ಮಕ್ಕಳೇ, ಆಧಾರಸ್ತಂಭಗಳಿಲ್ಲದೆ ಕಟ್ಟಡ ಕಟ್ಟಬಹುದೆಂದು ಒಂದು ವೇಳೆ ವಿಜ್ಞಾನಿಗಳು ಕಂಡುಹಿಡಿದರೆಂದು ಇಟ್ಟುಕೊಳ್ಳೋಣ; ಇಂದು ಬಟನ್ ಅದುಮಿದರೆ ಈ ಪ್ರಪಂಚವೇ ಅಳಿದು ಹೋಗುತ್ತದೆಂದು ಇಟ್ಟುಕೊಳ್ಳೋಣ. ಆದರೆ ಇದರಿಂದ ಯಾವ ಮನಸ್ಸಿಗೂ ಯಾವ ಕುಟುಂಬಕ್ಕೂ ಸಮಾಧಾನವೆಂಬುದು ಸಿಗುವುದಿಲ್ಲ. ಹೊಟ್ಟೆ ತುಂಬ ಊಟ ಮಾಡಿಯೂ ’ಮನಸ್ಸಿಗೆ ಸಮಾಧಾನವಿಲ್ಲ, ನಿದ್ದೆ ಬರುತ್ತಿಲ್ಲ’ ಎನ್ನುವ ಮೊರೆಯನ್ನು ಮಾತ್ರವೇ ಇಂದು ನಾವು ಕೇಳುತ್ತಿರುವುದು. ಒಂದು ಕೋಟಿಗೂ (ಇದು 1987ರ ಮೊದಲಿನ ವರ್ಷಗಳಲ್ಲಿ ಅಮ್ಮ ಹೇಳಿದ ಮಾತು) ಮೀರಿ ಜನಗಳನ್ನು ಅಮ್ಮ ಇಷ್ಟು ಕಾಲದಿಂದ ಕಂಡು ಭೇಟಿಯಾಗಿದ್ದಾರೆ. […]
Tag / ಆನಂದ
ಹಿಂದಿನ ಕಾಲದಲ್ಲೆಲ್ಲ ಕಾಡು ಹೊರಗಿರುತ್ತಿತ್ತು. ಈಗ ಕಾಡನ್ನು ಕಡಿದು ಸವರಿ ನಮ್ಮೊಳಗೇ ತಂದಿದ್ದೇವೆ. ಹಿಂದೆ ಪ್ರಾಣಿಗಳು ಹೊರಗಿರುತ್ತಿದ್ದವು. ಇಂದು ಅವುಗಳನ್ನೂ ಆಂತರ್ಯದಲ್ಲಿ ತಂದಿದ್ದೇವೆ. ಹೃದಯದ ಕಲ್ಮಶಗಳನ್ನು ನಾವು ಶೇವ್ ಮಾಡಿ ತೆಗೆಯಬೇಕಾದದ್ದು; ಬದಲಿಗೆ ನಮ್ಮ ಮುಖದ್ದು ಅಲ್ಲ. ಮಕ್ಕಳು ಏನೂ ತ್ಯಜಿಸಬೇಕೆಂದು ಅಮ್ಮ ಹೇಳುತ್ತಿಲ್ಲ. ಅನ್ಯರಲ್ಲಿ ಕರುಣೆ ತೋರಿಸಿದಾಗ, ಸ್ವಾರ್ಥ ತಾನಾಗಿಯೇ ಬಿಟ್ಟು ಹೋಗುತ್ತದೆ. ನೀವು ಒಂದು ದಿನಕ್ಕೆ ಹತ್ತು ರುಪಾಯಿ ಸಿಗರೇಟು ಸೇದುತ್ತೀರ ಎಂದು ಇಟ್ಟುಕೊಳ್ಳೋಣ. ತಿಂಗಳಿಗೆ ಮುನ್ನೂರು ರುಪಾಯಿ ಆಯಿತು. ಈ ತರಹ ಲೆಕ್ಕ […]
ವೇದಾಂತವು, ಪ್ರಪಂಚವನ್ನೂ ಪ್ರಪಂಚಜೀವನವನ್ನೂ ನಿಷೇಧಿಸುವುದಲ್ಲ. ಯಥಾರ್ಥದಲ್ಲಿ ಪ್ರಪಂಚದ ಸುಖದುಃಖಗಳ ನಡುವಿನಲ್ಲಿ ಇರುವುದೆ ಎಲ್ಲಕ್ಕಿಂತಲೂ ಅತೀತವಾದ ಶಾಂತಿಯೂ ಆನಂದವೂ ಅನುಭವಿಸಲಿಕ್ಕಿರುವ ಮಾರ್ಗವೆಂದು ಅದು ಉಪದೇಶಿಸುತ್ತದೆ. – ಅಮ್ಮ
ಅರಿವಿನ ಕಣ್ಣುಗಳಿಂದ ಲೋಕವನ್ನು ನೋಡುವುದೂ, ಕರುಣೆಯ ಕಣ್ಣುಗಳಿಂದ ದುಃಖಿತರಿಗೆ ಸಾಂತ್ವನ ನೀಡುವುದೂ ಮಾಡಿದರೆ, ನಾವು ಖಂಡಿತವಾಗಿಯೂ ಶಾಂತಿಯ ಹಾಗೂ ಆನಂದದ ತೀರವನ್ನು ತಲಪ ಬಹುದು – ಅಮ್ಮ