ಅಧ್ಯಾತ್ಮವು ಧನಕ್ಕೋ ಕೀರ್ತಿಗೋ ಎದುರಲ್ಲ. ಅವನ್ನು ಗಳಿಸುವುದಕ್ಕೆ ತಡೆಯೂ ಅಲ್ಲ. ಆದರೆ ಅದಕ್ಕಾಗಿ ನಾವು ಸ್ವೀಕರಿಸುವ ಮಾರ್ಗ ಧಾರ್ಮಿಕವಾಗಿರಬೇಕೆಂದು ಮಾತ್ರವೆ ಆಧ್ಯಾತ್ಮಿಕ ಆಚಾರ್ಯರು ಹೇಳುವುದು. – ಅಮ್ಮ
ವೇದಾಂತವು, ಪ್ರಪಂಚವನ್ನೂ ಪ್ರಪಂಚಜೀವನವನ್ನೂ ನಿಷೇಧಿಸುವುದಲ್ಲ. ಯಥಾರ್ಥದಲ್ಲಿ ಪ್ರಪಂಚದ ಸುಖದುಃಖಗಳ ನಡುವಿನಲ್ಲಿ ಇರುವುದೆ ಎಲ್ಲಕ್ಕಿಂತಲೂ ಅತೀತವಾದ ಶಾಂತಿಯೂ ಆನಂದವೂ ಅನುಭವಿಸಲಿಕ್ಕಿರುವ ಮಾರ್ಗವೆಂದು ಅದು ಉಪದೇಶಿಸುತ್ತದೆ. – ಅಮ್ಮ
ಆಧ್ಯಾತ್ಮಿಕತೆಯೆನ್ನುವುದು ಪರಮೋಚ್ಛ ಸಯನ್ಸಾಗಿದೆ. ಆಧ್ಯಾತ್ಮಿಕತೆಯಿಲ್ಲದ ಸಯನ್ಸು ಕುರುಡು; ಸಯನ್ಸಿಲ್ಲದ ಆಧ್ಯಾತ್ಮಿಕತೆ ಕುಂಟು. – ಅಮ್ಮ
ಅರಿವಿನ ಕಣ್ಣುಗಳಿಂದ ಲೋಕವನ್ನು ನೋಡುವುದೂ, ಕರುಣೆಯ ಕಣ್ಣುಗಳಿಂದ ದುಃಖಿತರಿಗೆ ಸಾಂತ್ವನ ನೀಡುವುದೂ ಮಾಡಿದರೆ, ನಾವು ಖಂಡಿತವಾಗಿಯೂ ಶಾಂತಿಯ ಹಾಗೂ ಆನಂದದ ತೀರವನ್ನು ತಲಪ ಬಹುದು – ಅಮ್ಮ
ಸಂಸ್ಕಾರ ಕಳೆದುಕೊಳ್ಳುವುದು ಸುಲಭ. ಹಾಗೆ ಮಾಡುವಾಗ ನಮ್ಮ ಜೀವನವು ನರಕಕ್ಕೆಯೇ ಹೋಗುವುದೆಂಬುದನ್ನು ನಾವು ತಿಳಿದುಕೊಳ್ಳುವುದಿಲ್ಲ. ಆಳವಾದವಾದ ಹೊಂಡದಲ್ಲಿ ಬಿದ್ದುಬಿಟ್ಟು, ನಂತರ ಮೇಲೆ ಹತ್ತಲು ಬವಣೆ ಪಡುವುದಕ್ಕಿಂತಲೂ ಒಳ್ಳೆಯದು, ಬೀಳುವ ಮೊದಲೆ ಜಾಗ್ರತೆ ವಹಿಸುವುದಲ್ಲವೆ?
– ಅಮ್ಮ

Download Amma App and stay connected to Amma