ಪರಿಸ್ಥಿತಿಗಳೊಂದಿಗೆ ಹೊಂದಿಕೊಳ್ಳಲು ನಮ್ಮ ಹೃದಯದಲ್ಲಿ ಶಾಂತಿ ಇರಬೇಕು. ಇದು ಆಧ್ಯಾತ್ಮಿಕತೆಯನ್ನು ಅರ್ಥಮಾಡಿಕೊಳ್ಳುವುದರ ಮೂಲಕ ಮಾತ್ರ ಸಾಧ್ಯ. ಈ ವಿಧಾನದಲ್ಲಿಶಾಂತವಾದ ಮನಸ್ಸು ಪರಿಸ್ಥಿತಿಗಳೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಧ್ಯಾನದಿಂದ ಮಾತ್ರ ನಿಜವಾದ ಶಾಂತಿ ಸಿಗುತ್ತದೆ. ಜೀವನದಲ್ಲಿ ಯಾವುದೇ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳುವ ಮನಸ್ಸನ್ನು ನಾವು ಬೆಳೆಸಿಕೊಳ್ಳಬೇಕು. ನಮ್ಮ ಜೀವನ ಕಣ್ಣಿನಂತೆ ಇರಬೇಕು ಎಂದು ಹೇಳುತ್ತಾರೆ. ಏಕೆಂದರೆ, ಕಣ್ಣು ನೋಟದ ಶಕ್ತಿಯನ್ನು ನಿಯಂತ್ರಿಸಬಲ್ಲದು. ಒಂದು ವಸ್ತು ದೂರದಲ್ಲಿದ್ದದರೂ ಅಥವಾ ಹತ್ತಿರದಲ್ಲಿದ್ದರೂ, ಕಣ್ಣು ಅದಕ್ಕೆ ಅನುಗುಣವಾಗಿ ನೋಟವನ್ನು ಹೊಂದಿಸುತ್ತದೆ. ಇದರ ಫಲವಾಗಿಯೇ ನಾವು ಅವುಗಳನ್ನು […]
Category / ಅಮೃತವಾಣಿ
ಅಧ್ಯಾತ್ಮವೇನಂದರೆ ಜೀವನದಲ್ಲಿ ನಾವು ಬಾಳುವ ಮೌಲ್ಯಗಳು. ಅವುಗಳೂ ತಂತ್ರ ಜ್ಞಾನವೂ ಕೈಮೇಳವಿಸಿದಾಗ ಮಾತ್ರವೇ ಮನುಕುಲಕ್ಕೆ ಸರಿಯಾದ ಬೆಳವಣಿಗೆಯೂ ವಿಕಾಸವೂ ಕರಗತವಾಗುವುದು. ಇದು ಹೇಗೆ ಸಾಧ್ಯವಾಗಿಸೋಣ ಎಂಬುವುದೇ ಈ ಶತಮಾನದ ಅತಿ ದೊಡ್ಡ ಸವಾಲು. – ಅಮ್ಮ
ನಾವು ವ್ಯಕ್ತಿಗಳನ್ನು ಪ್ರೇಮಿಸುವುದೂ, ವಸ್ತುಗಳನ್ನು ಉಪಯೋಗಿಸುವುದೂ ತಾನೆ ಮಾಡ ಬೇಕಾಗಿರುವುದು. ಆದರೆ ಇಂದು ನೇರ ವಿರುದ್ಧ ನಾವು ಮಾಡುತ್ತಿರುವುದು: ವ್ಯಕ್ತಿಗಳನ್ನು ಉಪಯೋಗಿಸುತ್ತೇವೆ; ವಸ್ತುಗಳನ್ನು ಪ್ರೀತಿಸುತ್ತೇವೆ. ಈ ತರ ಆದರೆ ಕುಟುಂಬಗಳ ಅವನತಿಯಾಗುತ್ತದೆ, ಸಮಾಜದ ತಾಳಲಯ ತಪ್ಪುತ್ತದೆ. – ಅಮ್ಮ
ಇವತ್ತು “ಯೌವನ” ಎಂದು ಹೇಳುವ ಕಾಲಘಟ್ಟ ಜೀವನದಲ್ಲಿ ಇಲ್ಲದಾಗಿ ಹೋಗುತ್ತಲಿದೆ. ಮನುಷ್ಯನು ಬಾಲ್ಯದಿಂದ ನೇರವಾಗಿ ಮುಪ್ಪಿನತ್ತ ಬೆಳೆಯುತ್ತಾನೆ. ದೇವರಾಗಿ ಮಾರ್ಪಡುವ ಸಾಧ್ಯತೆಯುಳ್ಳ ಮನುಷ್ಯನನ್ನು ಪಿಶಾಚಿಯಾಗಿ ಮಾರ್ಪಡಿಸುವ ಈ ಮದ್ಯಕ್ಕಿಂತ ದೊಡ್ಡ, ಬೇರೆ ವಿಷವಿಲ್ಲ ಅನ್ನುವ ಸತ್ಯವನ್ನು ಮಕ್ಕಳು ಎಂದಿಗೂ ಮರೆಯದಿರಲಿ.
“ನಾನು” ಎಂದೂ “ನನ್ನದು” ಎಂದೂ ಇರುವ ಇವತ್ತಿನ ನಮ್ಮ ಸಂಕುಚಿತ ದೃಷ್ಟಿಕೋಣವು “ನಾವು” ಎಂದೂ “ನಮ್ಮದು” ಎಂದೂ ಇರುವ ವಿಶಾಲ ಮನೋಭಾವಕ್ಕೆ ಮಾರ್ಗ ಪಲ್ಲಟವಾಗಬೇಕು. – ಅಮ್ಮ