ಕೆನ್ಯ, ಎಪ್ರಿಲ್ 5: ಕೆನ್ಯಾ ಗಣರಾಜ್ಯದ ಉಪಾಧ್ಯಕ್ಷ ಕಲೋಂಜ಼ೋ ಮ್ಯುಸಿಯೋಕ ಅವರು ಕೆನ್ಯದ ಮಾತಾ ಅಮೃತಾನಂದಮಯಿ ಮಠದವರು ಕಟ್ಟಿಸಿಕೊಟ್ಟ ನೂತನ ಅನಾಥಾಲಯವನ್ನು ಅಮ್ಮನವರ ಸಾನ್ನಿಧ್ಯದಲ್ಲಿ ಉದ್ಘಾಟನೆ ಮಾಡಿದರು. ಅತಿ ನದಿ ಹತ್ತಿರ ನಡೆದ ಈ ಸಾರ್ವಜನಿಕ ಸಮಾರಂಭದಲ್ಲಿ ಉಪಾಧ್ಯಕ್ಷರೇ ಅಲ್ಲದೆ ಇನ್ನೂ ಹಲವು ಗಣ್ಯರು ಭಾಗವಹಿಸಿದ್ದರು. ಕ್ರೀಡೆ ಮತ್ತು ಸಂಸ್ಕೃತಿ ಸಚಿವೆ ಶ್ರೀಮತಿ ವಾವಿನ್ಯಾ ನ್ದೇತಿ ಮತ್ತು ಜಿಲ್ಲಾ ಕಲೆಕ್ಟರ್, ಹಲವಾರು ಪಾರ್ಲಿಮೆಂಟ್ ಸದಸ್ಯರು, ಕೆನ್ಯಾದ ಖ್ಯಾತ ಗಾಯಕ ಎರಿಕ್ ವೈನೈನ ಅವರು ಉಪಸ್ಥಿತರಿದ್ದರು. ಮೊದಲ ಹಂತದಲ್ಲಿ […]