾರೆ. ಅವರ ಜೀವನವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಒಂದು ವರ್ಷದ ಹಿಂದೆ ನಡೆದ ಘಟನೆಯೊಂದು ಅಮ್ಮನಿಗೆ ನೆನಪಾಗುತ್ತಿದೆ; ಮುಂಬೈಯಲ್ಲಿನ ಮಕ್ಕಳು ಹೇಳಿ ಗೊತ್ತಾಗಿದ್ದು. ಮುಂಬೈಯಲ್ಲಿ ಒಂದು ಕಡೆ ಒಬ್ಬಾತನಿಗೆ ಷುಗರಿನ ಖಾಯಿಲೆಯಿತ್ತು. ಆ ವ್ಯಕ್ತಿಯ ಕಾಲಲ್ಲಿ ಒಂದು ಗಾಯವಾಗಿ, ಬಲಿತು ದೊಡ್ಡ ಹುಣ್ಣಾಯಿತು. […]