Category / ಅಮೃತವಾಣಿ

ಆಧ್ಯಾತ್ಮಿಕತೆಯೆನ್ನುವುದು ಪರಮೋಚ್ಛ ಸಯನ್ಸಾಗಿದೆ. ಆಧ್ಯಾತ್ಮಿಕತೆಯಿಲ್ಲದ ಸಯನ್ಸು ಕುರುಡು; ಸಯನ್ಸಿಲ್ಲದ ಆಧ್ಯಾತ್ಮಿಕತೆ ಕುಂಟು. – ಅಮ್ಮ

ಅರಿವಿನ ಕಣ್ಣುಗಳಿಂದ ಲೋಕವನ್ನು ನೋಡುವುದೂ, ಕರುಣೆಯ ಕಣ್ಣುಗಳಿಂದ ದುಃಖಿತರಿಗೆ ಸಾಂತ್ವನ ನೀಡುವುದೂ ಮಾಡಿದರೆ, ನಾವು ಖಂಡಿತವಾಗಿಯೂ ಶಾಂತಿಯ ಹಾಗೂ ಆನಂದದ ತೀರವನ್ನು ತಲಪ ಬಹುದು – ಅಮ್ಮ

ಸಂಸ್ಕಾರ ಕಳೆದುಕೊಳ್ಳುವುದು ಸುಲಭ. ಹಾಗೆ ಮಾಡುವಾಗ ನಮ್ಮ ಜೀವನವು ನರಕಕ್ಕೆಯೇ ಹೋಗುವುದೆಂಬುದನ್ನು ನಾವು ತಿಳಿದುಕೊಳ್ಳುವುದಿಲ್ಲ. ಆಳವಾದವಾದ ಹೊಂಡದಲ್ಲಿ ಬಿದ್ದುಬಿಟ್ಟು, ನಂತರ ಮೇಲೆ ಹತ್ತಲು ಬವಣೆ ಪಡುವುದಕ್ಕಿಂತಲೂ ಒಳ್ಳೆಯದು, ಬೀಳುವ ಮೊದಲೆ ಜಾಗ್ರತೆ ವಹಿಸುವುದಲ್ಲವೆ? – ಅಮ್ಮ

ಉಲ್ಲಾಸವೂ ಸಂಸ್ಕಾರವೂ ಒಂದು ಸೇರಿದಾಗಲೇನೇ ಜೀವನ ಉತ್ಸವವಾಗಿ ಬದಲಾಗುತ್ತದೆ. ಆದರೆ ನಾವು ಎಷ್ಟೋ ಸಲ ಉಲ್ಲಾಸಕ್ಕಾಗಿ ಸಂಸ್ಕಾರವನ್ನು ಬಲಿ ಕೊಡುವುದನ್ನು ನೋಡುತ್ತೇವೆ. ಸಂಸ್ಕಾರವನ್ನು ಬೆಳೆಸಲು ಬಹಳ ಕಾಲದ ತಾಳ್ಮೆಯೂ ಪರಿಶ್ರಮವೂ ಅಗತ್ಯವಿದೆ. – ಅಮ್ಮ

ನಮಗೆ ಯಾವುದೇ ವಸ್ತು ದೊರಕಬೇಕಾದರೂ ಅದಕ್ಕೊಂದು ಬೆಲೆ ತೆರಬೇಕು. ಆ ಕಡೆಗೆ ಏನೂ ಕೊಡದೆ, ಏನಾದರೂ ಗಳಿಸಲು ಕರ್ಮ ಕ್ಷೇತ್ರದಲ್ಲಿ ಸಾಧ್ಯವಲ್ಲ. ಒಳ್ಳೆ ಉದ್ಯೋಗ ಸಿಗಬೇಕೆಂದಿದ್ದರೆ, ನಿದ್ದೆಗೆಟ್ಟು, ಕಷ್ಟಪಟ್ಟು ಕಲಿಯಬೇಕು. ಒಳ್ಳೆ ಫಸಲು ಬರಬೇಕೆಂದಿದ್ದರೆ, ಸಮಯಕ್ಕೆ ಸರಿಯಾಗಿ ಬೀಜ ಬಿತ್ತಿ, ಬೇಕಾದ ಗೊಬ್ಬರವನ್ನೂ ನೀರನ್ನೂ ಕೊಡಬೇಕು. – ಅಮ್ಮ