ಮಕ್ಕಳಿಗೆ ಆಧ್ಯಾತ್ಮಿಕ ಸಂಸ್ಕಾರ ಸಿಗಬೇಕಾದದ್ದು ಅವರ ತಾಯಿಯಂದಿರಿಂದ. ಆದರೆ ಇವತ್ತು ನಮ್ಮ ತಾಯಂದಿರಿಗೆ ಅವರ ಮಕ್ಕಳು ಡಾಕ್ಟರಾಗಬೇಕು, ಅಲ್ಲದಿದ್ದರೆ ಎಂಜಿನೀಯರ್ ಆಗಬೇಕು ಎಂದು ಮಾತ್ರವೆ ಇರುವುದು. ಮಕ್ಕಳು ಒಳ್ಳೆ ಮನುಷ್ಯರಾಗಬೇಕು ಎನ್ನುವುದಕ್ಕೆ, ಅಪ್ಪ ಅಮ್ಮಂದಿರು ಸ್ವಲ್ಪವೂ ಪ್ರಾಮುಖ್ಯತೆ ನೀಡುವುದಿಲ್ಲ. ನಮಗೆ ನಮ್ಮದೆ ಆದ ಯಾವುದೆ ಆದರ್ಶವಿಲ್ಲ. – ಅಮ್ಮ
Tag / ಆಧ್ಯಾತ್ಮಿಕತೆ
ಇಂದು ನಾವು ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಲಿಸುತ್ತಿದ್ದೇವೆ. ಆದರೆ ಜೀವನವೆನ್ನುವುದು ಕೇವಲ ಬಿಸಿನೆಸ್ ಮಾತ್ರವಲ್ಲ. ಅದು ಹೇಗೆ ಜೀವನವನ್ನು ಅದರ ಪೂರ್ಣತೆಯಲ್ಲಿ ಅನುಭವಿಸುವುದು ಎನ್ನುವುದನ್ನು ಕಲಿತುಕೊಳ್ಳಬೇಕಾದರೆ, ಆಧ್ಯಾತ್ಮಿಕತೆಯನ್ನು ಅರಿತುಕೊಳ್ಳಬೇಕು. ಆಧ್ಯಾತ್ಮಿಕತೆಯು, ಜೀವನದ ಪೂರ್ಣ ಮ್ಯಾನೇಜ್‌ಮೆಂಟನ್ನು ಕಲಿಸುತ್ತದೆ. – ಅಮ್ಮ
ನಮ್ಮ ಮಕ್ಕಳು ಹಲವು ವಿಧದ ವಿಷಯಗಳ ಬಗ್ಗೆ ಹೆಚ್ಚು ಕಲಿಯುತ್ತಾರೆ. ಆದರೆ ಈ ತಿಳುವಳಿಕೆಯೆಲ್ಲ ಅಡಿಪಾಯವಿಲ್ಲದೆ ಕಟ್ಟಿದ ಮನೆಯ ಹಾಗೆ. ಮೂಲಭೂತವಾಗಿ ಅರಿತು ಕೊಂಡಿರಬೇಕಾದ ಆಧ್ಯಾತ್ಮಿಕತೆಗೆ ನಾವು ನಮ್ಮ ಜೀವನದಲ್ಲಿ ಯಾವ ಸ್ಥಾನವನ್ನೂ ಕೊಡುತ್ತಿಲ್ಲ. – ಅಮ್ಮ